ನವದೆಹಲಿ:ಏನ್​ ಸಮಾಚಾರ ರೀ.. ಎಲ್ರೂ ಹೇಗಿದ್ದೀರಿ.. ನಮ್ದೇನು ಇಲ್ಲಾ ರೀ… ಎಲ್ಲ ನಿಮ್ದೇ ಎಲ್ಲ ರೀ… ಅಯ್ಯೋ ಇದು ಯಶ್​ ಅವರ ಹಾಡಲ್ವೇ ಈಗೇಕೆ ಇದರ ವಿಚಾರ ಅಂತಿರಾ? ವಿಚಾರ ಇದೆ. ಏಕೆಂದರೆ ಟ್ವಿಟರ್​ ಇಂಡಿಯಾ ಮಾಡಿರುವ ಟ್ವೀಟ್​ಗೂ ನಮ್ಮ ಕನ್ನಡಿಗರು ಪ್ರತಿಕ್ರಿಯಿಸಿರುವ ರೀತಿಗೂ, ಈ ಹಾಡಿಗೂ ಒಂದು ರೀತಿಯ ಕನೆಕ್ಷನ್​ ಇದೆ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ…
ಮಂಗಳವಾರ ಮಧ್ಯಾಹ್ನ ಟ್ವಿಟರ್​ ಇಂಡಿಯಾ ಕನ್ನಡಿಗರಿಗೆ ಸರ್ಪ್ರೈಸ್​ ಒಂದನ್ನು ನೀಡಿದೆ. ಅದೇನೆಂದರೆ ಕನ್ನಡದಲ್ಲೇ ಏನ್​ ಸಮಾಚಾರ? ಎಂದು ಟ್ವೀಟ್​ ಮಾಡಿದೆ. ಸಮಾಚಾರ ಕೇಳಿದ್ದೇ ತಡ ನಮ್ಮ ಕನ್ನಡಿಗರು ಬಿಡ್ತಾರಾ ಇರೋ ಬರೋ ಸಮಾಚಾರವನ್ನೆಲ್ಲಾ ಟ್ವಿಟರ್​ ಇಂಡಿಯಾ ಮುಂದೆ ಒದರಿ, ನಮ್ಮ ಸಮಾಚಾರ ಹೀಗಿದೆ… ನಿಮ್ದೇನು ಹೇಳಿ ಸ್ವಲ್ಪ ಕೇಳುವಾ ಎಂದಿದ್ದಾರೆ.
ಏನ್ ಸಮಾಚಾರ?
— Twitter India (@TwitterIndia)February 18, 2020

