ನವದೆಹಲಿ:ಇದುವರೆಗೂ ಆಯ್ದ ದೇಶಗಳಲ್ಲಿ ಜಾರಿಗೆ ತಂದಿದ್ದ ಟ್ವಿಟರ್​ ಬ್ಲೂ ಟಿಕ್​ ಪಡೆಯುವ ವೆರಿಫಿಕೇಶನ್​ ಸೇವೆಯನ್ನು ಭಾರತದಲ್ಲೂ ಇಂದಿನಿಂದ ಅಧಿಕೃತವಾಗಿ ಆರಂಭಿಸಲಾಗಿದೆ. ನಿಗದಿತ ಮೊತ್ತವನ್ನು ಪಾವತಿಸಿ ಟ್ವಿಟರ್​ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ಬ್ಲೂ ಟಿಕ್​ ಪಡೆಯಲು ಮೊಬೈಲ್​ ಬಳಕೆದಾರರಾದರೆ​ ತಿಂಗಳಿಗೆ 900 ರೂ. ಮತ್ತು ವೆಬ್​ಸೈಟ್​ ಆದರೆ 650 ರೂ. ಪಾವತಿಸಬೇಕಾಗುತ್ತದೆ. ವಾರ್ಷಿಕ ಟ್ವಿಟರ್​ ಸದಸ್ಯತ್ವ ಪ್ಲಾನ್​ ಸಹ ಪಡೆಯಬಹುದಾಗಿದೆ. ಇದರ ಮೊತ್ತ 6800 ರೂಪಾಯಿ. ತಿಂಗಳಿಗೆ 566.67 ರೂ. ತಗುಲುತ್ತದೆ. ಪ್ರತಿ ತಿಂಗಳ ಬದಲು ವಾರ್ಷಿಕ ಪ್ಲಾನ್​ ಆಯ್ಕೆ ಮಾಡಿಕೊಂಡರೆ ಹಣದ ಮೊತ್ತ ಕಡಿಮೆಯಾಗಲಿದೆ.
ಈವರೆಗೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಜಪಾನ್​, ಯುನೈಟೆಡ್​ ಕಿಂಗ್​ಡಮ್​, ಸೌದಿ ಅರೇಬಿಯಾ, ಫ್ರಾನ್ಸ್​, ಜರ್ಮನಿ, ಇಟಲಿ, ಪೋರ್ಚುಗಲ್​, ಸ್ಪೇನ್​, ಇಂಡೋನೇಷ್ಯಾ ಮತ್ತು ಬ್ರೆಜಿಲ್​ ಮಾತ್ರ ಬ್ಲೂಟಿಕ್​ ಪಡೆಯುವ ಸೌಲಭ್ಯವಿತ್ತು.
ಅಂದಹಾಗೆ ಬ್ಲೂ ಟಿಕ್​ ಪಡೆದ ಖಾತೆಗಳಿಗಾಗಿ ಟ್ವಿಟರ್​ನಿಂದ ಕೆಲವು ಹೊಸ ಫೀಚರ್​ಗಳು ಸಿಗಲಿವೆ. ಇದುವರೆಗೂ ಟ್ವಿಟರ್​ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್​ ಮಾಡಲು ಅವಕಾಶವಿತ್ತು. ಆದರೆ, ಬ್ಲೂಟಿಕ್​ ಸೇವೆ ಪಡೆದವರು ಟ್ವಿಟರ್​ಗೆ ಉದ್ದದ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಬಾಟ್‌ಗಳ ವಿರುದ್ಧದ ಟ್ವಿಟರ್​ ಯುದ್ಧದಲ್ಲಿ ನೀವು ಟ್ವಿಟರ್ ಅನ್ನು ಬೆಂಬಲಿಸುತ್ತಿರುವುದರಿಂದ, ಅರ್ಧದಷ್ಟು ಜಾಹೀರಾತುಗಳನ್ನು ಟ್ವಿಟರ್​ ಬಹುಮಾನವಾಗಿ ನೀಡಲಿದೆ ಎಂದು ಕಂಪನಿ ಈ ಹಿಂದೆಯೇ ತಿಳಿಸಿದೆ.(ಏಜೆನ್ಸೀಸ್​)
67 ವಯಸ್ಸಿನ ಬಿಲ್​ ಗೇಟ್ಸ್​ ಜೀವನದಲ್ಲಿ ಮತ್ತೊಮ್ಮೆ ಅರಳಿದ ಪ್ರೀತಿ!

ವಾಕಿಂಗ್​ ಮಾಡುವಾಗ ಅಪರಿಚಿತ ಶವ ಕಂಡು ಬೆಚ್ಚಿಬಿದ್ದ ಜನ!

ಏಕಕಾಲಕ್ಕೆ ಟ್ರ್ಯಾಕ್ಟರ್​, ಲಾರಿಗೆ ಕಾರು ಡಿಕ್ಕಿ: ಯುವಕರಿಬ್ಬರ ದುರಂತ ಸಾವು, ಮದ್ವೆ ಮುಗಿಸಿ ಬರುವಾಗ ದುರ್ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
