ನವದೆಹಲಿ:ಕಾಪಿ ರೈಟ್​ ಉಲ್ಲಂಘನೆಯಾಗಿದೆ ಎಂದು ಗೃಹ ಸಚಿವ ಅಮಿತ್​ ಷಾ ಅವರ ಟ್ವಿಟರ್​ ಪ್ರೊಫೈಲ್​ ಫೋಟೋ ತೆಗೆದು ಹಾಕಿ, ಕೆಲ ಸಮಯದ ಬಳಿಕ ಮರುಸ್ಥಾಪನೆ ಆಗಿರುವುದಾಗಿ ಶುಕ್ರವಾರ ವರದಿಯಾಗಿದೆ.
ಗುರುವಾರ ತಡರಾತ್ರಿ ಕೆಲ ಸಮಯದವರೆಗೆ ಅಮಿತ್​ ಷಾ ಅವರ ಟ್ವಿಟರ್​ ಪ್ರೊಫೈಲ್ ದಿಢೀರ್​​ ಕಾಣೆಯಾಗಿತ್ತು. ಕಾಪಿ ರೈಟ್​ ಉಲ್ಲಂಘನೆಯಾಗಿದೆ ಎಂದು ಪ್ರೊಫೈಲ್​​ನಲ್ಲೇ ಸೂಚನೆ ನೀಡಲಾಗಿತ್ತು. ಕಾಪಿ ರೈಟ್​ ಮಾಲೀಕ ವರದಿ ಮಾಡಿದ್ದರಿಂದ ತಾತ್ಕಾಲಿಕವಾಗಿ ತಡೆಹಿಡಿದಿದ್ದ ಟ್ವಿಟರ್​ ಪ್ರೊಫೈಲ್​ ಅನ್ನು ಕೆಲ ಸಮಯದ ಬಳಿಕ ಮರುಸ್ಥಾಪಿಸಲಾಗಿದೆ.
ಇದನ್ನೂ ಓದಿ:ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ ಕಾರ್ಮೋಡ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್​, ನಮ್ಮ ಜಾಗತಿಕ ನಿಯಮಗಳಿಗೆ ಅನುಸಾರವಾಗಿ ಟ್ವಿಟರ್​ ಖಾತೆಯಲ್ಲಿ ಅಜಾಗರೂಕ ದೋಷಗಳು ಕಂಡುಬಂದಿರುವುದರಿಂದ ಈ ಖಾತೆಯ ಪ್ರೊಫೈಲ್​​ ಅನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿತ್ತು. ಆದಷ್ಟು ಬೇಗ ನಮ್ಮ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಇದೀಗ ಟ್ವಿಟರ್​ ಖಾತೆ ಸಂಪೂರ್ಣ ಕಾರ್ಯ ನಿರ್ವಹಿಸುತ್ತಿದೆ ಎಂದು ಟ್ವಿಟರ್​ ವಕ್ತಾರ ಮಾಹಿತಿ ನೀಡಿದ್ದಾರೆ.
ಟ್ವಿಟರ್​ನ ಕಾಪಿ ರೈಟ್​ ಮಾನದಂಡಗಳ ಪ್ರಕಾರ, ಛಾಯಗ್ರಾಹಕನು ಚಿತ್ರದ ಮೇಲೆ ತನ್ನ ಹಕ್ಕುಸ್ವಾಮ್ಯವನ್ನು ಹೊಂದಿದ್ದಾನೆ ಹೊರತು ವಿಷಯದ ಮೇಲೆ ಅಲ್ಲ. ಚಿತ್ರದ ಬಗ್ಗೆ ತಕ್ಷಣ ಕೆಲ ಪ್ರತಿಕ್ರಿಯೆಗಳು ಬಂದಿದ್ದರಿಂದ ಅದನ್ನು ತೆಗೆದುಹಾಕಲಾಯಿತು ಎಂದು ಟ್ವಿಟರ್​ ಹೇಳಿದೆ.
ಅಂದಹಾಗೆ ಅಮಿತ್​ ಷಾ ಅವರು ಟ್ವಿಟರ್​ನಲ್ಲಿ 23 ಮಿಲಿಯನ್ಸ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಷಾ ಅವರು ಟ್ವಿಟರ್​ನಲ್ಲಿ 296 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ರವಿ ಬೆಳಗೆರೆ ಖ್ಯಾತಿ ಹೆಚ್ಚಿಸಿದ ಭೀಮಾತೀರ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
