ತಿರುಪತಿ:ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ 126 ಆಸ್ತಿಗಳನ್ನು 1974ರಿಂದ ಹರಾಜು ಮಾಡಲಾಗಿದೆ. ಆಗಿಲ್ಲದ ವಿರೋಧ ಈಗ ಏಕೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಪ್ರಶ್ನಿಸಿದೆ. ತಮಿಳುನಾಡಿನಲ್ಲಿರುವ 23 ಸ್ಥಿರಾಸ್ತಿಗಳನ್ನು ಹರಾಜು ಹಾಕುವ ಟಿಟಿಡಿ ನಿರ್ಧಾರವನ್ನು ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ಖಂಡಿಸಿವೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿವೆ. ದೇವಾಲಯಕ್ಕೆ ಭಕ್ತರು ನೀಡಿರುವ ಸ್ಥಿರಾಸ್ತಿಗಳನ್ನು ನಿರ್ವಹಿಸಲು ಆಗದ ಪಕ್ಷದಲ್ಲಿ ಹರಾಜು ಮೂಲಕ ಮಾರಾಟ ಮಾಡಲು ಕಾನೂನು ಪ್ರಕಾರ ಅವಕಾಶ ಇದೆ. ಟಿಟಿಡಿ ಕೂಡ ನಿರ್ವಹಿಸಲು ಆಗದ 129 ಸ್ಥಿರಾಸ್ತಿಗಳನ್ನು 1974ರಿಂದ 2014ರವರೆಗೆ ಮಾರಾಟ ಮಾಡಿದೆ. ಆಗ ವ್ಯಕ್ತವಾಗದ ಆಕ್ಷೇಪ ಈಗೇಕೆ ಎಂದು ಟಿಟಿಡಿ ಅಧ್ಯಕ್ಷ ವೈ.ಎಸ್.ಸುಬ್ಬಾರೆಡ್ಡಿ ಪ್ರಶ್ನಿಸಿದ್ದಾರೆ.
ತಮಿಳುನಾಡಿನಲ್ಲಿ ಹರಾಜು ಹಾಕಲು ಗುರುತಿಸಲಾಗಿರುವ 23 ಆಸ್ತಿಗಳ ಒಟ್ಟು ಮೌಲ್ಯ 1.50 ಕೋಟಿ ರೂ. ಎಂದು ಅಂದಾಜಿಲಾಗಿದೆ. ಈ ನಿರ್ಧಾರವನ್ನು ಫೆ. 29ರಂದು ಕೈಗೊಳ್ಳಲಾಗಿದೆ. ನಿರ್ವಹಣೆ ಇಲ್ಲದ ಅನೇಕ ಆಸ್ತಿಗಳು ಒತ್ತುವರಿ ಆಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
