ಅಮೆರಿಕದ ವೈಟ್​ ಹೌಸ್​ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್, ಪ್ರಧಾನಿ ಕಚೇರಿಗಳನ್ನು ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿತ್ತು. ಆದರೆ ನಿನ್ನೆ ಅದು ಎಲ್ಲವನ್ನೂ ಅನ್​ಫಾಲೋ ಮಾಡಿತ್ತು. ಇದೇ ಒಂದು ಸುದ್ದಿಯಾಗಿತ್ತು.
ಆಗ ಫಾಲೋ ಮಾಡಿದ್ದು ಯಾಕೆ? ಈಗ ಅನ್​ಫಾಲೋ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಅಮೆರಿಕ ಶ್ವೇತ ಭವನ ಅದಕ್ಕೀಗ ಸ್ಪಷ್ಟನೆ ನೀಡಿದೆ.
ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ಬೇರೆ ದೇಶಗಳಿಗೆ ಭೇಟಿ ಕೊಟ್ಟಾಗ ವೈಟ್​ ಹೌಸ್​ ಆಯಾ ಆತಿಥೇಯ ದೇಶಗಳ ನಾಯಕರು, ಪ್ರಮುಖ ಕಚೇರಿಗಳನ್ನು ಟ್ವಿಟರ್​ನಲ್ಲಿ ಫಾಲೋ ಮಾಡುತ್ತದೆ. ಆ ದೇಶಗಳ ನಾಯಕರು, ಕಚೇರಿಗಳು ಮಾಡುವ ಟ್ವೀಟ್​ಗಳನ್ನು ರೀಟ್ವೀಟ್​ ಮಾಡಿಕೊಳ್ಳುವ ಸಲುವಾಗಿ ವೈಟ್​ ಹೌಸ್ ಈ ಕ್ರಮ ಅನುಸರಿಸುತ್ತದೆ. ಆದರೆ ಇದು ಸೀಮಿತ ಅವಧಿಗೆ ಮಾತ್ರ ಎಂದು ವೈಟ್​ ಹೌಸ್ ಹೇಳಿದೆ.
ಫೆಬ್ರವರಿ ಕೊನೇ ವಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವೈಟ್​ ಹೌಸ್​ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ಕಚೇರಿ, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತದಲ್ಲಿರುವ ಯುಎಸ್​ನ ರಾಯಭಾರಿ ಕಚೇರಿಗಳನ್ನು ಟ್ವಿಟರ್​ನಲ್ಲಿ ಫಾಲೋ ಮಾಡಿಕೊಂಡಿತ್ತು. ಈ ಎಲ್ಲ ಟ್ವಿಟರ್​ ಅಕೌಂಟ್​ಗಳನ್ನೂ ವೌಟ್​ ಹೌಸ್ ಈ ವಾರ ಅನ್​ಫಾಲೋ ಮಾಡಿದೆ.
ಹೀಗೆ ಅನ್​ಫಾಲೋ ಮಾಡಿದ್ದ ಬಗ್ಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ನಿರಾಶೆ ವ್ಯಕ್ತಪಡಿಸಿದ್ದರು. ವೈಟ್​ಹೌಸ್​ ಯಾಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನೆಲ್ಲ ಅನ್​ಫಾಲೋ ಮಾಡಿದೆ. ನನಗೆ ನಿರಾಶೆ ಆಗಿದೆ ಎಂದಿದ್ದರು. ಅಲ್ಲದೆ, ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದರು.
ಇದು ಬರೀ ರಾಹುಲ್​ ಗಾಂಧಿಯವರ ಪ್ರಶ್ನೆಯಾಗಿರದೆ, ಹಲವರ ಪ್ರಶ್ನೆಯಾಗಿತ್ತು. ಈಗ ಅನುಮಾನಕ್ಕೆ ವೈಟ್ ಹೌಸ್ ತೆರೆ ಎಳೆದಿದೆ. ಸಾಮಾನ್ಯವಾಗಿ ಶ್ವೇತಭವನ ಯುಎಸ್​ನ ಹಿರಿಯ ಅಧಿಕಾರಿಗಳ ಟ್ವಿಟರ್ ಅಕೌಂಟ್​ನ್ನು ಫಾಲೋ ಮಾಡುತ್ತದೆ. ಹಾಗೇ ಬೇರೆ ದೇಶಗಳಿಗೆ ಅಧ್ಯಕ್ಷರು ಪ್ರವಾಸ ಮಾಡಿದ ಸಂದರ್ಭದಲ್ಲಿ ಸ್ವಲ್ಪ ಅವಧಿಗೆ ಆ ದೇಶಗಳ ಪ್ರಮುಖರನ್ನು ಫಾಲೋ ಮಾಡುತ್ತದೆ ಎಂದು ಹೇಳಿದೆ. (ಏಜೆನ್ಸೀಸ್​)
ಇದನ್ನೂ ಓದಿ:ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
