ಮುಂಬೈ: ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ ಟಿ-20 ಸರಣೆಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಉದಯೋನ್ಮುಖ ಆಟಗಾರರಾದ ರಿಂಕು ಸಿಂಗ್​ ಹಾಗೂ ಋತುರಾಜ್​ ಗಾಯಕ್ವಾಡ್​ರನ್ನು ಪರಿಗಣಿಸದೆ ಇರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಈ ಕುರಿತು ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಕಾರರು ಸೇರಿದಂತೆ ಅನೇಕ ಕ್ರೀಡಾಭಿಮಾನಿಗಳು ಟ್ವೀಟ್​ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಐಪಿಎಲ್​ನಲ್ಲಿ ಗಮನಾರ್ಹ ಪ್ರದರ್ಶನದ ಹೊರತ್ತಾಗಿಯೂ ಈ ಇಬ್ಬರು ಆಟಗಾರರನ್ನು ಆಯ್ಕೆ ಸಮಿತಿ ಕಡೆಗಣಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್​ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಶೀಘ್ರದಲ್ಲೇ ಸಮಯ ಬಂದೇ ಬರುತ್ತದೆ ಎಂದು ಪರೋಕ್ಷವಾಗಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
Bit hard on Gaikwad and Rinku Singh. I guess the moment they settled, understandably, on Jaiswal & Gill, and wanted Ishan as a keeper, there was no room for Gaikwad. With Rinku, it was a straight call between him and Tilak Varma. Very difficult choice to make. Sometimes when you…
ಇದನ್ನೂ ಓದಿ:ತೋತಾಪುರಿ-2 ನಾಯಕರ ಫಸ್ಟ್​​ ಲುಕ್​ ಬಿಡುಗಡೆ
ಋತುರಾಜ್​, ರಿಂಕು ಆಯ್ಕೆ ಮಾಡದಿರುವ ಕುರಿತು ಟ್ವೀಟ್​ ಮಾಡಿರುವ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಮುಂಬೈನ ಯುವ ಬ್ಯಾಟರ್​ ತಿಲಕ್​ ವರ್ಮಾರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿದ್ದು, ಫಿನಿಶರ್​ ಸ್ಥಾನಕ್ಕೆ ರಿಂಕು ಸಿಂಗ್​ ಹೆಚ್ಚು ಸೂಕ್ತವಾಗಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತ ರಿಂಕು ಸಿಂಗ್​ ಹಾಗೂ ಋಉತುರಾಜ್​ ಗಾಯಕ್ವಾಡ್​ರನ್ನು ಆಯ್ಕೆ ಮಾಡದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳು ಬಿಸಿಸಿ ಹಾಗೂ ಆಯ್ಕೆ ಸಮಿತಿ ವಿರುದ್ಧ ಸರಣಿ ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ.
How else would Rinku Singh have been selected?#RinkuSingh#BCCI#T20I#indiasquad@BCCI@IPL@sp_Indiacricket@RinkusinghFpic.twitter.com/o34JRSAwb5
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − one =
Remember me
