ವಾಷಿಂಗ್ಟನ್:ಎಲೋನ್ ಮಸ್ಕ್ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಭಾರತದಾದ್ಯಂತ ಬ್ಲೂ ಟಿಕ್ ಚಂದಾದಾರಿಕೆಯನ್ನು ಸಂಗ್ರಹಿಸುವ ಮುನ್ನ ಭಾರತ ಸರ್ಕಾರದ ಅಕೌಂಟ್​ಗಳು ಮತ್ತು ಭಾರತೀಯ ಮಾಧ್ಯಮಗಳನ್ನು ‘ಅಫೀಶಿಯಲ್​’ ಎಂದು ನೇಮಕ ಮಾಡಲು ಪ್ರಾರಂಭಿಸಿದೆ. ಟ್ವಿಟರ್​ನ ನೀತಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು ಇದನ್ನು ಎಲಾನ್​ ಮಸ್ಕ್​ ಎಫೆಕ್ಟ್ ಎಂದೇ ಕರೆಯಲಾಗುತ್ತಿದೆ.
ಭಾರತದ ವಿವಿಧ ಸರ್ಕಾರಿ ಸಂಸ್ಥೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಿ, ‘ಅಫೀಶಿಯಲ್​’ ಎಂದು ಬರೆಯಲಾಗಿದೆ. ಪ್ರಧಾನಿ ಕಾರ್ಯಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವಿಟರ್ ಖಾತೆಯೂ ‘ಅಫೀಶಿಯಲ್’ ಎಂದು ಗುರುತಿಸಲ್ಪಟ್ಟಿದೆ.
ಮಂಗಳವಾರ (ನ.8) ಟ್ವಿಟರ್‌ನ ಕಾರ್ಯನಿರ್ವಾಹಕ ಎಸ್ತರ್ ಕ್ರಾಫೋರ್ಡ್ ಅವರು ಅಫೀಶಿಯಲ್​ ಖಾತೆಗಳು ಮತ್ತು ನೀಲಿ ಟಿಕ್​ಗಳಿಗೆ ಹಣ ಪಾವತಿಸುವವರ ನಡುವಿನ ಗೊಂದಲವನ್ನು ಕೊನೆಗೊಳಿಸಲು ಎರಡನೇ ಪರಿಶೀಲನಾ ಲೇಬಲ್ ಅನ್ನು ಹೊರತರುವುದಾಗಿ ಘೋಷಿಸಿದರು.
ಟ್ವಿಟರ್​ನಿಂದ ಪರಿಶೀಲಿಸಲ್ಪಟ್ಟ ಖಾತೆಗಳು ಈಗ ತಮ್ಮ ಯೂಸರ್​ನೇಮ್​ ಕೆಳಗೆ ಅಫೀಶಿಯಲ್​ ಎಂಬ ಲೇಬಲ್‌ ಹೊಂದಿರುತ್ತದೆ. ಈ ಖಾತೆಗಳು ಬೂದು ಬಣ್ಣದ ಚೆಕ್‌ಮಾರ್ಕ್‌ ಹೊಂದಿರುತ್ತವೆ ಎಂದು ಎಸ್ತರ್ ಕ್ರಾಫೋರ್ಡ್ ಮಾಹಿತಿ ನೀಡಿದ್ದಾರೆ.
ಅಧಿಕೃತ ಖಾತೆಗಳು ಮತ್ತು ಟ್ವಿಟರ್​ನ ಬ್ಲೂ ಟಿಕ್​ ಚಂದಾದಾರರ ನಡುವೆ ವ್ಯತ್ಯಾಸವನ್ನು ಗುರುತಿಸಲು ಬಳಕೆದಾರರಿಗೆ ಈ ಹೊಸ ಲೇಬಲ್ ಸಹಾಯ ಮಾಡಲಿದೆ. ಈ ಹಿಂದೆ ವೆರಿಫೈ ಆಗಿದ್ದ ಎಲ್ಲಾ ಖಾತೆಗಳಿಗೆ ಇನ್ನು ಮುಂದೆ ಅಫೀಶಿಯಲ್​ ಗುರುತು ಇರದೇ ಕೆಲವು ಖಾತೆಗಳು ಮತ್ರ ಈ ಸೌಲಭ್ಯಗಳನ್ನು ಪಡೆಯಲಿವೆ. ಅದಲ್ಲದೇ ಈ ಲೇಬಲ್​ಗಳನ್ನು ಯಾರಿಂದಲೂ ಖರೀದಿಸಲು ಸಾಧ್ಯವಿಲ್ಲ’ ಎಂದು ಕ್ರಾಫೋರ್ಡ್ ಹೇಳಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
