ಮುಂಬೈ:ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಶಿಕ್ಷೆ ಏನು ಕೊಡುವಿರಿ ಎಂದು ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬ ಟ್ವೀಟ್​ ಮಾಡಿದ್ದಾನೆ.
ಹೀಗೆ ಪೊಲೀಸರಿಗೆ ಟ್ವೀಟ್​ ಮಾಡಿದ್ದು ನೀಲೇಶ್​ ಬೆಡೇಕರ್​ (39) ಎಂಬಾತ. ಅದಕ್ಕೆ ಪೊಲೀಸರು ಆತನ ವಿಳಾಸ ಮೊಬೈಲ್​ ಕೇಳಿದ್ದಾರೆ. ಆತ ತನ್ನ ಮೊಬೈಲ್​ ನಂಬರ್​ ನೀಡಿದ್ದಾನೆ.
ನೀಲೇಶ್ ಮಾಡಿದ ಟ್ವೀಟ್​ನಲ್ಲಿ “ನೀವು ನನ್ನ ಜೀವನದಲ್ಲಿ ಏನು ಬದಲಾವಣೆ ಮಾಡುವಿರಿ. ​ ನಾನು ಜೈಲಿನಲ್ಲಿರಬೇಕಾದ ಸಮಯವನ್ನು ಹೇಳಿ, ನಾನು ಆಕಸ್ಮಾತ್​ ಸಾಯದಿದ್ದರೆ, ಅಲ್ಲಿಗೆ ಬರುತ್ತೇನೆ” ಎಂದಿ ಟ್ವೀಟ್​ನಲ್ಲಿ ಕೆಂಪು ಬಾವುಟದ ಚಿತ್ರಗಳನ್ನು ಹಾಕಿದ್ದಾನೆ.
ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳವವರಿಗೆ ಗೌರ ಏಕಿಲ್ಲ? ಆದರೆ ಈ ಗೌರವ ಬೇಕು ಎಂದು ನಿಮಗನಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಆತ, ನಾನು ಬದುಕಿ ಬಂದರೆ ನಾನು ಎಷ್ಟು ತಿಂಗಳು ಜೈಲಿನಲ್ಲಿರಬೇಕಾಗುತ್ತದೆ ಹೇಳಿ ಎಂದಿದ್ದಾನೆ.
ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುವ ಕಚೇರಿಯು ನೀಲೇಶ್​ ಹತ್ತಿರದ ವನರೈ ಪೊಲಿಸ್​ ಠಾಣೆಗೆ ಈ ಮಾಹಿತಿ ನೀಡಿದ್ದಾರೆ. ತಕ್ಷಣ ವನರೈ ಪ್ರದೇಶದ ಎಸ್​ಪಿ ಮಹೇಶ್​ ನಿವೇಟ್ಕರ್​ ಸ್ಥಳಕ್ಕೆ ತೆರಳಿದ್ದಾರೆ.
ನೀಲೇಶ್​ನನ್ನು ಭೇಟಿ ಮಾಡಿ ಆತನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ನಂತರ ಆತನೇ ಸಮೀಪದ ಆಸ್ಪತ್ರೆಗೆ ತೆರಳಿ ಕೆಲ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾನೆ.
ನೀಲೇಶ್​ ಕೆಲ ವೈಯುಕ್ತಿಕ ಕಾರಣಗಳಿಂದ ಬೇಸತ್ತಿದ್ದಾನೆ. ಆದರಿಂದ ಆತ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದ. ಆತನ ಕುಟುಂಬದವರನ್ನು ಸಂಪರ್ಕಿಸಿ ನೀಲೇಶ್​ನನ್ನು ಕಳುಹಿಸಲಾಗಿದೆ ಎಂದು ಎಸ್​ಐ ಮಹೇಶ್​ ತಿಳಿಸಿದರು.
ಸಮಸ್ಯೆಗಳು ಜೀವನದ ಒಂದು ಭಾಗ. ಇದಕ್ಕೆ ಆತ್ಮಹತ್ಯೆಯಂತಹ ನಿರ್ಧಾರಗಳು ಪರಿಹಾರವಾಗಲಾರವು ಎಂದು ಮುಂಬೈ ಪೊಲೀಸ್​ ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 16 =
Remember me
