ವಾರಾಣಸಿ:ಖ್ಯಾತ ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಸಾವು ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಆಕ್ಷಾಂಕ್ಷಾ ಉಳಿದುಕೊಂಡಿದ್ದ ರೂಮ್​ನಲ್ಲಿ 17 ನಿಮಿಷಗಳ ಕಾಲ ಇದ್ದ ಯುವಕನ ಪತ್ತೆಗೆ ಉತ್ತರ ಪ್ರದೇಶದ ಪೊಲೀಸರು ಬಲೆ ಬೀಸಿದ್ದಾರೆ.
ಆರಂಭದಲ್ಲಿ ಆಕಾಂಕ್ಷಾ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದಾಗ್ಯೂ ಪೊಲೀಸರಿಗೆ ಆಕೆ ಉಳಿದುಕೊಂಡಿದ್ದ ಹೋಟೆಲ್​ ರೂಮ್​ನಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿರಲಿಲ್ಲ. ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿದ ಹೋಟೆಲ್​ ಸಿಬ್ಬಂದಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ, ಆಕೆಯ ಸಾವಿನ ದಿನ ಯುವಕನೊಬ್ಬ ಆಕೆಯ ರೂಮಿಗೆ ಬಂದು, ಸುಮಾರು 17 ನಿಮಿಷ ಉಳಿದುಕೊಂಡಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:VIDEO | ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ
ಇದರ ನಡುವೆ ಆಕಾಂಕ್ಷಾ ದುಬೆ ಅವರ ತಾಯಿ ಮಧು ದುಬೆ, ಸಮರ್​ ಸಿಂಗ್​ ಮತ್ತು ಸಂಜಯ್​ ಸಿಂಗ್​ ವಿರುದ್ಧ ದೂರು ದಾಖಲಿಸಿದ್ದಾರೆ. ಮಗಳನ್ನು ಕೊಲ್ಲುವುದಾಗಿ ಆರೋಪಿ ಸಂಜಯ್​ ಸಿಂಗ್ ಫೋನ್​ ಮೂಲಕ ಬೆದರಿಕೆ ಹಾಕಿದ್ದ ಎಂದು ಮಧು ದುಬೆ ಆರೋಪ ಮಾಡಿದ್ದಾರೆ. ಅಲ್ಲದೆ, ನನ್ನ ಮಗಳು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದಾರೆ.
ಆಕಾಂಕ್ಷಾಳ ಮರಣೋತ್ತರ ಪರೀಕ್ಷೆ ನಡೆದಿದ್ದರೂ ಈವರೆಗೂ ಅದರ ವರದಿ ಮಾತ್ರ ಬಿಡುಗಡೆಯಾಗಿಲ್ಲ. ಶವಪರೀಕ್ಷೆಯ ಬೆನ್ನಲ್ಲೇ ವಾರಾಣಸಿಯಲ್ಲಿರುವ ಮನಿಕಾರ್ಣಿಕಾ ಘಾಟ್​ನಲ್ಲಿ ಆಕೆಯ ಶವ ಸಂಸ್ಕಾರ ಮಾಡಲಾಗಿದೆ.
ಅಂದಹಾಗೆ ಆಕಾಂಕ್ಷಾ ದುಬೆ (25) ಅವರು ಉತ್ತರ ಪ್ರದೇಶದ ವಾರಾಣಸಿಯ ಸರ್ನಾಥ್​ ಹೋಟೆಲ್​ನಲ್ಲಿ ಮಾರ್ಚ್​ 25ರಂದು ಶವವಾಗಿ ಪತ್ತೆಯಾದರು. ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಸಿನಿಮಾ ಮಾತ್ರವಲ್ಲದೆ ಆಕಾಂಕ್ಷಾ ಸಾಮಾಜಿಕ ಜಾಲತಾಣದಲ್ಲೂ ಪ್ರಖ್ಯಾತಿ ಹೊಂದಿದ್ದರು. ಡಾನ್ಸ್​ ರೀಲ್ಸ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡುತ್ತಿದ್ದರು. ಸಾಯುವ ಕೆಲ ಗಂಟೆಗಳಿಗೂ ಮುನ್ನ ಆಕಾಂಕ್ಷಾ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಭೋಜ್​ಪುರಿ ಹಾಡೊಂದಕ್ಕೆ ಡಾನ್ಸ್​ ಮಾಡಿದ್ದಾರೆ.

A post shared by 𝐀𝐤𝐚𝐧𝐤𝐬𝐡𝐚 𝐃𝐮𝐛𝐞𝐲 (@akankshadubey_official)

ಪ್ರೇಮಿಗಳ ದಿನದಂದು ಸಹ ನಟ ಸಮರ್​ ಸಿಂಗ್​​ ಜತೆಗಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು, ಪ್ರೇಮಿಗಳ ದಿನದ ಶುಭಾಶಯ ಎಂದು ಬರೆದು ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದರು.
ಇದನ್ನೂ ಓದಿ:ಬಳ್ಳಾರಿ ಪಾಲಿಕೆ ನೂತನ ಮೇಯರ್​ ಆಗಿ ತ್ರಿವೇಣಿ ಆಯ್ಕೆ: ರಾಜ್ಯದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ

A post shared by 𝐀𝐤𝐚𝐧𝐤𝐬𝐡𝐚 𝐃𝐮𝐛𝐞𝐲 (@akankshadubey_official)

ಸ್ಥಳೀಯ ಮಾಧ್ಯಮಗಳ ಪ್ರಕಾರ ಆಕಾಂಕ್ಷಾ 2018ರಿಂದ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಸಿನಿಮಾಗಳಿಂದ ಬಿಡುವು ಪಡೆದುಕೊಂಡಿದ್ದರು. ಕೆಲ ವರ್ಷಗಳ ಮತ್ತೆ ಸಿನಿಮಾಗೆ ಮರಳಿದ್ದರು ಮತ್ತು ಸಂಕಷ್ಟದ ಸಮಯದಲ್ಲಿ ನನ್ನ ಜತೆ ನಿಂತಿದ್ದು, ನನ್ನ ತಾಯಿ ಎಂದು ಸದಾ ಹೇಳುತ್ತಿದ್ದರು.
ಆಕಾಂಕ್ಷಾ ಭೋಜ್​ಪುರಿ ಸಿನಿಮಾ ಇಂಡಸ್ಟ್ರಿಯಲ್ಲೂ ತುಂಬಾ ಖ್ಯಾತಿ ಪಡೆದಿದ್ದಾರೆ. 17ನೇ ವಯಸ್ಸಿನಲ್ಲಿ ಮೇರಿ ಜುಂಗ್​ ಮೇರಾ ಫೈಸ್ಲಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮುಜ್ಸೆ ಶಾದಿ ಕರೋಗಿ (ಭೋಜ್‌ಪುರಿ), ವೀರೋನ್ ಕೆ ವೀರ್, ಫೈಟರ್ ಕಿಂಗ್, ಕಸಮ್ ಪೈಡಾ ಕರ್ನೆ KI 2 ಮತ್ತು ಇತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಹೋಟೆಲ್​ನಲ್ಲಿ ಖ್ಯಾತ ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಶವವಾಗಿ ಪತ್ತೆ

ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು! ಕಠಿಣ ಕ್ರಮಕ್ಕೆ ಮುಂದಾದ ರೈಲ್ವೇ ಇಲಾಖೆ

ವಿಷ್ಣುವರ್ಧನ್​ ಅಭಿಮಾನಿಯಾದ ಪ್ರಜ್ವಲ್​ … ‘ವೀರಂ’ ಟೀಸರ್​ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 14 =
Remember me
