ನವದೆಹಲಿ:ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿನ ಬ್ಲೂ ಟಿಕ್​ಮಾರ್ಕ್​ (ಅಧಿಕೃತ ಖಾತೆ ಎಂಬ ಸೂಚಕ) ಅನ್ನು ತೆಗೆದುಹಾಕಿದ ಟ್ವಿಟರ್​​ ಸಂಸ್ಥೆ ಕೆಲವೇ ಕ್ಷಣಗಳಲ್ಲಿ ಅದನ್ನು ಮರುಸ್ಥಾಪಿಸಿದೆ.
ತೆಗೆದುಹಾಕಿದ್ದಕ್ಕೆ ಕಾರಣ ನೀಡಿರುವ ಟ್ವಿಟರ್​, ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದರಿಂದ ಅದನ್ನು ತೆಗೆಯಲಾಯಿತೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ಮತ್ತೆ ಬ್ಲೂ ಟಿಕ್​​ ಮಾರ್ಕ್​ ಅನ್ನು ಮರುಸ್ಥಾಪಿಸಿದೆ. ಈ ಮೂಲಕ ವಿವಾದ ದೊಡ್ಡದಾಗುವ ಮುನ್ನವೇ ಟ್ವಿಟರ್​ ಜಾಣ ನಡೆಯನ್ನು ಅನುಸರಿಸಿದೆ.
ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಕಳೆದ ಜುಲೈ 23ರಂದು ಕೊನೆಯದಾಗಿ ಟ್ವೀಟ್​ ಮಾಡಲಾಗಿದೆ. ಅಂದಿನಿಂದ ಯಾವುದೇ ಚಟುವಟಿಕೆ ಇಲ್ಲದಿದ್ದರಿಂದ ಟ್ವಿಟರ್​ ಬ್ಲೂ ಟಿಕ್​​ ಮಾರ್ಕ್​ ತೆಗೆದುಹಾಕಿತ್ತು ಎಂದು ಉಪರಾಷ್ಟ್ರಪತಿ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ಮಾಹಿತಿ ನೀಡಿದೆ.
ಆದಾಗ್ಯೂ, ಸರ್ಕಾರಿ ಮೂಲಗಳು ಇದನ್ನು ಖಂಡಿಸಿದ್ದು, ದೇಶದ 2ನೇ ಅತಿಮುಖ್ಯ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧದ ಟ್ವಿಟರ್​ ಕ್ರಮ ಅತಿರೇಕದ್ದು ಎಂದು ಜರಿದಿದಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಖಾತೆಗಳು 2019 ರಲ್ಲಿ ಅವರ ಮರಣದ ನಂತರವೂ ಪರಿಶೀಲಿಸಲ್ಪಟ್ಟಿವೆ ಎಂದು ಹೇಳುವ ಮೂಲಕ ಟ್ವಿಟರ್​ ವಿರುದ್ಧ ಹಲವರು ಕಿಡಿಕಾರಿದ್ದಾರೆ.
ದೇಶದಲ್ಲಿ ಬಳಕೆದಾರರ ಗೌಪ್ಯತೆ ವಿಚಾರವಾಗಿ ಸರ್ಕಾರ ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆಗಳ ನಡುವೆ ನಡೆಯುತ್ತಿರುವ ಕಿತ್ತಾಟದ ನಡುವಿನ ಈ ಬೆಳವಣಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.(ಏಜೆನ್ಸೀಸ್​)
ಇಳಿಯುತ್ತಿದೆ ಕರೊನಾ ಸೋಂಕು : 1.2 ಲಕ್ಷ ಹೊಸ ಪ್ರಕರಣಗಳು

ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
