ನವದೆಹಲಿ:ಮೊನ್ನೆ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ದೆಹಲಿಯ ನೋಯ್ಡಾ ನಿವಾಸಿಗಳಾಗಿರುವ ಈ ಅವಳಿ ಸಹೋದರರು ಸಕತ್‌ ಫೇಮಸ್‌ ಆಗಿದ್ದಾರೆ.
ನೋಡಲು ಥೇಟ್‌ ಒಂದೇ ತೆರನಾಗಿ ಇರುವ ಈ ಅವಳಿ ಬಾಲಕಿಯರು ಅತಿ ಹೆಚ್ಚಿನ ಅಂಕ ಪಡೆದುದಕ್ಕೆ ಫೇಮಸ್‌ ಆಗಿದ್ದಲ್ಲ, ಬದಲಿಗೆ ಅಂಕಗಳನ್ನೂ ಒಂದೇ ರೀತಿ ತೆಗೆದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಮಾನಸಿ ಮತ್ತು ಮಾನ್ಯ ಎಂಬ ಸಹೋದರಿಯರು ಇವರು. ಗ್ರೇಟರ್ ನೋಯ್ಡಾದ ಆ್ಯಸ್ಟರ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಾಗಿದ್ದು, ಸಿಬಿಎಸ್‌ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆದಿದ್ದಾರೆ. ಇಬ್ಬರೂ ಸೇಮ್‌ ಇಷ್ಟೇ ಅಂಕ ಪಡೆದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ಪಿಯುಸಿ ಅಂಕಗಳಿಂದ ನಿರಾಶರಾಗಿದ್ದೀರಾ..? ಯುಪಿಎಸ್​ಸಿ ಟಾಪರ್​ಗಳು 12ನೇ ಕ್ಲಾಸ್​ನಲ್ಲಿ ಗಳಿಸಿದ್ದೆಷ್ಟು ನೋಡಿ…!
ಅಷ್ಟೇ ಅಲ್ಲದೇ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಇಬ್ಬರೂ 98 ಅಂಕ ಪಡೆದಿದ್ದರೆ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಇಬ್ಬರೂ 95 ಅಂಕ ಪಡೆದಿದ್ದಾರೆ.
ಬಹುತೇಕ ಎಲ್ಲರೂ ನಮ್ಮ ಮುಖಚಹರೆಯಿಂದ ಗುರುತಿಸಲು ಕಷ್ಟಪಡುತ್ತಾರೆ. ಒಂದೇ ರೀತಿಯಾಗಿ ಇರುವುದಾಗಿ ಹೇಳುತ್ತಾರೆ. ಆದರೆ ಇದೀಗ ಉತ್ತಮ ಅಂಕ ಗಳಿಸಿರುವ ಖುಷಿ ಒಂದೆಡೆಯಾದರೆ, ಇಬ್ಬರಿಗೂ ಒಂದೇ ತೆರನಾದ ಅಂಕ ಬಂದಿರುವುದು ನಮಗೇ ಅಚ್ಚರಿ ಮೂಡಿಸಿದೆ ಜತೆಗೆ ಸಂತೋಷವೂ ಆಗಿದೆ ಎಂದಿದ್ದಾರೆ.
ಮಾನ್ಯ ನನಗಿಂತ ಹೆಚ್ಚಿಗೆ ಓದಿದ್ದಳು. ಆದ್ದರಿಂದ ಅವಳಿಗೆ ನನಗಿಂತಲೂ ಹೆಚ್ಚು ಅಂಕ ಬರುತ್ತದೆ ಎಂದುಕೊಂಡಿದ್ದೆ ಎನ್ನುತ್ತಾಳೆ ಮಾನಸಿ. ಅವಳಿಗಳು ಹೆಚ್ಚಿನ ಪಕ್ಷದಲ್ಲಿ ಒಂದೇ ರೀತಿ ಅಂಕ ಪಡೆಯುತ್ತಾರೆ ಎಂದು ಪುಸ್ತಕದಲ್ಲಿ ಓದಿದ್ದೆ. ಆದರೆ ಇದನ್ನು ನಂಬಿರಲಿಲ್ಲ. ನಿಜಕ್ಕೂ ಇದು ಅಚ್ಚರಿಯೇ ಸರಿ ಎನ್ನುತ್ತಾರೆ ಸಹೋದರಿಯರು. ಇವರಿಬ್ಬರಿಗೂ ಇಂಜಿನಿಯರಿಂಗ್ ಮಾಡುವ ಆಸೆ.(ಏಜೆನ್ಸೀಸ್‌)
ಯೋಗಿ ಸರ್ಕಾರದಲ್ಲಿ 6,126 ಎನ್‌ಕೌಂಟರ್‌: ಸತ್ತ ಕ್ರಿಮಿನಲ್ಸ್‌, ಬಲಿಯಾದ ಪೊಲೀಸರೆಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
