ನವದೆಹಲಿ:ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡಿದ್ದೇ ಮಾಡಿದ್ದು, ದಿನವೂ ಹೊಸ ಸುದ್ದಿ ಮಾಡುತ್ತಿದ್ದಾರೆ. ಒಮ್ಮೆ ಬ್ಲೂ ಟಿಕ್​ಗೆ ಹಣ ಪಡೆಯುವುದು, ಇನ್ನೊಮ್ಮೆ ಸಿಇಒ ವಜಾ ಹೀಗೆ ನಿರಂತರವಾಗಿ ಟ್ವಿಟರ್​ ಸುದ್ದಿಯಲ್ಲಿದೆ.
ಈಗ ಭಾರತದಲ್ಲಿರುವ ಶೇಕಡ 90ರಷ್ಟು ಉದ್ಯೋಗಿಗಳನ್ನು ಮಸ್ಕ್​ ವಜಾ ಮಾಡುತ್ತಿದ್ದಾರೆ. ಇಡಿ ತಂಡಗಳನ್ನೇ ಕಿತ್ತು ಹಾಕುತ್ತಿರುವ ಕಾರಣ ಟ್ವಿಟರ್​ ಯಾವ ಕಡೆ ಸಾಗುತ್ತಿದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ ಎಲಾನ್​ ಮಸ್ಕ್​ ತಾನು ಹೂಡಿದ ಹಣವನ್ನು ಕಾಪಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ಮಾಡುತ್ತಿರುವುದು ಎಂಬುದು ಸ್ಪಷ್ಟ.
ಈಗ ವಜಾಗೊಂಡಿರುವ ಬಹುತೇಕ ಉದ್ಯೋಗಿಗಳು ಮಾರ್ಕೆಟಿಂಗ್​, ಪ್ರಾಡಕ್ಟ್​ ಟೀಮ್​ ಮತ್ತು ಸಂವಹನ ವಿಭಾಗದವರು ಎಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಟ್ವಿಟರ್​ ಉದ್ಯೋಗಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕೆಲವೇ ಕೆಲವರು ಕಂಪೆನಿಯಲ್ಲಿ ಉಳಿದುಕೊಂಡಿದ್ದಾರೆ. ಈಗಾಗಲೇ ಜಗತ್ತಿನಾದ್ಯಂತ ಶೇಕಡ 70ರಷ್ಟು ಉದ್ಯೋಗಿಗಳನ್ನು ಮಸ್ಕ್​ ವಜಾಗೊಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
