ನ್ಯೂಯಾರ್ಕ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾಗಿ ಅವರ ಸಹೋರನ ಮಗಳು ಪುಸ್ತಕವೊಂದನ್ನು ಬರೆದಿದ್ದು, ಅದು ಬಿಡುಗಡೆಯಾಗುವ ಮುನ್ನವೇ ಒಂಬತ್ತೂವರೆ ಲಕ್ಷ ಪ್ರತಿಗಳು ಮಾರಾಟವಾಗಿವೆ!
ಈ ಕುರಿತು ಪುಸ್ತಕದ ಪ್ರಕಾಶಕರೇ ಮಾಹಿತಿ ನೀಡಿದ್ದಾರೆ. ಈ ಪುಸ್ತಕದ ಹೆಸರು ‘ಟೂ ಮಚ್ ಆ್ಯಂಡ್‌ ನೆವರ್‌ ಇನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ (ಅತಿಯಾದ ಹಾಗೂ ಎಂದೂ ಮುಗಿಯದ: ಹೇಗೆ ನನ್ನ ಕುಟುಂಬ ವಿಶ್ವದ ಅತ್ಯಂತ ಭಯಾನಕ ಮನುಷ್ಯನನ್ನು ಸೃಷ್ಟಿಸಿದೆ).
ಡೊನಾಲ್ಡ್‌ ಟ್ರಂಪ್‌ ಅವರ ಅಣ್ಣ ಮೇರಿ ಟ್ರಂಪ್‌ ಅವರು ಬರೆದಿರುವ ಈ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಬಿಂಬಿಸಿದ್ದಾರೆ.
ಇದನ್ನೂ ಓದಿ:ಫೇಸ್‌ಬುಕ್‌ ಗೆಳತಿಗಾಗಿ ಪಾಕ್‌ಗೆ ಹೊರಟು ಗಡಿಯಲ್ಲಿ ಸಿಕ್ಕಿಬಿದ್ದ ಪ್ರೇಮಿ!
ಅಡ್ವಾನ್ಸ್‌ ಬುಕಿಂಗ್‌, ಆಡಿಯೊ ಮತ್ತು ಡಿಜಿಟಲ್ ರೂಪಗಳು ಸೇರಿದಂತೆ 9,50,000 ಪ್ರತಿಗಳು ಕಳೆದ ಮಂಗಳವಾರ ಮಾರಾಟವಾಗಿವೆ ಹಾಗೂ ಇದು ಪ್ರಕಾಶನ ಸಂಸ್ಥೆ ಸೈಮನ್ ಆಯಂಡ್ ಶಸ್ಟರ್ ನ ದಾಖಲೆಯಾಗಿದೆ ಎಂದು ಪ್ರಕಾಶನ ಸಂಸ್ಥೆ ಹೇಳಿದೆ.
ಇನ್ನೂ ಹೆಚ್ಚಿನ ಪ್ರತಿಗಳಿಗೆ ಬೇಡಿಕೆ ಬಂದಿದೆ. ಅಮೆರಿಕದ ಮಾರುಕಟ್ಟೆಯೊಂದಕ್ಕೇ 11.5 ಲಕ್ಷ ಪ್ರತಿಗಳನ್ನು ಪ್ರಕಾಶಕರು ತೆಗೆದಿರಿಸಿದ್ದಾರೆ. ಆನ್‌ಲೈನ್‌ ಮಾರಾಟ ಕಂಪೆನಿ ಅಮೇಜಾನ್‌ ಕೆನಡಾ ಮತ್ತು ಆಸ್ಟ್ರೇಲಿಯಗಳ ಮಾರಾಟ ಪಟ್ಟಿಯಲ್ಲಿಯೂ ಪುಸ್ತಕವು ಮೊದಲ ಸ್ಥಾನದಲ್ಲಿದೆ.
ಈ ಮಧ್ಯೆಯೇ, ಈ ಪುಸ್ತಕವು ಸುಳ್ಳುಗಳ ಸರಮಾಲೆ ಎಂಬುದಾಗಿ ಶ್ವೇತಭವನ ಪುಸ್ತಕವನ್ನು ಟೀಕಿಸಿದೆ.
ಕರೊನಾ: ಒಂದೇ ದಿನ 115 ಮಂದಿ ಸಾವು- ಜಿಲ್ಲೆಗಳ ವಿವರ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
