ಭುಬನೇಶ್ವರ:ನಾವು ಪ್ರತಿನಿತ್ಯ ಮೋಸ ಮಾಡುವವರನ್ನು ಹಾಗೂ ಹೋಗುವವರನ್ನು ನೋಡಿರುತ್ತೇವೆ. ಕೆಲವೊಮ್ಮೆ ಜನರು ಇದರಿಂದ ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವುದನ್ನು ಕೇಳಿರುತ್ತೇವೆ.
ವಂಚಕರು ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳಿಗೂ ಸಹ ಪಂಗನಾಮ ಹಾಕುತ್ತಾರೆ. ಇದೀಗ ಇದಕ್ಕೆ ಪೂರವೆಂಬಂತೆ ವ್ಯಕ್ತಿ ಓರ್ವ ಐಪಿಎಸ್​ ಅಧಿಕಾರಿ ಒಬ್ಬರಿಗೆ ಈ ರೀತಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಾಡುತ್ತಿದೆ.
ಓಡಿಶಾ ಕೇಡರ್​ನ ಐಪಿಎಸ್​ ಅಧಿಕಾರಿ ಅರುಣ್​ ಬೋತ್ರಾ ಅವರು ಇತ್ತೀಚಿಗೆ ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದಿದ್ದ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಅರುಣ್​ ಬೋತ್ರಾ ಅವರು ದೋಸೆ ಸವಿಯಲೆಂದು ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದರು. ಆಹಾರ ಸೇವಿಸಿದ ನಂತರ ಬಿಲ್​ ನೋಡಿ ಅಧಿಕಾರಿ ಶಾಕ್​ ಆಗಿದ್ದು ಈ ಬಗ್ಗೆ ಹೋಟೆಲ್​ನವರಿಗೆ ತಿಳಿಸಿದ್ದಾರೆ.
Went to a restaurant alone to have a dosa. Was puzzled to see the bill that mentioned two dosa.On asking the waiter said one person sitting on other side took a masala dosa saying that he was accompanying me. He had left by the time bill came.🙄🙄🙄
ತಾವು ತೆಗೆದುಕೊಂಡಿದ್ದು ಒಂದು ದೋಸೆ ಆದರೆ, ಇಲ್ಲಿ ಎರಡಕ್ಕೆ ಬಿಲ್​ ಹಾಕಲಾಗಿದೆ ಎಂದು ಹೋಟೆಲ್​ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ ಮತ್ತು ಈ ಬಗ್ಗೆ ವಿವರಣೆಯನ್ನು ಕೇಳಿದ್ದಾರೆ.
ಇದನ್ನೂ ಓದಿ:EPFO ಅಧಿಕಾರಿ ಸೋಗಿನಲ್ಲಿ ಶಿಕ್ಷಕಿಯಿಂದ 80,000 ಸಾವಿರ ರೂ. ದೋಚಿದ ಖದೀಮ!
ಈ ವೇಳೆ ಇದಕ್ಕೆ ಉತ್ತರಿಸಿದ ಸಿಬ್ಬಂದಿ ತಮ್ಮ ಜೊತೆ ಬಂದಿದ್ದ ವ್ಯಕ್ತಿ ತಾನು ಅಧಿಕಾರಿಯ ಜೊತೆ ಬಂದಿರುವುದಾಗಿ ಹೇಳಿದ್ದರು ಬಳಿಕ ನೀವೇ ಬಿಲ್​ ಪಾವತಿಸುವುದಾಗಿ ಹೇಳಿ ಹೊರಟು ಹೋಗಿದ್ದಾರೆ.
ಇದನ್ನು ಕಂಡು ನಿಬ್ಬೆರಗಾದ ಅಧಿಕಾರಿ ತಮ್ಮ ಜೊತೆ ಯಾರು ಬಂದಿಲ್ಲ ಮತ್ತು ತಾವು ಒಬ್ಬರೇ ಬಂದಿದ್ದಾಗಿ ಹೇಳಿ ಅರುಣ್​ ಬೋತ್ರಾ ಅವರು ಎರಡು ದೋಸೆ ಬಿಲ್​ಗಳನ್ನು ಪಾವತಿಸಿದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
