ಪಟ್ನಾ:ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಗಳಿಗೆ ಜನರ ನಡುವೆ ಗಲಾಟೆಯಾಗುತ್ತಿದ್ದು, ಆಗಿಂದಾಗೆ ಇದು ಸಖತ್​ ಸೌಂಡ್​ ಮಾಡುತ್ತಿರುತ್ತವೆ. ಇದೀಗ ರೈಲಿನಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಜೊತೆ ಜಗಳವಾಡಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮಹಿಳೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಆಕೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
TW: Abusive LanguageWoman resorts to extreme abuse and threats against a man having proper ticket only because he spread his legs on his own seat & asked woman to get up.This is frightening 🤯pic.twitter.com/DsQ4Z6yPD6
ಇದನ್ನೂ ಓದಿ:SC-ST ನೌಕರರಿಗೆ ಬಡ್ತಿ ಮೀಸಲಾತಿ ಜಾರಿ ಮಾಡಿ; ಪ್ರಧಾನಿಗೆ ಪತ್ರ ಬರೆದ ಪ್ರಕಾಶ್​ ಅಂಬೇಡ್ಕರ್
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಜನರಿಂದ ತುಂಬಿರುವ ರೈಲಿನಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದು, ತಾವು ಸ್ಲೀಪರ್​ ಕೋಚ್​ನಲ್ಲಿ ರಿಸರ್ವ್​ ಮಾಡಿದ ಸೀಟಿನಲ್ಲಿ ಮಲಗಿದ್ದಾರೆ. ಈ ವೇಳೆ ರೈಲು ಹತ್ತುವ ಮಹಿಳೆಯೊಬ್ಬರು ವ್ಯಕ್ತಿಗೆ ಜರುಗುವಂತೆ ಹೇಳುತ್ತಾಳೆ. ಅದಕ್ಕೆ ಆತ ಒಪ್ಪದಿದ್ದಾಗ ನಿನ್ನನ್ನು ನೀನಿ ಏನೆಂದುಕೊಂಡಿದ್ದೀಯಾ ಈ ಟ್ರೈನ್​ ಏನು ನಿಮ್ಮ ಅಪ್ಪನ ಮನೆ ಆಸ್ತೀನಾ ಎಂದು ಮಹಿಳೆ ಜಗಳ ಶುರು ಮಡುತ್ತಾಳೆ. ವ್ಯಕ್ತಿ ಉತ್ತರಕ್ಕೆ ಮತ್ತಷ್ಟು ಸಿಟ್ಟಿಗೆದ್ದ ಮಹಿಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಟಿಕೆಟ್​ ತೋರಿಸು ಎಂದು ಪ್ರಶ್ನಿಸುತ್ಥಾಳೆ. ಬಳಿಕ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಹಿಳೆಯ ನಡೆಗೆ ಹಲವರು ಕಿಡಿಕಾರಿದ್ದಾರೆ. ಈ ರೀತಿಯ ನಿಂದನೀತಯ ಭಾಷೆ ಸ್ವೀಕಾರ್ಹಾವಲ್ಲ. ಇದನ್ನು ನೋಡುತ್ತಿರುವ ಜನ ಗಲಾಟೆಯನ್ನು ನಿಲ್ಲಿಸದೆ ಫೋನಿನಲ್ಲಿ ರೆಕಾರ್ಡ್​ ಮಾಡುತ್ತಿರುವುದು ತಪ್ಪು ಎಂದು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಸೀಟಿಗಾಗಿ ಇವರಿಬ್ಬರ ಕಿತ್ತಾಟ ರೈಲಿನಲ್ಲಿದ್ದವರಿಗೆ ಭರ್ತಿ ಮನರಂಜನೆ ನೀಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
