ಅಹಮದಾಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇಂದು ಭಾರತದ ಎರಡನೇ ದಿನದ ಪ್ರವಾಸದಲ್ಲಿದ್ದಾರೆ. ಮೊದಲನೇ ದಿನದ ಪ್ರವಾಸದಲ್ಲಿ ಅಹಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು ಟ್ರಂಪ್​ ಅವರಿಗೆ ಖುಷಿ ಕೊಟ್ಟಂತೆ ಕಂಡಿಲ್ಲ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್​ ಗಾಂಧಿ, “ಟ್ರಂಪ್​ ಅವರು ಸಬರಮತಿ ಆಶ್ರಮದಲ್ಲಿ ಚರಕವನ್ನು ತಿರುಗಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಅಲ್ಲಿ ಮೆಲಾನಿಯಾ ಗಾಂಧಿಯವರು ಚರಕವನ್ನು ತಿರುಗಿಸಿದ್ದಾರೆ. ಟ್ರಂಪ್​ ಅದರ ಬಳಿ ಸುಮ್ಮನೆ ಕುಳಿತಿದ್ದರು ಅಷ್ಟೇ. ಅವರು ಅತಿಥಿಗಳ ಪುಸ್ತಕದಲ್ಲಿಯೂ ಮಹಾತ್ಮ ಗಾಂಧಿಯವರ ಹೆಸರನ್ನೂ ಬರೆದಿಲ್ಲ. ಅಲ್ಲಿಯೂ ಸಹ ತನ್ನ ಗೆಳೆಯರಾದ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಡೊನಾಲ್ಡ್​ ಟ್ರಂಪ್​ ನಿನ್ನೆ ಅಹಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಗಾಂಧೀಜಿಯವರ ಚರಕದ ಬಳಿ ಕುಳಿತು ಚರಕ ತಿರುಗಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಹಾಗೆಯೇ ಅವರು ಅತಿಥಿಗಳ ಪುಸ್ತಕದಲ್ಲಿ ಗಾಂಧಿಯ ಹೆಸರನ್ನೂ ಉಲ್ಲೇಖಿಸಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿತ್ತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
