ನವದೆಹಲಿ:ಟ್ವಿಟರ್ ಖರೀದಿ ಬಳಿಕ ಸುಮಾರು 3,700 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿರುವ ಮಾಲೀಕ ಎಲಾನ್ ಮಸ್ಕ್ ಭಾರತದಲ್ಲಿ ಶುಕ್ರವಾರದಿಂದ ಉದ್ಯೋಗಿಗಳ ಕಡಿತ ಶುರು ಮಾಡಿದ್ದಾರೆ.
ಎಷ್ಟು ಮಂದಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ ಮಾರಾಟ, ಎಂಜಿನಿಯರ್​ಗಳು ಮತ್ತು ಪಾಲುದಾರಿಕೆ ವಿಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಟ್ವಿಟರ್ ಭಾರತದಲ್ಲಿನ ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ. 50ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದೆ. ಆದರೆ ಸೇಲ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಒಂದಷ್ಟು ಜನ ಕೆಲಸ ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟ್ವಿಟರ್ ಇಂಡಿಯಾ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟ್ವಿಟರ್ ವಿರುದ್ಧ ಮೊಕದ್ದಮೆಟ್ವಿಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ ವಿರುದ್ಧ ಸ್ಯಾನ್​ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಲಾಗಿದೆ. ಕಂಪನಿಯು ಫೆಡರಲ್ ಮತ್ತು ಕ್ಯಾಲಿಫೋರ್ನಿಯಾ ಕಾನೂನನ್ನು ಉಲ್ಲಂಘಿಸಿದ್ದು, ಸಾಕಷ್ಟು ಸೂಚನೆ ನೀಡದೆ ತನ್ನ ಒಟ್ಟು ಉದ್ಯೋಗ ಪಡೆಯಲ್ಲಿ ಅರ್ಧದಷ್ಟು ಮಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ ಎಂದು ವಕೀಲ ಶಾನನ್ ಲಿಸ್ -ರಿಯೊರ್ಡಾನ್ ದೂರು ದಾಖಲಿಸಿದ್ದಾರೆ. ಫೆಡರಲ್ ವರ್ಕರ್ ಅಡ್ಜಸ್​ವೆುಂಟ್ ಮತ್ತು ಮರು ತರಬೇತಿ ಅಧಿಸೂಚನೆ ಕಾಯಿದೆಯಲ್ಲಿ ಕನಿಷ್ಠ 60 ದಿನಗಳ ಮುಂಗಡ ನೋಟಿಸ್ ನೀಡದೆ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಟ್ವಿಟರ್ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮನೆಗೆ ವಾಪಸ್ಸಾಗಿ‘ನೀವು ಕಚೇರಿಗೆ ಆಗಮಿಸುವ ಹಾದಿಯಲ್ಲಿದ್ದರೆ ಮನೆಗೆ ವಾಪಸ್ಸಾಗಿ’ ಎಂದು ಟ್ವಿಟರ್ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಉದ್ಯೋಗಿಗಳಿಗೆ ಹಾಕಿರುವ ಮೇಲ್​ನಲ್ಲಿ ತಿಳಿಸಿದೆ. ಶುಕ್ರವಾರದಿಂದ ವಜಾ ಪ್ರಕ್ರಿಯೆಗಳು ಶುರುವಾಗಲಿದೆ. ಉದ್ಯೋಗಿಗಳ ಸುರಕ್ಷತೆ , ಕಚೇರಿ ಸೊತ್ತುಗಳ ಮತ್ತು ಬಳಕೆದಾರರ ಮಾಹಿತಿ ಸಂರಕ್ಷಣೆಗಾಗಿ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಎಲ್ಲ ಆಕ್ಸೆಸ್ ಬ್ಯಾಡ್ಜ್​ಗಳನ್ನು ತಡೆ ಹಿಡಿಯಲಾಗಿದೆ ’ ಎಂದು ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್​ನಲ್ಲಿ ತಿಳಿಸಲಾಗಿದೆ. ಇದರಿಂದ ಸುಮಾರು 4 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೆಲಸದಲ್ಲಿ ಉಳಿದುಕೊಳ್ಳುವ ಉದ್ಯೋಗಿಗಳಿಗೆ ಕಂಪನಿ ಮೇಲ್ ಐಡಿ ಮೂಲಕ ಮಾಹಿತಿ ನೀಡಲಾಗುವುದು. ವಜಾಗೊಳ್ಳುವ ಸಿಬ್ಬಂದಿಗೆ ಮುಂದಿನ ಕ್ರಮಗಳ ಕುರಿತು ಅವರ ವೈಯಕ್ತಿಕ ಇ-ಮೇಲ್ ವಿಳಾಸಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಮೇಲ್​ನಲ್ಲಿ ವಿವರಿಸಲಾಗಿದೆ. ಇ-ಮೇಲ್ ತಲುಪುತ್ತಿದ್ದಂತೆಯೇ ಹಲವು ಉದ್ಯೋಗಿಗಳು ಸ್ವಯಂ ರಾಜೀನಾಮೆ ನೀಡಿದ್ದಾರೆ.
ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು! ಟೀಮ್​ ಇಂಡಿಯಾ ಮಾಜಿ ಆಟಗಾರನ ಸ್ಫೋಟಕ ಹೇಳಿಕೆ

ರಾಜ್ಯಕ್ಕೆ ಹೂಡಿಕೆ ಎನರ್ಜಿ: ಆರ್ಥಿಕ ಪ್ರಗತಿಗೆ ಟಾನಿಕ್; 9.8 ಲಕ್ಷ ಕೋಟಿ ರೂ. ವಾಗ್ದಾನ

ಅವರದ ಬಿಟ್ಟ ಇವರದ ಬಿಟ್ಟ ಇದು ಯಾರ ಮನಿದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