ಅಂದಹಾಗೆ ನಮ್ಮ ಕನ್ನಡಿಗರು ಯಾವೆಲ್ಲಾ ಸಮಾಚಾರಗಳನ್ನು ಹೇಳಿದ್ದರು ಎಂಬುದರ ಒಂದು ಸಣ್ಣ ಝಲಕ್​ ನೋಡಿ ಬರುವುದಾದರೆ, ನೀವ್ ಹೇಳ್ಬೇಕು..ನಾವ್ ಕೇಳ್ಬೇಕು ಎಂದು ನೆಟ್ಟಿಗನೊಬ್ಬ ಹೇಳಿದರೆ, ಮೊನ್ನೆ ಡಿ ಬಾಸ್​ ಬರ್ತ್​ಡೇ ಆಯ್ತು. ನಿನ್ನೆ ಅಪ್ಪು ಸಾರ್ ನಿರ್ಮಿಸಿರುವ “ಮಾಯಾಬಜಾ಼ರ್” ಚಿತ್ರದ ಟೀಸರ್ ರಿಲೀಸ್ ಆಯ್ತು. ಇಂದು ರಾಷ್ಟ್ರೀಯ ಪೋಷಕ ನಟಿ ಕಿಶೋರಿ ಬಲ್ಲಾಳ್ ರವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ನಾಳೆ “ಶಿವಣ್ಣ” ನವರ ಹೊಸ ಚಿತ್ರದ ಮುಹೂರ್ತ ಇದೆ. ಫೆ. 21 “ಕೋಟಿಗೊಬ್ಬ 3” ಟೀಸರ್ ಬಿಡುಗಡೆಯಾಗಲಿದೆ. ಅಂದಹಾಗೆ ನೀವು ಅವತಾರಪುರುಷ ಟೀಸರ್ ನೋಡುದ್ರಾ ಮತ್ತೆ ನಿಮ್ದೇನ್ ಸಮಾಚಾರ? ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. ಇನ್ನೊರ್ವ ಅಸೆಂಬ್ಲಿಲಿ ಪೋರ್ನ್ ನೋಡಿದವರೆಲ್ಲ ಮಿನಿಸ್ಟರ್ ಆಗ್ ಬಿಟ್ಟಿದ್ದಾರೆ ಸಾರ್ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಹೀಗೆ ನಾನಾ ರೀತಿಯಲ್ಲಿ ಟ್ವಿಟರ್​ ಇಂಡಿಯಾಗೆ ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಹಾಸ್ಯ, ವ್ಯಾಂಗ್ಯ ಮತ್ತು ಟೀಕೆಗಳು ಸುರಿಮಳೆಯೇ ಸುರಿದಿದೆ.(ಏಜೆನ್ಸೀಸ್​)
ಮೊನ್ನೆ D Boss birthdayನೆನ್ನೆ ಅಪ್ಪು ಸಾರ್ ನಿರ್ಮಿಸಿರುವ "ಮಾಯಾಬಜಾ಼ರ್" ಚಿತ್ರದ ಟೀಸರ್ ರಿಲೀಸ್ಇಂದು ರಾಷ್ಟ್ರೀಯ ಪೋಷಕ ನಟಿಕಿಶೋರಿ ಬಲ್ಲಾಳ್ ರವರಿಗೆ ಅಂತಿಮ ನಮನನಾಳೆ "ಶಿವಣ್ಣ" ನವರ ಹೊಸ ಚಿತ್ರದ ಮುಹೂರ್ತ..feb 21st "ಕೋಟಿಗೊಬ್ಬ 3" ಟೀಸರ್ ರಿಲೀಸ್,,ಅಂದಹಾಗೆ#ಅವತಾರಪುರುಷಟೀಸರ್ ನೋಡುದ್ರಾ!ಮತ್ತೆ ನಿಮ್ದೇನ್ ಸಮಾಚಾರ..
— ಸುನಿ/SuNi (@SimpleSuni)February 18, 2020

ಅಯ್ಯೋ ಸಮಾಚಾರ ಬಹಳಷ್ಟಿವೆ..
📍ಗುಜರಾತಿನಲ್ಲಿ "ಬಡತನ ಮುಚ್ಚಿರಿ" ಯೋಜನೆಯಲ್ಲಿ ಗೋಡೆ ಕಟ್ಟಲಾಗುತ್ತಿದೆ.
📍ಕರ್ನಾಟಕದಲ್ಲಿ ನೆರೆ ನಿರ್ವಹಣೆ ಸಮರ್ಪಕವಾಗಿ ಆಗಿಲ್ಲ.
📍₹೧೮೬೦೦ ಕೋಟಿಯ ಸಬರ್ಬನ್ ರೈಲು ಯೋಜನೆಗೆ ಕೇಂದ್ರದಿಂದ ಕೇವಲ ₹೧ಕೋಟಿ ನೀಡಲಾಗಿದೆ
📍ಕೋಲಾರದ ರೈಲು ಕೋಚ್ ಫ್ಯಾಕ್ಟರಿ ಕಲಬುರ್ಗಿಯ ಜವಳಿ ಪಾರ್ಕ್ ರದ್ದು ಮಾಡಲಾಗಿದೆ.
— A N Nataraj Gowda – ಎ.ಎನ್.ನಟರಾಜ್ ಗೌಡ (@annatarajgowda)February 18, 2020

