ನವದೆಹಲಿ:ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತ ಕೋವಿಡ್​ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಟ್ವಿಟರ್​ 15 ಮಿಲಿಯನ್​ ಡಾಲರ್ (1,10,20,50,000 ರೂಪಾಯಿ)​ ದೇಣಿಗೆಯನ್ನು ನೀಡಿದೆ.
ಟ್ವಿಟರ್​ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾಕ್​ ಪ್ಯಾಟ್ರಿಕ್​ ಡೋರ್ಸೆ ಸೋಮವಾರ ಟ್ವೀಟ್​ ಮಾಡಿದ್ದು, 15 ಮಿಲಿಯನ್​ ಡಾಲರ್​ ಅನ್ನು ದೇಶದ ಮೂರು ಸರ್ಕಾರೇತರ ಸಂಸ್ಥೆಗಳು (ಕೇರ್​), ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಎನ್​ಜಿಒ ಕೇರ್​ಗೆ 10 ಮಿಲಿಯನ್​ ಡಾಲರ್​ ನೀಡಲಾಗಿದ್ದು, ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎ ತಲಾ 2.5 ಮಿಲಿಯನ್​ ಡಾಲರ್​ ಸ್ವೀಕರಿಸಿದೆ. ಸೇವಾ ಇಂಟರ್ನ್ಯಾಷನಲ್, ಹಿಂದೂ ನಂಬಿಕೆ ಆಧಾರಿತ, ಮಾನವೀಯ ಮತ್ತು ಲಾಭರಹಿತ ಸೇವಾ ಸಂಸ್ಥೆಯಾಗಿದೆ.
ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್​ಗಳು, ಬೈಪ್ಯಾಪ್​ (ಬಿಲೆವೆಲ್​ ಪಾಸಿಟಿವ್​ ಏರ್​ವೇ ಪ್ರೆಸ್ಸರ್​) ಮತ್ತು ಸಿಪಿಎಪಿ (ಕಂಟಿನ್ಯೂಸ್​ ಪಾಸಿಟಿವ್​ ಏರ್​ವೇ ಪ್ರೆಸ್ಸರ್​) ಸೇರಿದಂತೆ ಮುಂತಾದ ಜೀವ ಉಳಿಸುವ ಉಪಕರಣಗಳ ಸಂಗ್ರಹಕ್ಕೆ ಬೆಂಬಲವಾಗಿ ಟ್ವಿಟರ್​ ಈ ಅನುದಾನವನ್ನು ನೀಡಿದೆ.
“ಕೋವಿಡ್​ ವಿರುದ್ಧದ ಭಾರತ ಹೋರಾಟಕ್ಕೆ ನೆರವು” ಅಭಿಯಾನದ ಅಡಿ ಸೇವಾ ಇಂಟರ್ನ್ಯಾಷನಲ್ ಹಣ ಸಂಗ್ರಹಿಸಲಾಗಿದೆ ಎಂದು ಸ್ಯಾನ್​ ಫ್ರ್ಯಾನ್ಸಿಸ್ಕೋ ಮೂಲದ ದೈತ್ಯ ಕಂಪನಿಯಾದ ಟ್ವಿಟರ್​ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಆಸ್ಪತ್ರೆಗಳು ಮತ್ತು ಕೋವಿಡ್ -19 ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಉಪಕರಣಗಳನ್ನು ವಿತರಿಸಲಾಗುವುದು ಎಂದು ಟ್ವಿಟರ್ ಹೇಳಿದೆ.(ಏಜೆನ್ಸೀಸ್​)
ಕರೊನಾ ವೈರಸ್ ಚೀನಾದ ಜೈವಿಕಾಸ್ತ್ರ!: ಶುರುವಾಯ್ತೇ 3ನೇ ವಿಶ್ವಯುದ್ಧ? ಆರು ವರ್ಷದ ಹಿಂದಿನ ದಾಖಲೆ ಸೋರಿಕೆ

ಸ್ನೇಹಿತನ ಸಾಲಕ್ಕೆ ಶ್ಯೂರಿಟಿ ಸಹಿ ಹಾಕಿದ ಪೊಲೀಸ್​ ಕಾನ್ಸ್​ಟೇಬಲ್​ ದುರಂತ ಸಾವು..!

ಎಡವಟ್ಟು ಮಾರ್ಗಸೂಚಿ ಫಜೀತಿ: ಪೊಲೀಸರಿಗೆ ಲಾಠಿ ಪ್ರಹಾರವಷ್ಟೇ ಪರಿಹಾರ, ಸ್ಪಷ್ಟತೆ ಸಿಗದ ವಿನಾಯಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
