ನವದೆಹಲಿ:ಇಂದು ಬಹುತೇಕ ಜಗತ್ತಿನ ಗಮನವನ್ನೇ ಸೆಳೆದಿದ್ದ ಕೆಲವೇ ಸೆಕೆಂಡುಗಳ ವಿದ್ಯಮಾನದಲ್ಲಿ ಬರೋಬ್ಬರಿ 500 ಕೋಟಿ ರೂ. ನಷ್ಟವಾಗಿದೆ. ಕಣ್ಣೆದುರೇ ಇದ್ದ ಎರಡು ಅವಳಿ ಗೋಪುರಗಳ ನೆಲಸಮದೊಂದಿಗೆ ಕೋಟಿಗಟ್ಟಲೆ ರೂಪಾಯಿ ಧೂಳೀಪಟವಾಗಿದೆ.
ಉತ್ತರಪ್ರದೇಶದ ನೋಯ್ಡಾದಲ್ಲಿ 2004ರಲ್ಲಿ ನಿರ್ಮಾಣಗೊಂಡಿದ್ದ ಬೃಹತ್​ ಅವಳಿ ಗೋಪುರ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿಯನ್ನು ಇಂದು ವಿಶೇಷ ಟೆಕ್ನಾಲಜಿ ಮೂಲಕ ನೆಲಸಮಗೊಳಿಸಲಾಗಿದೆ. ದೀರ್ಘಾವಧಿಯ ನಿರ್ಮಾಣದೊಂದಿಗೆ ಪೂರ್ಣಗೊಂಡಿದ್ದ ಈ ಕಟ್ಟಡ ಇಂದು ಮಧ್ಯಾಹ್ನ 12 ಸೆಕೆಂಡುಗಳಲ್ಲಿ ನೆಲಸಮಗೊಂಡಿದೆ. 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡದ ನೆಲಸಮಕ್ಕೆ 20 ಕೋಟಿ ರೂ. ವೆಚ್ಚವಾಗಿದೆ. ಆದರೆ ಇದರಿಂದಾದ ಒಟ್ಟು ನಷ್ಟ ಬರೋಬ್ಬರಿ 500 ಕೋಟಿ ರೂಪಾಯಿ!
ಈ ಬೃಹತ್ ಅವಳಿ ಗೋಪುರಗಳ ನೆಲಸಮದಿಂದ ಕಂಪನಿಗೆ ಒಟ್ಟು 500 ಕೋಟಿ ರೂ. ನಷ್ಟವಾಗಿದೆ ಎಂದು ಸೂಪರ್​ಟೆಕ್​ ಎಮರಾಲ್ಡ್​ ಕಂಪನಿಯ ಅಧ್ಯಕ್ಷ ಆರ್​.ಕೆ. ಅರೋರಾ ತಿಳಿಸಿದ್ದಾರೆ. ಈ ಸ್ಥಳದ ಜಾಗಕ್ಕೆ ನಾವು ಹಾಕಿದ್ದ ಹಣ, ನಿರ್ಮಾಣ ವೆಚ್ಚ, ವಿವಿಧ ಪ್ರಾಧಿಕಾರಗಳಿಂದ ಅನುಮತಿ ಪಡೆಯಲು ನೀಡಿದ್ದ ಮೊತ್ತ, ಬಂಡವಾಳದ ಬಾಬ್ತು ಬ್ಯಾಂಕ್​ಗಳಿಗೆ ವರ್ಷಗಟ್ಟಲೆ ಕಟ್ಟಿದ್ದ ಬಡ್ಡಿ, ಅಲ್ಲದೆ ಈ ಟ್ವಿನ್​ ಟವರ್ ಖರೀದಿದಾರರಿಗೆ ಮರಳಿಸಿದ ಶೇ. 12 ಬಡ್ಡಿ ಹಣ ಎಲ್ಲವೂ ಸೇರಿ ಒಟ್ಟು 500 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು 8 ಲಕ್ಷ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಈ ಎರಡು ಟ್ವಿನ್​ ಟವರ್​ಗಳಲ್ಲಿದ್ದ 900ಕ್ಕೂ ಅಧಿಕ ಅಪಾರ್ಟ್​​ಮೆಂಟ್​ಗಳ ಈಗಿನ ಬೆಲೆಯೇ ಸುಮಾರು 700 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಈ ಬೃಹತ್ ಗೋಪುರಗಳನ್ನು ನಿರ್ಮಿಸಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು.
ಪಾಕ್​ ವಿರುದ್ಧ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ; ಕ್ರಿಕೆಟ್​ನಲ್ಲಿ ಭಾರತ ಗೆಲ್ಲಲಿ ಎಂದು ಕೋರಿಕೆ..
‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seven =
Remember me
