ನವದೆಹಲಿ:ದೇಶದೆಲ್ಲೆಡೆ ಬಿಸಿಲ ಧಗೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು 46 ಡಿಗ್ರಿಗಳಿಗೆ ಏರಿದೆ. ಬಿಸಿಲಿನ ಬೇಗೆಗೆ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬಿಸಿಲ ತಾಪವನ್ನು ತಡೆದುಕೊಳ್ಳಲು ಮಜ್ಜಿಗೆ, ತಂಪುಪಾನಿಯಾ, ಜ್ಯೂಸ್​ಗಳ ಮೊರೆ ಹೋಗುತ್ತಿದ್ದಾರೆ. ಹಾವಾಮಾನದ ತಾಪಾ ಏರಿಕೆಯಿಂದಾಗಿ ತಪ್ಪಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.
ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಿದೆ ಎಂಬ ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಲ್ಲಿ ಕುಸಿದು ಆ್ಯಂಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಎಲ್ಲಡೆ ವೈರಲ್​​ ಆಗಿದೆ. ದೂರದರ್ಶನದ ಆ್ಯಂಕರ್ ಲೋಪಾಮುದ್ರ ಸಿನ್ಹಾ ಲೈವ್ ನ್ಯೂಸ್ ಓದುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಆ್ಯಂಕರ್ ಲೋಪಾಮುದ್ರ ಸಿನ್ಹಾ ದೂರದರ್ಶನದ ಪಶ್ಚಿಮ ಬಂಗಾಳ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಲೈವ್ ಸುದ್ದಿ ಪ್ರಾರಂಭವಾದಂತೆ, ಆಕೆಯ ಸ್ಥಿತಿಯು ಹದಗೆಟ್ಟಿತು. ತಾಪಮಾನದ ಸುದ್ದಿಯನ್ನು ಓದಬೇಕಾದಾಗ, ಅವಳ ಕಣ್ಣುಗಳ ಮುಂದೆ ಎಲ್ಲವೂ ಕತ್ತಲೆಯಾಗಿದೆ ಎಂದು ಅವಳು ಭಾವಿಸಿದಳು. ಕೊನೆಗೆ ಮೂರ್ಛೆ ಹೋಗಿದ್ದಾಳೆ. ಆಗ ಅಲ್ಲಿದ್ದವರು ಬಂದು ಆಕೆಯ ಮುಖಕ್ಕೆ ನೀರು ಚಿಮುಕಿಸಿ ಆಕೆಯನ್ನು ಎಚ್ಚರ ಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಆ್ಯಂಕರ್ ಲೋಪಾಮುದ್ರ ಸಿನ್ಹಾ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿವರಗಳನ್ನೂ ನೀಡಿದ್ದಾರೆ. ನನಗೆ ಅನಾರೋಗ್ಯ ಅನಿಸಿದರೂ ಸುದ್ದಿ ಓದಿದ್ದೇನೆ. ನನ್ನ 21 ವರ್ಷಗಳ ವೃತ್ತಿ ಜೀವನದಲ್ಲಿ ನಾನು ಎಂದಿಗೂ ನೀರಿನ ಬಾಟಲಿಯನ್ನು ನನ್ನೊಂದಿಗೆ ಒಯ್ಯಲಿಲ್ಲ. 15 ನಿಮಿಷಗಳ ಪ್ರಸಾರವಾಗಲಿ ಅಥವಾ ಅರ್ಧ ಗಂಟೆಯ ಪ್ರಸಾರವಾಗಲಿ, ನನ್ನ ವೃತ್ತಿಜೀವನದಲ್ಲಿ ಪ್ರಸಾರದ ಮಧ್ಯದಲ್ಲಿ ನೀರು ಕುಡಿಯಬೇಕು ಎಂದು ನನಗೆ ಅನಿಸಲಿಲ್ಲ. ಆದರೆ, ಅಂದು ನನಗೆ 15 ನಿಮಿಷವೂ ಇರಲು ಸಾಧ್ಯವಾಗಲಿಲ್ಲ. ಹವಾಮಾನ ವರದಿಯನ್ನು ಓದುವಾಗ ಟಿವಿಯಲ್ಲಿ 30 ರಿಂದ 40 ಸೆಕೆಂಡುಗಳ ಅನಿಮೇಷನ್ ಪ್ಲೇ ಆಗುತ್ತಿರುವಾಗ ನಾನು ಮೂರ್ಚೆ ಹೋದೆ. ತಕ್ಷಣ ಅಲ್ಲಿದ್ದ ಸಹೋದ್ಯೋಗಿಗಳು ಆಕೆಗೆ ಸಹಾಯ ಮಾಡಲು ಓಡಿ ಬಂದರು. ಆಕೆಯ ಮುಖಕ್ಕೆ ನೀರು ಚಿಮುಕಿಸಿ ಚೇತರಿಸಿಕೊಳ್ಳುವಂತೆ ಬೀಸಿದರು ಒಂದು ಲೋಟ ನೀರು ಕುಡಿದ ನಂತರ ಎಲ್ಲವೂ ಸರಿಯಿದೆ ಎಂದು ಅನಿಸಿ ಸುದ್ದಿಯನ್ನು ಓದಬಹುದು ಎನ್ನುವಂತೆ ಆಯ್ತು .ಕಾರ್ಯಕ್ರಮದ ಮಧ್ಯೆ ತನಗೆ ಆಗಿದ್ದಕ್ಕೆ ವಾಹಿನಿಯಲ್ಲಿ ಕ್ಷಮೆ ಯಾಚಿಸಿದ್ದಾರೆ.
ಪ್ರಸ್ತುತ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಏಳರಿಂದ ಎಂಟು ಡಿಗ್ರಿ ಹೆಚ್ಚಾಗಿದೆ. ಅಂತಹ ಹವಾಮಾನ ಪರಿಸ್ಥಿತಿಗಳಲ್ಲಿ ಹೈಡ್ರೀಕರಿಸಿದ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿ ವಾತಾವರಣದಿಂದ ನಿರ್ಜಲೀಕರಣಕ್ಕೆ ಒಳಗಾಗಿ ಆಂಕರ್ ಸಿನ್ಹಾ ಕೂಡ ಕುಸಿದು ಬಿದ್ದಿದ್ದಾರೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು
ದೇಶದೆಲ್ಲೆಡೆ ಬಿಸಿಲ ಧಗೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು 46 ಡಿಗ್ರಿಗಳಿಗೆ ಏರಿದೆ. ದೂರದರ್ಶನದ ನಿರೂಪಕ ಲೋಪಾಮುದ್ರ ಸಿನ್ಹಾ ಅವರು ಇತ್ತೀಚಿನ ಶಾಖದ ಅಲೆಯ ಬಗ್ಗೆ ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಲ್ಲಿ ಕುಸಿದರು. ದೂರದರ್ಶನದ ಕೋಲ್ಕತ್ತಾ ಶಾಖೆಯಲ್ಲಿ ಕಳೆದ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × 5 =
Remember me
