ಭರತ್ಪುರ್:ಕೆಟ್ಟು ನಿಂತಿದ್ದ ಬಸ್​ಗೆ ಟ್ರಕ್​ ಒಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಮಂದಿ ಮೃತಪಟ್ಟು 12 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಭರತ್ಪುರ್​ನ ಜೈಪುರ-ಆಗ್ರಾ​ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಸೆ.13) ಮುಂಜಾನೆ 4.30ಕ್ಕೆ ನಡೆದಿದೆ.
ಅಪಘಾತವಾದ ಸಂದರ್ಭದಲ್ಲಿ ಬಸ್​, ರಾಜಸ್ಥಾನದ ಪುಸ್ಕರ್​ನಿಂದ ಉತ್ತರ ಪ್ರದೇಶದ ಬೃಂದಾವನಗೆ ತೆರಳುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೇತುವೆ ಮೇಲೆ ಬಸ್​ ಕೆಟ್ಟು ನಿಂತಿದ್ದ ಸಂದರ್ಭದಲ್ಲಿ ಚಾಲಕ ಮತ್ತು ಕೆಲ ಪ್ರಯಾಣಿಕರು ಬಸ್​ ಹಿಂಭಾಗದಲ್ಲಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್​, ಬಸ್​ಗೆ ಡಿಕ್ಕಿ ಹೊಡೆಯಿತು ಎಂದು ಅಪಘಾತದಿಂದ ಬಚಾವ್​ ಆದ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಸುಖೀ ಶಿಲ್ಪಾ ಶೆಟ್ಟಿ ; ಸೆ. 22ರಂದು ರಿಲೀಸ್ ಆಗಲಿದೆ ‘ಕೆಡಿ’ ನಟಿಯ ಚಿತ್ರ
ಇಂಧನ ಖಾಲಿಯಾದ್ದರಿಂದ ಬಸ್​, ಲಖನ್​ಪುರ್​ ಏರಿಯಾದ ಅಂತ್ರ ಫ್ಲೈಓವರ್​ ಮೇಲೆ ನಿಂತಿತ್ತು. ಈ ವೇಳೆ ಟ್ರಕ್​ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 5 ಪುರುಷರು ಮತ್ತು 6 ಮಹಿಳೆಯರು ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಸ್​ನ ದುರಸ್ತಿ ಕಾರ್ಯ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ನಿಂತಿತ್ತು. ಈ ವೇಳೆ ಕೆಲವು ಪ್ರಯಾಣಿಕರು ಬಸ್‌ನಲ್ಲಿದ್ದರೆ, ಇನ್ನು ಕೆಲವರು ಹೊರಗೆ ನಿಂತಿದ್ದರು. ಈ ವೇಳೆ ಟ್ರಕ್​ ಡಿಕ್ಕಿ ಹೊಡೆದಿದೆ ಎಂದು ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೃದುಲ್ ಕಚವಾ ಹೇಳಿದ್ದಾರೆ.(ಏಜೆನ್ಸೀಸ್​)
ರಹಸ್ಯವಾಗಿ ಪೋರ್ನ್​ ವಿಡಿಯೋಗಳನ್ನು ನೋಡುವುದು ಅಪರಾಧವೇ? ಕೇರಳ ಹೈಕೋರ್ಟ್​ನಿಂದ​ ಮಹತ್ವದ ತೀರ್ಪು

ಆಧಾರ್​ ತಿದ್ದುಪಡಿ ಮಾಡಿ ಅಪ್ರಾಪ್ತ ವಯಸ್ಕಳೊಂದಿಗೆ ಅದ್ಧೂರಿ ಮದ್ವೆ: ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ ಉಪಾಧ್ಯಕ್ಷ

ಬೃಹತ್ ಮೊತ್ತಕ್ಕೆ ಸೇಲಾಯ್ತು ‘ಜವಾನ್’ ಒಟಿಟಿ ಹಕ್ಕು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven − six =
Remember me
