ರಾಜಸ್ಥಾನ:ಈ ಇಬ್ಬರು ಅವಳಿ ಜವಳಿ ಅಣ್ಣತಮ್ಮಂದಿರ ನಡುವೆ 900 ಕೀಮೀ ಅಂತರ ಇದ್ದರೂ ಇವರು ಸಾವಿನಲ್ಲಿ ಜೊತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ವಿಚಿತ್ರ ಅಂಶವೊಂದು ಬೆಳಕಿಗೆ ಬಂದಿದ್ದು ಇಬ್ಬರು ಸಾವಿಗೀಡಾದ ರೀತಿ ಕೂಡ ಒಂದೇ ಥರ ಇದೆ! ಈ ಪ್ರಕರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅವರಲ್ಲಿ ಒಬ್ಬರು ಸೂರತ್‌ನ ಮನೆಯ ಟೆರೇಸ್‌ನಿಂದ ಬಿದ್ದು ಸಾವಿಗೀಡಾಗಿದ್ದಾರೆ. ಈ ಸುದ್ದಿ ತಿಳಿದ ಅಣ್ಣ ಕೆಲವೇ ಗಂಟೆಗಳಲ್ಲಿ ಜೈಪುರದಿಂದ ಮನೆಗೆ ಬಂದಿದ್ದಾರೆ. ನಂತರ ಆತ ನೀರಿನ ಟ್ಯಾಂಕ್‌ಗೆ ಜಾರಿಬಿದ್ದು ಸಾವಿಗೀಡಾಗಿದ್ದಾನೆ.
ಸಹೋದರರನ್ನು ಸುಮೇರ್ ಸಿಂಗ್ ಮತ್ತು ಸೋಹನ್ ಸಿಂಗ್ (24) ಎಂದು ಗುರುತಿಸಲಾಗಿದ್ದು, ಗುರುವಾರ ಸ್ಥಳೀಯ ಗ್ರಾಮವಾದ ಸಾರ್ನೋ ಕಾ ತಾಲಾದಲ್ಲಿ ಅಂತ್ಯಕ್ರಿಯೆ ಅವರ ನಡೆಸಲಾಯಿತು. ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಚಿತಾಗಾರದಲ್ಲಿ ಮಾಡಲಾಗಿದೆ. ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಸುಮೇರ್ ಗುಜರಾತ್‌ನ ಸೂರತ್ ನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಸೋಹನ್ ಜೈಪುರದಲ್ಲಿ ಗ್ರೇಡ್ 2 ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ.
“ಬುಧವಾರ ರಾತ್ರಿ ಸುಮೇರ್ ಅವರು ನೀರಿನ ಟ್ಯಾಂಕ್​ನಲ್ಲಿ ಜಾರಿಬಿದ್ದ ಸಮಯದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಅವರ ಕುಟುಂಬ ಮಾಹಿತಿ ನೀಡಿದೆ. ಸೋಹನ್, ಗುರುವಾರ ಮುಂಜಾನೆ ತನ್ನ ಸಹೋದರನ ಸಾವಿನ ಸುದ್ದಿ ಕೇಳಿ ಮನೆಗೆ ಹಿಂದಿರುಗಿದ ಕೂಡಲೇ ನೀರಿನ ಟ್ಯಾಂಕ್‌ಗೆ ಬಿದ್ದು ಸಾವಿಗೀಡಾಗಿದ್ದಾನೆ. ಸೋಹನ್​ ತನ್ನ ಸಹೋದರನ ಸಾವನ್ನು ಕೇಳಿ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ”ಎಂದು ಬಾರ್ಮರ್‌ನ ಸಿಂಧರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುರೇಂದ್ರ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