ಅಸೆಂಬ್ಲಿ ಲಿ ಪೋರ್ನ್ ನೋಡಿದವರೆಲ್ಲ ಮಿನಿಸ್ಟರ್ ಅಗ್ ಬಿಟ್ಟಿದ್ದಾರೆ ಸಾರ್
— Armaan (@Mehboobp1)February 18, 2020

ಏನ್ ಗುರು.. ಊಟ ಆಯ್ತಾ? ಸುಳ್ಳು ಸುದ್ದಿ ಹಂಚುವವರನ್ನ, ಹೆಂಗಸರಿಗೆ ಕೆಟ್ಟದಾಗಿ ಮಾತಾಡುವವರನ್ನ ಒಂದು ದಿನದ ಮಟ್ಟಕ್ಕೆ ಟ್ವೀಟ್ ಮಾಡದಂತೆ ತಡೆದರೇ ಏನ್ ಪ್ರಯೋಜನ ಗುರು? ಇವರೇನು ಒಂದು ದಿನದಲ್ಲಿ ಬದಲಾಗುತ್ತಾರ? ಉದಾಹರಣೆ:@mvmeetನಿಮ್ಮ ರೀತಿ ನೀತಿಗಳನ್ನು ಸ್ವಲ್ಪ ಬದಲಾಯಿಸಿ ಗುರು.. ಇದರಿಂದ ಟ್ಟಿಟರ್ ಸ್ವಲ್ಪ ಶಾಂತವಾಗಲಿ..
— ಮಲ್ಲಿಕಾರ್ಜುನ್ ಬಿ (Mallikarjun B) (@arjuna04)February 18, 2020

ಏನಿಲ್ಲಾ ಸರ್ ಕನ್ನಡ ಮಾತನಾಡೋಕೇ ಬರದೇ ಇರುವವರನ್ನೆಲ್ಲಾ ಕರ್ನಾಟಕದ ರಾಜ್ಯ+ಪಾಲರಾಗಿದ್ದಾರೆಇವರಿಗೆ ಇವತ್ತು ನಾನು “30 ದಿನಗಳಲ್ಲಿ ಕನ್ನಡ ಕಲಿಯಿರಿ” ಪುಸ್ತಕವನ್ನು ಅಂಚೆ ಮುಖಾಂತರ ಕಳಿಸಿದೆ. ಇದೇ ನನ್ನ ಇವತ್ತಿನ ಸಮಾಚಾರ .
— MALIK K (@MALIK_K_IYC)February 18, 2020

ಕೇಂದ್ರ ಸರ್ಕಾರದ ಅವಗಣನೆ ಅತಿಯಾಗಿ, ನಮ್ಗೆ ಉರಿ ಹತ್ಕೊಳತ್ತೆ.
ಈ ಭಕ್ತ ಗೂಬೆಗಳು, ಅದೆಷ್ಟು ಆರಾಮಾಗಿ ಅಮೇಧ್ಯ ತಿಂದು ಮೃಷ್ಟಾನ್ನ ಅಂತವೊ, ಅರ್ಥವಾಗ್ವಲ್ದು. ನಿಮ್ಗೇನಾರ ಗೊತ್ತಾ?
— 🌱| ಪ್ರಸಾದ್ | Prasad | ಘನ ನೀಲಿ 💙💙 | 🌱 (@Manjina_Hani)February 18, 2020

ಕನ್ನಡದವರಿಗೆ@TwitterIndiaದಲ್ಲಿಕೆಲಸ ಕೊಟ್ಟಿದಿರಾ ಅನ್ಸುತ್ತೆ.
ಧನ್ಯವಾದಗಳು..💐💐
ಮತ್ತಷ್ಟು ಕನ್ನಡಿಗರಿಗೆ ಕೆಲಸ ಕೊಡಿ,@TwitterIndiaತುಂಬಾ ಕನ್ನಡದ ಕಂಪು ಇರುತ್ತೆ.
— N V Soumya Rani (@nvsoumyarani)February 18, 2020

https://twitter.com/Lala_The_Don/status/1229795331812069376?s=20
Neeve Yella Helbeku Twitterappa!!😍
— NIRANJANA.G.CHELUR (@MAXCHELUR)February 18, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
