ಕೈ ಆಕಾರದಲ್ಲಿ ಕೆತ್ತಲಾದ ದೊಡ್ಡದಾದ ಮರದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು…ಈ ಅಪರೂಪದ ಮರ ಇರುವುದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡೋಗ್ರಿಪೊರಾದಲ್ಲಿ ಎಂದು ಪ್ರತಿಪಾದಿಸಲಾಗುತ್ತಿದೆ. ಉತ್ತರ ಕಾಶ್ಮೀರದ ಡೋಗ್ರಿಪೊರಾದಲ್ಲಿರುವ ಮರದ ಕೆತ್ತನೆ…ಇಂದು ಫೋಟೋದೊಂದಿಗೆ ಕ್ಯಾಪ್ಷನ್​ ಇದೆ.
ಆದರೆ ಈ ಕೈ ಆಕಾರದಲ್ಲಿ ಕೆತ್ತಿರುವ ಮರ ಇರುವುದು ಕಾಶ್ಮೀರದಲ್ಲಿ ಅಲ್ಲ ಎಂಬ ವಿಷಯ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​​ನಿಂದ ಗೊತ್ತಾಗಿದೆ. ಅಷ್ಟಕ್ಕೂ ಈ ಮರ ನಮ್ಮ ದೇಶದಲ್ಲೇ ಇಲ್ಲ…ಲಂಡನ್​​ನ ವೇಲ್ಸ್​​ನಲ್ಲಿರುವ ‘ದಿ ಜೈಂಟ್ ಹ್ಯಾಂಡ್ ಆಫ್ ವೈರ್ನ್ವಿ (ವೈರ್ನ್ವಿ ಸರೋವರದ ಅತಿದೊಡ್ಡ ಕೈ)’ ಎಂಬುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಫೋಟೋವನ್ನು ರಿವರ್ಸ್ ಸರ್ಚಿಂಗ್​ಗೆ ಒಳಪಡಿಸಿದಾಗ ಅದು ಲಂಡನ್​​ನಲ್ಲಿ ಇರುವ ಮರ ಎಂಬ ಸತ್ಯ ಗೊತ್ತಾಗಿದೆ. ವೈರ್ನ್ವಿ ಸರೋವರದ ದಡದಲ್ಲಿರುವ ಇದು ಯುಕೆಯ ಅತ್ಯಂತ ಎತ್ತರದ ಮರವಾಗಿತ್ತು. ಆದರೆ ಕೆಲವು ಸುರಕ್ಷತಾ ಕ್ರಮಗಳಿಗಾಗಿ ಅದನ್ನು ಕಡಿಯಲಾಯಿತು. ಕಡಿದ ಮರವನ್ನು ಕಲಾವಿದ ಸೈಮನ್​ ಒ’ರೂರ್ಕೆ ಎಂಬುವರು ದೈತ್ಯ ಕೈ ಆಕಾರದಲ್ಲಿ ಕೆತ್ತನೆ ಮಾಡಿ, ಸುಂದರಗೊಳಿಸಿದ್ದಾರೆ ಎನ್ನಲಾಗಿದೆ. ಹಾಗೇ ಈ ಮರದ ಬಗ್ಗೆ ಬಿಬಿಸಿ ನ್ಯೂಸ್​ ಕೂಡ ಆರ್ಟಿಕಲ್​ ಬರೆದಿತ್ತು. 20 ಅಂತಸ್ತಿನ ಕಟ್ಟಡಗಳಿಗಿಂತಲೂ ಈ ಮರ ಎತ್ತರವಾಗಿತ್ತು..ಸುಮಾರು 209 ಅಡಿ ಎತ್ತರವಿತ್ತು ಎಂಬುದು ಆ ಲೇಖನದಲ್ಲಿ ಉಲ್ಲೇಖವಾಗಿದೆ. ಹಾಗೇ ಈಗಿರುವ ಕೈ ಆಕಾರದ ಮರ 50 ಅಡಿ ಎತ್ತರವಿದೆ ಎನ್ನಲಾಗಿದೆ. (ಏಜೆನ್ಸೀಸ್​)




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
