ಫರಿದಾಬಾದ್:ಮದುವೆ ಹೋಗಬೇಕು ಎಂದು ಜನರಲ್ ಟಿಕೆಟ್​ ಪಡೆದ ಮಹಿಳೆ ತಿಳಿಯದೆ ಎಸಿ ಬೋಗಿ ಹತ್ತಿದ್ದಕ್ಕೆ ಕುಪಿತಗೊಂಡ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) 40 ವರ್ಷದ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ತಳ್ಳಿದ ಭೀಕರ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಲು ತಾತ್ಕಾಲಿಕ ಅವಕಾಶ
ಘಟನೆಯ ವಿವರ: ಜನರಲ್ ಟಿಕೆಟ್‌ ಪಡೆದ ಮಹಿಳೆಯೊಬ್ಬರು ಗೊತ್ತಿಲ್ಲದೆ ಎಸಿ ಕೋಚ್‌ಗೆ ಹತ್ತಿದ್ದಾರೆ. ಚೆಕ್ಕಿಂಗ್ ಮಾಡಲು ಪ್ರತಿ ಬೋಗಿಗೆ ಬರುತ್ತಿದ್ದ ಟಿಟಿಇ, ಆಕೆಯ ಬ್ಯಾಗ್ ಮತ್ತು ಇತರ ವಸ್ತುಗಳನ್ನು ಕಂಡು ಗದರಿದ್ದಾನೆ. ತದನಂತರ ಟಿಕೆಟ್ ನೋಡಿ, ಇಲ್ಲಿ ಏಕೆ ಹತ್ತಿದೆ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಮಹಿಳೆ ದಂಡವನ್ನು ತೆಗೆದುಕೊಳ್ಳಿ ತಿಳಿಯಲಿಲ್ಲ ಎಂದರು ಸುಮ್ಮನಾಗದ ಅಧಿಕಾರಿ, ಆಕೆಯ ಲಗೇಜ್ ಎಸೆದು, ಏಕಾಏಕಿ ಚಲಿಸುವ ರೈಲಿನಿಂದ ಹೊರದಬ್ಬಿದ್ದಾನೆ.
ಮೊದಲು ಮಹಿಳೆಯ ಸಾಮಾನು ಸೇರಿದಂತೆ ಇತರೆ ವಸ್ತುಗಳನ್ನು ಹೊರಗೆ ಎಸೆದ ಟಿಟಿಇ, ಬಳಿಕ ಚಲಿಸುವ ರೈಲನಿಂದ ಆಕೆಯನ್ನು ತಳ್ಳಿದ್ದಾನೆ. ರೈಲಿನಿಂದ ಕೆಳಕ್ಕೆ ಬಿದ್ದ ಮಹಿಳೆ ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿದ್ದು, ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರಾಮೇಶ್ವರ ಕೆಫೆಯಲ್ಲಿ ಸ್ಫೋಟ; ಆರೋಪಿಯ ಶೀಘ್ರ ಬಂಧನ- ಗೃಹ ಸಚಿವ ಪರಮೇಶ್ವರ
ಮದುವೆ ಸಮಾರಂಭಕ್ಕೆಂದು ರೈಲು ಹತ್ತಿದ ಮಹಿಳೆ ಝಾನ್ಸಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ಮಹಿಳೆಯ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ. ಪ್ರಕರಣದ ಬೆನ್ನಲ್ಲೇ ಟಿಟಿಇ ವಿರುದ್ಧ ಜಿಆರ್‌ಪಿಯಿಂದ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆದರೆ ಈ ಘಟನೆ ನಡೆದ ಕೆಲವೇ ಸಮಯದಲ್ಲಿ ಟಿಟಿಇ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ट्रेन के AC कोच में चढ़ी महिला को TTE ने चलती ट्रेन से धक्का दे दिया
महिला ट्रेन और प्लेटफार्म के बीच में फंसकर घायल हो गई
हरियाणा के फरीदाबाद की घटना
जनरल टिकट लेकर AC कोच में चढ़ने से नाराज था TTE#TTE#railways#Haryana#FaridabadJhelum Express@RailMinIndia@RailwaySevapic.twitter.com/FvVjOpgJJW
— Writenownews (@news_write13086)March 3, 2024

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಭಾವನಾ ಎಂದು ಗುರುತಿಸಲಾಗಿದ್ದು, ಆಕೆ ಫರೀದಾಬಾದ್‌ನ ಎಸ್‌ಜಿಜೆಎಂ ನಗರದ ನಿವಾಸಿ ಎಂದು ತಿಳಿದುಬಂದಿದೆ. ಮಹಿಳೆ ರೈಲಿನಿಂದ ಕೆಳಗೆ ಬಿದ್ದು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿ ರೈಲು ಆಕೆಯನ್ನು ರಕ್ಷಿಸಿದ್ದಾರೆ,(ಏಜೆನ್ಸೀಸ್).
ಮದುವೆಗೂ ಮುನ್ನ ಆರೋಗ್ಯ ಸಮಸ್ಯೆ ತೋಡಿಕೊಂಡ ಅನಂತ್​; ಮಗನ ಮಾತಿಗೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 7 =
Remember me
