ಮುಂಬೈ:ಪ್ರಭಾಸ್​, ಕೃತಿ ಸನೂನ್​ ಮತ್ತು ಸೈಫ್​ ಅಲಿ ಖಾನ್​ ನಟನೆಯ ಹಾಗೂ ಓಂ ರಾವತ್​ ನಿರ್ದೇಶನ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪೌರಾಣಿಕ ಮಹಾಕಾವ್ಯ ರಾಮಾಯಣ ಆಧಾರಿತ ಈ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್​ ಸಿನಿಮಾ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ರಾಮಾಯಣವನ್ನು ತಪ್ಪಾಗಿ ವಿವರಿಸಲಾಗಿದೆ ಎಂಬ ಆರೋಪ ಇದೆ. ಹೆಚ್ಚಿನ ಪ್ರೇಕ್ಷಕರು ವಿಎಫ್​ಎಕ್ಸ್​ ಅನ್ನು ದೂಷಿಸುತ್ತಿದ್ದಾರೆ ಮತ್ತು ಸಿನಿಮಾ ಡೈಲಾಗ್​ಗಳು ಸಹ ಪೂರಕವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜಾಲತಾಣದಲ್ಲಿ ಆದಿಪುರುಷ್​ ಸಿನಿಮಾ ಕುರಿತಾದ ಸಾಕಷ್ಟು ಟ್ರೋಲ್​ ಮತ್ತು ಮೀಮ್ಸ್​ಗಳು ಹರಿದಾಡುತ್ತಿದ್ದು, ಅದರಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಸಂಬಂಧಿಸಿದ ಮೀಮ್ಸ್​ ಒಂದು ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ:ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಪ್ರಮಾಣೀಕರಿಸಲು ಮನವಿ: ವಿವಾದದ ಸುಳಿಯಲ್ಲಿ ಆದಿಪುರುಷ್​
ಟ್ವಿಟ್ಟಿಗನೊಬ್ಬ ಆದಿಪುರುಷ್​ ಸಿನಿಮಾದ ವಾನರ ಸೇನೆಯ ಪಾತ್ರಧಾರಿಯ ಮುಖವನ್ನು ಸಿಎಂ ಏಕನಾಥ್​ ಶಿಂಧೆ ಮುಖಕ್ಕೆ ಹೋಲಿಸಿದ್ದಾನೆ. ಚಿತ್ರದಲ್ಲಿರುವ ವಾನರನ ಫೋಟೋ ಮತ್ತು ಸಿಎಂ ಶಿಂಧೆ ಫೋಟೋ ಎರಡನ್ನು ಒಟ್ಟಿಗೆ ಪೋಸ್ಟ್​ ಮಾಡಿ, ನಿಮಗೆ ಗೊತ್ತಾ ಏಕನಾಥ್​ ಶಿಂಧೆ ಅವರು ಆದಿಪುರುಷ್​ ಸಿನಮಾದಲ್ಲಿದ್ದರು ಎಂದು ಬರೆಯುವ ಮೂಲಕ ಟ್ರೋಲ್​ ಮಾಡಿದ್ದಾರೆ. ಅಲ್ಲದೆ, ಸಿಎಂ ಶಿಂಧೆ ಅವರ ಅಧಿಕೃತ ಟ್ವಿಟರ್​ ಖಾತೆಗೂ ಟ್ಯಾಗ್​ ಮಾಡಲಾಗಿದೆ.
ಈ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಥಾಣೆ ನಗರ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಮ್ಮ ಫೋನ್​ ನಂಬರ್​ ಅನ್ನು ಹಂಚಿಕೊಳ್ಳಿ ಎಂದು ಕೇಳಿದ್ದಾರೆ. ಇದಕ್ಕೆ ಟ್ವಿಟರ್​ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ಏನು ಸಮಸ್ಯೆ ಸರ್​? ಎಂದು ಪ್ರಶ್ನಿಸಿದ್ದಾರೆ. ಬಳಿಕ ಥಾಣೆ ಪೊಲೀಸರು 9969365100 ಫೋನ್​ ನಂಬರ್​ ಬರೆದು ಕರೆ ಮಾಡಲು ತಿಳಿಸಿದರು.
ಸದ್ಯ ಫೋಟೋ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಟ್ವೀಟ್ ಅನ್ನು ಈವರೆಗೆ ಡಿಲೀಟ್​ ಮಾಡಿಲ್ಲ. ಸುಮಾರು 3,300 ಕ್ಕೂ ಹೆಚ್ಚು ಲೈಕ್‌ಗಳನ್ನು ಟ್ವೀಟ್​ ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಟ್ವೀಟ್​ ಮಾಡಿದವನನ್ನು ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಳ್ಳುಬೇಕೆಂದು ಟ್ವಿಟ್ಟಿಗನ ಪರ ಬ್ಯಾಟ್​ ಬೀಸಿದ್ದಾರೆ.
ಥಾಣೆ ಜಿಲ್ಲೆಯ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಿಎಂ ಏಕನಾಥ್ ಶಿಂಧೆ ಅವರ ತವರು ಥಾಣೆ ಎಂಬುದನ್ನು ಗಮನಿಸಬಹುದು. ಹೀಗಾಗಿ ಥಾಣೆ ಪೊಲೀಸರು ಈ ಟ್ವೀಟ್​ ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಸರ್ಕಾರ ನಿಮ್ಮದೇ, ಮೇಕೆದಾಟು ಜಾರಿ ಮಾಡಿ ಕನಕಪುರದಲ್ಲಿ ರೈತರ ಒತ್ತಾಯ
ಆದಿಪುರುಷ್​ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್​ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್​ ಅಲಿ ಖಾನ್​ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾವನ್ನು ಓಂ ರಾವತ್​​ ಅವರು ನಿರ್ದೇಶನ ಮಾಡಿದ್ದಾರೆ.(ಏಜೆನ್ಸೀಸ್​)
Didn’t know Eknath Shinde was in Adipurush 🤔@mieknathshinde#Adipurush#AdipurushTickets#AdipurushOnJune16#AdipurushReview#SaifAliKhanpic.twitter.com/saGqpFIhEz
— Abhay 👔 (@xavvierrrrrr)June 16, 2023

ಮಹಿಳೆಯರ ಚಿನ್ನಾಭರಣ ದೋಚಿ ಹೊಸ ಸಿನಿಮಾ ನಿರ್ಮಾಣ: ಪತ್ನಿ, ಪುತ್ರನ ಸಮೇತ ಸಿಕ್ಕಿಬಿದ್ದ ನಟ!

ಮಣ್ಣಿನಲ್ಲಿ ಹೂತಿದ್ದರೂ ಇನ್ನೂ ಹೊಳೆಯುತ್ತಿದೆ 3 ಸಾವಿರ ವರ್ಷ ಹಳೆ ಖಡ್ಗ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + nine =
Remember me
