ನವದೆಹಲಿ:ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಪ್ರಸ್ತಾಪಿತ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ದೇಶವ್ಯಾಪಿ ಕಳೆದೆರಡು ದಿನಗಳಿಂದ ಟ್ರಕ್ ಮತ್ತು ಬಸ್ ಚಾಲಕರು ಹಾಗೂ ಸಾರಿಗೆ ವಲಯದಿಂದ ನಡೆಸಲಾಗುತ್ತಿದ್ದ ಮುಷ್ಕರವನ್ನು ಮಂಗಳವಾರ ರಾತ್ರಿ ಹಿಂಪಡೆಯಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಆಲ್ ಇಂಡಿಯಾ ಮೋಟಾರ್ ಕಾಂಗ್ರೆಸ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಉದ್ದೇಶಿತ ಕಾನೂನಿನ ಕುರಿತು ರ್ಚಚಿಸಲಾಗಿದೆ. ಪ್ರಸ್ತಾಪಿತ ಕಾನೂನು ಅಂತಿಮವಲ್ಲ, ಅದನ್ನು ಜಾರಿಗೂ ತರಲಾಗಿಲ್ಲ. ಸಾರಿಗೆ ಸಂಘಟನೆಗಳೊಂದಿಗೆ ರ್ಚಚಿಸಿದ ಬಳಿಕವಷ್ಟೇ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಜತೆಗಿನ ಸಭೆಯಲ್ಲಿ ಭರವಸೆ ನೀಡಲಾಗಿದೆ.
ಸೋಮವಾರದಿಂದ ನಡೆಯುತ್ತಿದ್ದ ಮುಷ್ಕರ ಮಂಗಳವಾರದ ವೇಳೆಗೆ ಮತ್ತಷ್ಟು ತೀವ್ರತೆ ಪಡೆದಿತ್ತು. ಆಟೋ ಚಾಲಕರೂ ಕೂಡ ಪ್ರತಿಭಟನೆಗೆ ಕೈಜೋಡಿಸಿದ್ದರು. ಟ್ರಕ್ ಚಾಲಕರು ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿದರೆ, ಕೆಲವೆಡೆ ಪೊಲೀಸರೊಂದಿಗೆ ಜಟಾಪಟಿಗೂ ಕಾರಣವಾಗಿತ್ತು. ಸರಕು ಸಾಗಾಟ ಹಾಗೂ ದೈನಂದಿನ ಅಗತ್ಯ ವಸ್ತುಗಳು, ಮುಖ್ಯವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಕಂಡುಬಂದಿತ್ತು. 2000ಕ್ಕೂ ಅಧಿಕ ಬಂಕ್​ಗಳಲ್ಲಿ ದಾಸ್ತಾನು ಮುಗಿದು ಬಂದ್ ಮಾಡುವ ಹಂತದಲ್ಲಿದ್ದವು. ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಚಂಡಿಗಢ್ ಸೇರಿದಂತೆ ಹಲವು ರಾಜ್ಯಗಳಿಗೆ ಪ್ರತಿಭಟನೆ ವ್ಯಾಪಿಸಿತ್ತು. ಕಳೆದ 48 ಗಂಟೆಗಳಲ್ಲಿ ಔಷಧ, ಹಣ್ಣು-ತರಕಾರಿ, ಡೀಸೆಲ್-ಪೆಟ್ರೋಲ್ ಮತ್ತು ಸಿಎನ್​ಜಿಯಂಥ ಅಗತ್ಯ ವಸ್ತುಗಳು ವಿವಿಧ ರಾಜ್ಯಗಳಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಮುಷ್ಕರ ಇನ್ನೂ ವಿಸ್ತರಿಸಿದ್ದೇ ಆದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತ್ತು.
ಮಹಾರಾಷ್ಟ್ರದ ಕೆಲವೆಡೆ ಚಳವಳಿ ಹಿಂಸಾಚಾರಕ್ಕೆ ತಿರುಗಿತ್ತು. ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರು ಬಲಪ್ರಯೋಗಿಸಿದರು. ಮಹಾರಾಷ್ಟ್ರದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್​ನ ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಪೊಲೀಸರನ್ನು ನಿಯೋಜಿಸಿತ್ತು. ರಾಜಸ್ಥಾನದಲ್ಲೂ ಹೆದ್ದಾರಿ ತಡೆದು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುಷ್ಕರದ ಪರಿಣಾಮ ಮಧ್ಯಪ್ರದೇಶದ ಇಂದೋರ್​ನಲ್ಲಿ, ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಧರ್ಮಶಾಲಾದ ಪೆಟ್ರೋಲ್ ಬಂಕ್​ಗಳಲ್ಲಿ ಸರದಿ ಸಾಲಿನಲ್ಲಿ ವಾಹನಗಳು ನಿಂತಿದ್ದವು.
ಬಂಕ್​ಗಳಲ್ಲಿ ಇಂಧನ ಕೊರತೆ: ನಂದಗಾಂವ ತಾಲೂಕಿನ ಪಾಣೆವಾಡಿ ಗ್ರಾಮದಲ್ಲಿ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್​ನ ಇಂಧನ ಡಿಪೋಗಳು ಮತ್ತು ಎಲ್​ಪಿಜಿ ಫಿಲ್ಲಿಂಗ್ ಸ್ಟೇಷನ್​ಗಳಿದ್ದು, ಈ ಡಿಪೋಗಳಿಂದ ಇಂಧನವನ್ನು ರಾಜ್ಯದ ಅನೇಕ ಭಾಗಗಳಿಗೆ ಸರಬರಾಜು ಮಾಡಲಾಗುತ್ತದೆ. ಪರಿಸ್ಥಿತಿ ಸಹಜವಾಗದಿದ್ದರೆ ಜಿಲ್ಲೆಯ ಇಂಧನ ಪಂಪ್​ಗಳನ್ನು ಮುಚ್ಚಬೇಕಾಗುತ್ತದೆ ಎಂದು ಮರಾಠವಾಡ ಪ್ರದೇಶದ ಛತ್ರಪತಿ ಸಂಭಾಜಿನಗರ ನಗರದ ಪೆಟ್ರೋಲ್ ಪಂಪ್ ಡೀಲರ್​ಗಳ ಸಂಘ ಹೇಳಿದೆ.
