ದೆಹಲಿ:ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಖದೀಮರು ಬಳಸುವ ತಂತ್ರ ಹಲವು. ಹೊಟ್ಟೆಯಲ್ಲಿ, ಗುದದ್ವಾರದಲ್ಲಿ, ಊಟದ ಡಬ್ಬಿ, ಕಾಲಿಗೆ ಹಾಕಿದ್ದ ಶೂ ಒಳಗೆ, ವಾಟರ್​ ಬಾಟಲಿ, ಬ್ಯಾಗ್​ನಲ್ಲಿ… ಹೀಗೆ ಹಲವು ಮಾರ್ಗದ ಮೂಲಕ ಯಾರಿಗೂ ಅನುಮಾನ ಬಾರದಂತೆ ಚಿನ್ನ ಸಾಗಟಕ್ಕೆ ಯತ್ನಿಸಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದೀಗ ಮತ್ತೊಬ್ಬ ಗೋಲ್ಡ್ ಸ್ಮಗ್ಲರ್​ ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ ದುಬೈನಿಂದ ಬರೋಬ್ಬರಿ 505 ಗ್ರಾಂ ತೂಗದ ಚಿನ್ನದ ಬಿಸ್ಕತ್ ತಂದ ವಾಮಮಾರ್ಗದ ಬಗ್ಗೆ ಕೇಳಿದ್ರೆ ನೀವೂ ಕೂಡ ಶಾಕ್​ ಆಗ್ತೀರಿ.
ಇದನ್ನೂ ಓದಿರಿಕಿರುಕುಳಕ್ಕೆ ಯುವ ವಕೀಲ ಬಲಿ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ
ಬ್ಯಾಟರಿ ಬದಲಿಸುವ ಮೊಬೈಲ್ ಫೋನ್‌ನಲ್ಲಿ ಬರೋಬ್ಬರಿ 505 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ತಂದಿದ್ದಾನೆ. ಮೊಬೈಲ್​ ಕಳ್ಳನಿಗೂ ಅದರಲ್ಲಿ ಚಿನ್ನ ಇದೆ ಕದಿಯೋಣ ಅನ್ನಿಸಲ್ಲ. ಅಷ್ಟರಮಟ್ಟಿಗೆ ಪ್ಲ್ಯಾನ್​ ಮಾಡಿಕೊಂಡು ಆತ ಮೊಬೈಲ್​ನಲ್ಲಿ ಚಿನ್ನ ಇಟ್ಟುಕೊಂಡು ಸಾಮಾನ್ಯನಂತೆ ವಿಮಾನದಲ್ಲಿ ಬಂದಿದ್ದಾನೆ.
ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಮೊಬೈಲ್​ನಲ್ಲಿ ಚಿನ್ನ ಇರುವುದು ಬಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
https://www.facebook.com/VVani4U/videos/337184424089761
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
