ಕಳೆದ ಏಪ್ರಿಲ್​​ನಲ್ಲಿ ಹುಲಿ ಕುಟುಂಬದ ವೈರಲ್ ಫೋಟೋವೊಂದು ಜನರು ತಲೆ ಕೆರೆದುಳ್ಳುವಂತೆ ಮಾಡಿತ್ತು. ಆ ಚಿತ್ರದಲ್ಲಿರುವ ಒಟ್ಟು ಹುಲಿಗಳನ್ನು ಲೆಕ್ಕ ಹಾಜಲು ನೆಟ್ಟಿಗರು ಹರಸಾಹಸ ಪಟ್ಟು ಕೊನೆಗೂ ಆ ಚಿತ್ರದಲ್ಲಿದ್ದ 20 ಹುಲಿಗಳನ್ನು ಗುರುತಿಸಲು ನೆಟ್ಟಿಗರು ಯಶಸ್ವಿಯಾಗಿದ್ದರು. ಅಂಥದೇ ಒಂದು ವಿಶಿಷ್ಟ ವಿದ್ಯಮಾನವನ್ನು ಛಾಯಾಗ್ರಾಹರೊಬ್ಬರು ಕ್ಲಿಕ್ಕಿಸಿ ಶೇರ್ ಮಾಡಿದ್ದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇಲ್ಲಿರುವ ಆನೆಗಳ ಕುಟುಂಬದ ಒಂದು ಫೋಟೋ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.” ಒಂದೇ ಸಾಲಿನಲ್ಲಿ ನಿಂತಿರುವ ಆನೆಗಳ ಫೋಟೊ ಆಶ್ಚರ್ಯಕರವಾಗಿಯೂ ಅದ್ಭುತವಾಗಿಯೂ ಕಾಣುತ್ತದೆ ಎಂದು ವನ್ಯಜೀವಿ ಛಾಯಾಗ್ರಾಹಕ ಗ್ಯಾನ್ ದೀಕ್ಷಿತ್ ಸೆರೆಹಿಡಿದ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ:ಏನ್ ಟ್ರೆಂಡ್ ಗುರೂ..! ಕರೊನಾ ಹೇರ್​ಸ್ಟೈಲ್ ಆಯ್ತು. ಈಗ ಕರೊನಾ ಮಾಸ್ಕ್ ಮತ್ತು ನಾನ್
ಒಂದು ಕ್ಷಣ ನೋಡಿದಾಗ ಒಂದು ಚಿತ್ರದಲ್ಲಿ ನಾಲ್ಕು ಆನೆಗಳನ್ನು ಸುಲಭವಾಗಿ ಗುರುತಿಸಬಹುದು. ಇನ್ನೂ ಎಷ್ಟು ಆನೆಗಳಿವೆ? ಆನೆಗಳನ್ನು ಲೆಕ್ಕ ಹಾಕಲು ಈ ಪೋಟೋ ನೆಟ್ಟಿಗರ ತಲೆಯಲ್ಲಿ ಹುಳು ಬಿಟ್ಟಂತಾಗಿದೆ.ಕಳೆದ ವರ್ಷ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೀಕ್ಷಿತ್ ಚಿತ್ರವನ್ನು ಕ್ಲಿಕ್ ಮಾಡಿದ್ದರು. ಅವರು ಫೋಟೋವನ್ನು ಎನ್​​ಜಿಒ ವೈಲ್ಡ್ ಲೆನ್ಸ್ಇಕೋ ಫೌಂಡೇಶನ್‌ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Few days back we have posted this image as 7in1 Frame, now watch carefully till the end how this is 7in1 frame.#ElephantLove.#wildlense.@susantananda3@ParveenKaswan@SudhaRamenIFS@Saket_Badolahttps://t.co/rvdXnGohrTpic.twitter.com/sN7Y9ag4me
— WildLense® Eco Foundation 🇮🇳 (@WildLense_India)July 30, 2020

“ಈ ಸನ್ನಿವೇಶವನ್ನು ನೋಡಿದರೆ ಫೋಟೊ ತೆಗೆಯಲು ಮೊದಲೇ ನಿರ್ಧರಿಸಿದಂತಿದೆ. ಆದರೆ ಈ ಫೋಟೋ ಪಡೆಯಲು ನೂರಾರು ಬಾರಿ ಕ್ಲಿಕ್ಕಿಸಲಾಗಿದೆ” ಎಂದು ದೀಕ್ಷಿತ್ ಹೇಳಿಕೊಂಡಿದ್ದಾರೆ.ಗೊಂದಲವನ್ನು ನಿವಾರಿಸಲು, ವೈಲ್ಡ್ ಲೆನ್ಸ್ ಆನೆಗಳ ಗುಂಪಿನ ವೀಡಿಯೊವನ್ನು ಹಂಚಿಕೊಂಡಿದೆ.
ಇದನ್ನೂ ಓದಿ:ಚೀನಾದ ಸೇನೆ ಕಾಗದದ ಮೇಲಿನ ಹುಲಿ, ಇವೆ ಹಲವು ದೌರ್ಬಲ್ಯ
ಅದು ಸರಳವಾಗಿ ಅದ್ಭುತವಾಗಿದೆ ಎಂದು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಇದನ್ನು “ವಿಶಿಷ್ಟ ವಿದ್ಯಮಾನ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರೇಯಸಿ ಜತೆ ಚಕ್ಕಂದ ಆಡುವುದನ್ನು ಕಂಡ 6 ವರ್ಷದ ಬಾಲಕನನ್ನು ಕೊಂದ ಪ್ರೇಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
