ನವದೆಹಲಿ:ಕೋಟ್ಯಂತರ ರೂಪಾಯಿ ಸಾಲ ಮರುಪಾವತಿಸದೇ ಬ್ರಿಟನ್​ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಬೇಕಾದರೆ ಮೊದಲು ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು ಎಂದು ಬ್ರಿಟನ್ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಬ್ಯಾಂಕುಗಳಿಗೆ ಸಾಲ ಮರುಪಾವತಿಸದೇ ವಂಚಿಸಿರುವ ಉದ್ಯಮಿ ವಿಜಯ ಮಲ್ಯ ತನ್ನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಮಾಡಿದ ಮನವಿಯ ವಿರುದ್ಧ ಮೇ ತಿಂಗಳಲ್ಲಿ ಬ್ರಿಟಿಷ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ಪ್ರಗತಿಯಲ್ಲಿದ್ದು, ಮಲ್ಯರನ್ನು ಗಡಿಪಾರು ಮಾಡಬೇಕಾದರೆ ಕೆಲವು ಅಗತ್ಯ ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು. ಇದು ಕಾನೂನಿಗೆ ಸಂಬಂಧಪಟ್ಟ ವಿಚಾರ. ಈಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ ಎಂದು ಬ್ರಿಟನ್​ನ ಆ್ಯಕ್ಟಿಂಗ್ ಹೈಕಮಿಷನರ್​ ಜ್ಯಾನ್ ಥಾಮ್ಸನ್​ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀ ದೇವೀರಮ್ಮ ಬೆಟ್ಟ ಏರೋದಕ್ಕೆ ಈ ಬಾರಿ ಭಕ್ತರಿಗೆ ಇಲ್ಲ ಅವಕಾಶ
ಆನ್​ಲೈನ್ ಮೀಡಿಯಾ ಬ್ರೀಫಿಂಗ್ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಬ್ರಿಟನ್ ಈ ಕಾನೂನು ವಿಚಾರಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇದನ್ನು ಶೀಘ್ರವೇ ಬಗೆಹರಿಸುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಥಾಮ್ಸನ್ ಸ್ಪಷ್ಟಪಡಿಸಿದರು. (ಏಜೆನ್ಸೀಸ್)
43,000ದ ಗಡಿ ದಾಟಿತು ಸೆನ್ಸೆಕ್ಸ್, ನಿಫ್ಟಿ 12,600ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
