ಬೆಂಗಳೂರು:ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್​ಗೆ ಪ್ರತಿದಿನ ವಿಮಾನಗಳು ಹಾರಾಟ ನಡೆಸಲಿವೆ.
ಬೆಂಗಳೂರು ಮೂಲದ ಟ್ರೂ ಜೆಟ್​ ಸಂಸ್ಥೆಯು ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಇದು ಕೇಂದರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್​ ಯೋಜನೆಯಿಂದ ಸಾಧ್ಯವಾಗಿದೆ.
ಸಂಸ್ಥೆಯು ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್​ಗೆ ಪ್ರತಿದಿನ ಆರು ವಿಮಾನಗಳ ಮೂಲಕ ಹಾರಾಟ ನಡೆಸಲಿದೆ. 72 ಆಸಗಳ ಸಾಮಥ್ಯವುಳ್ಳ ವಿಮಾನಗಳು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಟ್ರೂ ಜೆಟ್​ ಸಂಸ್ಥೆಯು ಉಡಾನ್​ ಯೋಜನೆಯಡಿ ಈಗಾಗಲೇ 32 ವಿಮಾನಗಳನ್ನು ಕಾರ್ಯನಿರತಗೊಳಿಸಿದೆ. ಈಗ ಈ ಮೂರು ವಿಮಾನಗಳ ಹಾರಾಟಕ್ಕೆ ಚಾಲನೆ ನೀಡುವ ಮೂಲಕ ಒಟ್ಟು 38 ವಿಮಾನಗಳು ಹಾರಾಟ ನಡೆಸುತ್ತಿವೆ.
ಉಡಾನ್​ ಯೋಜನೆಯ ಮೂರನೇ ಹಂತದಲ್ಲಿ ಈ ವಿಮಾನ ಯಾನ ಸೇವೆಯನ್ನು ಆರಂಭಿಸಲಾಗಿದೆ. 2017ರಲ್ಲಿ ಉಡಾನ್​ ಯೋಜನೆ ಜಾರಿಯಾಗಿತ್ತು. ಟ್ರೂ ಜೆಟ್​ ಸಂಸ್ಥೆಯು ಏಪ್ರಿಲ್​ 2015ರಿಂದ ವಿಮಾನ ಯಾನ ಸೇವೆ ಆರಂಭಿಸಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