ಕೇಂದ್ರದ ಹೊಸ ಕಾನೂನಿಗೆ ಡಾ. ವಿಜಯ ಸಂಕೇಶ್ವರ ಆಕ್ರೋಶಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಹೊಸ ಕಾನೂನಿನ ನಿಬಂಧನೆಗಳು ಅವೈಜ್ಞಾನಿಕವಾಗಿವೆ ಹಾಗೂ ಸರಕು ಸಾಗಣೆದಾರರ ಹಿತಾಸಕ್ತಿಗೆ ಮಾರಕವಾಗಿವೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾನೂನಿನ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಟ್ರಕ್ ಚಾಲಕರ ಮುಷ್ಕರಕ್ಕೆ ವಿಆರ್​ಎಲ್ ಲಾಜಿಸ್ಟಿಕ್ಸ್ ಸಂಸ್ಥೆ ಬೆಂಬಲ ನೀಡಿತ್ತು.
ಹೊಸ ಕಾನೂನಿನಲ್ಲಿ ಏನಿದೆ?ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹಿಟ್ ಅಂಡ್ ರನ್ ಕುರಿತ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುಮು ಒಪ್ಪಿಗೆಯೂ ಸಿಕ್ಕಿದೆ. ಹೊಸ ಕಾನೂನಿನ ಪ್ರಕಾರ, ಹಿಟ್ ಅಂಡ್ ರನ್ ಪ್ರಕರಣವನ್ನು ಎರಡು ವಿಧದಲ್ಲಿ ವಿಂಗಡಿಸಿದೆ. ನಿರ್ಲಕ್ಷ್ಯದಿಂದಾದ ಸಾವಿನ ವಿಚಾರದಲ್ಲಿ ಚಾಲಕ ಪ್ರಕರಣವನ್ನು ಸ್ಥಳೀಯ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟ್ ಗಮನಕ್ಕೆ ತಂದಲ್ಲಿ 5 ವರ್ಷಗಳ ಶಿಕ್ಷೆ ಹಾಗೂ ದಂಡಕ್ಕೆ ಗುರಿಯಾಗುತ್ತಾನೆ. ಒಂದು ವೇಳೆ ಸ್ಥಳದಿಂದ ಪರಾರಿಯಾದರೆ, ಚಾಲಕನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು -ಠಿ; 7 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಈಗ ಏನಿದೆ?:ಐಪಿಸಿ ಸೆಕ್ಷನ್ 279 (ನಿರ್ಲಕ್ಷ್ಯದ ಚಾಲನೆ), 304 ಎ (ನಿರ್ಲಕ್ಷ್ಯದಿಂದ ಸಾವು) ಮತ್ತು 338 (ಜೀವಕ್ಕೆ ಅಪಾಯ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತಿತ್ತು. 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಪೆಟ್ರೋಲ್, ಡೀಸೆಲ್ ಕೊರತೆಯ ಆತಂಕಮುಷ್ಕರದಿಂದಾಗಿ ಕಳೆದೆರಡು ದಿನಗಳಿಂದ ಇಂಧನ ಕೊರತೆ ಆತಂಕ ಎದುರಾಗಿತ್ತು. ಚಂಡೀಗಢದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ನಿರ್ಬಂಧ ಹೇರಿತ್ತು. ದ್ವಿಚಕ್ರ ವಾಹನಗಳಿಗೆ ಈಗ ಕೇವಲ 2 ಲೀಟರ್ ಅಥವಾ ಗರಿಷ್ಠ -ಠಿ; 200 ಇಂಧನವನ್ನು ಖರೀದಿಸಲು ಅನುಮತಿಸಿತ್ತು. ನಾಲ್ಕು ಚಕ್ರಗಳ ವಾಹನಗಳಿಗೆ 5 ಲೀಟರ್ ಅಥವಾ ಗರಿಷ್ಠ ಮೌಲ್ಯ -ಠಿ; 500ಗೆ ಸೀಮಿತವಾಗಿತ್ತು.
ಹೊಸ ಕಾನೂನು ಸಾರಿಗೆ ಉದ್ಯಮವನ್ನು ಅಪಾಯಕ್ಕೆ ತಳ್ಳುತ್ತಿದೆ. ಭಾರತೀಯ ದಂಡ ಸಂಹಿತೆ 2023ರ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಟ್ಟುನಿಟ್ಟಾದ ನಿಬಂಧನೆಗಳನ್ನು ಭಾರತದ ರಸ್ತೆ ಸಾರಿಗೆ ವಲಯವು ಒಪ್ಪುವುದಿಲ್ಲ.
| ಅಮೃತಲಾಲ್ ಮದನ್ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ
ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಕೇಸ್​: ಜನಕ್ಕೆ ಗೊತ್ತಿದ್ದು ಬಾಬುರೆಡ್ಡಿ ಮಾತ್ರ, ಕುಟುಂಬದ ನಡೆ ಬೇಸರ ತರಿಸಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
