ನವದೆಹಲಿ:ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ತುನಿಷಾ ಶರ್ಮಾ ತಾಯಿ ಕೊಟ್ಟ ದೂರಿನ ಮೇರೆಗೆ ಈಗಾಗಲೇ ನಟ ಶಿಜಾನ್‌ ಖಾನ್​ನನ್ನು ಬಂಧನವಾಗುತ್ತಿದ್ದಂತೆ ಹೆಚ್ಚಿನ ತನಿಖೆಗೆ ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ.
ಇದೀಗ ತುನಿಷಾ ಶರ್ಮಾಳ ಅಂಕಲ್ ಪವನ್ ಶರ್ಮಾ ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಶೀಜನ್ ಖಾನ್​ನೊಂದಿಗಿನ ಸ್ನೇಹ ಬೆಳೆಯುತ್ತಿದ್ದಂತೆ ಆಕೆ ಹಿಜಾಬ್ ಧರಿಸಲು ಆರಂಭಿಸಿದ್ದಳು ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಹೊರಬೀಳುತ್ತಿದ್ದಂತೆ ತನಿಷಾ ಶರ್ಮಾ ಲವ್ ಜಿಹಾದ್​ಗೆ ಒಳಗಾಗಿದ್ದಳಾ ಎಂಬ ಅನುಮಾನ ಮೂಡುತ್ತಿದ್ದೆ. ಆತ್ಮಹತ್ಯೆ ಕೇಸ್​ಗೆ ಲವ್ ಜಿಹಾದ್ ಕಳಂಕವೂ ಅಂಟಿಕೊಳ್ಳುತ್ತಿದ್ದಂತೆ ಪ್ರಕರಣದ ಬಗ್ಗೆ ಜನರ ಕುತೂಹಲವೂ ಕೆರಳುತ್ತಿದೆ.
ಶೀಜನ್ ಖಾನ್ ತುನಿಷಾ ಶರ್ಮಾ ಹೊರತಾಗಿ ಇನ್ನಷ್ಟು ಹುಡುಗಿರಯೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಎಂದು ಪವನ್ ಶರ್ಮಾ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಶಿಜಾನ್‌ರನ್ನು ಬಂಧಿಸಲಾಗಿದ್ದು, ಭಾರತೀಯ ದಂಡಸಂಹಿತೆ 306ರಡಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 2 =
Remember me
