ನವದೆಹಲಿ:ಟ್ವಿಟರ್ ವಲಯದಲ್ಲಿ ಭಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಟ್ವಿಟರ್​ ಡೀಲ್​ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತೊಂದು ಸಂಚಲನ ಮೂಡಿದೆ.ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ 44 ಬಿಲಿಯನ್ ಡಾಲರ್​ ಕೊಟ್ಟು ಟ್ವಿಟರ್ ಕಂಪನಿಯನ್ನು ಖರೀದಿಸುವ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದು, ಇದೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯವು ಲಕ್ಷಣಗಳು ಕಾಣಿಸಿವೆ. ಅಷ್ಟಕ್ಕೂ ಖುದ್ದು ಎಲಾನ್​ ಮಸ್ಕ್​ ಮಾಡಿರುವ ಟ್ವೀಟ್​ ಈಗ ಎಲ್ಲ ಉಲ್ಟಾ ಆಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
ಟ್ವಿಟರ್​ ಡೀಲ್​ ತಾತ್ಕಾಲಿಕವಾಗಿ ಪೆಂಡಿಂಗ್​ನಲ್ಲಿ ಇರಲಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರ ಪೈಕಿ ಫೇಕ್​ ಅಕೌಂಟ್​ಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆ ಇರಬೇಕಾಗಿದ್ದು, ಆ ಕುರಿತ ಲೆಕ್ಕಾಚಾರ ಬಾಕಿ ಇರುವುದರಿಂದ ಖರೀದಿ ಪ್ರಕ್ರಿಯೆಯನ್ನು ಸ್ಥಗಿತದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಲಾನ್ ಹೀಗೆ ಹೇಳಿದ ಬಳಿಕ ಟ್ವಿಟರ್ ಷೇರುಗಳಲ್ಲಿ ಶೇ. 20 ಕುಸಿತ ಕಂಡಿದೆ ಎನ್ನಲಾಗಿದೆ. ಅದಾಗ್ಯೂ ಎಲಾನ್​ ಮಸ್ಕ್ ತಮಾಷೆಗೆ ಹೀಗೆ ಹೇಳಿರಬಹುದಾ ಅಥವಾ ನಿಜವಾಗಿಯೂ ಖರೀದಿ ಕುರಿತು ಎರಡನೇ ಯೋಚನೆ ಮಾಡುತ್ತಿದ್ದಾರಾ ಎಂಬುದು ಇನ್ನೂ ಖಚಿತವಾಗಿಲ್ಲ. ಅಂದಹಾಗೆ ಎಲನ್​ ಮಸ್ಕ್​ ಡೀಲ್​ಗೆ ಟ್ವಿಟರ್​ ಕಂಪನಿ ಒಪ್ಪಿದ್ದರೂ ಅದಿನ್ನೂ ಷೇರುದಾರರ ಮಾನ್ಯತೆ ಪಡೆಯವುದು ಬಾಕಿ ಇದೆ. ಒಟ್ಟಿನಲ್ಲಿ ಸದ್ಯ ಟ್ವಿಟರ್ ಡೀಲ್​ನಲ್ಲಿ ಅಸ್ಪಷ್ಟತೆ ಉಂಟಾಗಿದೆ.
Twitter deal temporarily on hold pending details supporting calculation that spam/fake accounts do indeed represent less than 5% of usershttps://t.co/Y2t0QMuuyn
— Elon Musk (@elonmusk)May 13, 2022

ನಲಪಾಡ್​ ಹಳೇ ಕೇಸ್​ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ..

ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
