ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್ ವೆಬ್​ಸೈಟ್ (www.narendramodi.in/) ಹ್ಯಾಕ್ ಆಗಿದ್ದನ್ನು ಟ್ವಿಟರ್ ದೃಢೀಕರಿಸಿದೆ.ಅವರ ವೆಬ್​ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಅದರ ಟ್ವಿಟರ್ ಅಕೌಂಟ್ ಮೂಲಕ ಫಾಲೋಯರ್ಸ್ ಬಳಿ ರಿಲೀಫ್ ಫಂಡ್​ಗೆ ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ನೀಡಿ ಎಂಬ ಸರಣಿ ಟ್ವೀಟ್​ಗಳನ್ನು ಅಪ್ಡೇಟ್ ಮಾಡಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ.
ಜುಲೈ ತಿಂಗಳಲ್ಲಿ ಅನೇಕ ಗಣ್ಯರ ಟ್ವಿಟರ್​ ಖಾತೆಗಳು ಹ್ಯಾಕ್ ಆಗಿದ್ದವು. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯೂ ಒಂದು. ಇದು ಬೆಳಕಿಗೆ ಬರುತ್ತಿದ್ದಂತೆ ಮೋದಿಯವರ ಪರ್ಸನಲ್ ವೆಬ್​ಸೈಟ್​ ನಿರ್ವಹಿಸುವವರು ಎಚ್ಚೆತ್ತುಕೊಂಡು ಖಾತೆಗಳನ್ನು ಸೆಕ್ಯೂರ್ ಮಾಡುವ ಕೆಲಸ ಮಾಡಿದ್ದಾರೆ ಎಂಬುದು ನಮ್ಮ ಅರಿವಿನಲ್ಲಿದೆ.ಸದ್ಯ ಟ್ವಿಟರ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ. ಹೊಸದಾಗಿ ಯಾವುದೇ ಟ್ವಿಟರ್​ ಖಾತೆಗಳು ಹ್ಯಾಕ್ ಆಗಿಲ್ಲ ಎಂದು ಟ್ವಿಟರ್ ತಿಳಿಸಿದ್ದಾಗಿ ವರದಿಯಲ್ಲಿದೆ.
ಇದನ್ನೂ ಓದಿ:ನಂಬಿ… ನಾನಿನ್ನೂ ಸಿಂಗಲ್: ರಿಲೇಷನ್​ಶಿಪ್ ಸ್ಟೇಟಸ್ ಬಗ್ಗೆ ರಶ್ಮಿಕಾ ಕೊಟ್ಟ ಉತ್ತರವಿದು
ಮೋದಿಯವರ ವೆಬ್​ಸೈಟ್ ಹ್ಯಾಕ್ ಆಗಿದ್ದ ಬಗ್ಗೆ ಅವರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೆ ಪ್ರಕಟವಾಗಿಲ್ಲ. ‘ @narendramodi_in’ ಖಾತೆಯನ್ನು 25 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಫಾಲೋ ಮಾಡುತ್ತಿದ್ದಾರೆ. ಇದು ಮೋದಿಯವರ ಪರ್ಸನಲ್​ ವೆಬ್​ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್​ಗೆ ಜೋಡಿಕೊಂಡಿರುವ ಟ್ವಿಟರ್ ಖಾತೆಯಾಗಿದೆ. (ಏಜೆನ್ಸೀಸ್)

ಕರೊನಾ ಸೋಂಕು: ಭದ್ರಾವತಿಯ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + thirteen =
Remember me
