ನವದೆಹಲಿ:ಕಳೆದ ಕೆಲವು ತಿಂಗಳುಗಳಿಂದ ಭಾರತ ಸರ್ಕಾರ ಹಾಗೂ ಟ್ವಿಟರ್​ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಮತ್ತೊಮ್ಮೆ ಭುಗಿಲೆದ್ದಂತಿದೆ. ಏಕೆಂದರೆ ಇತ್ತೀಚೆಗಷ್ಟೇ ನೇಮಕವಾಗಿದ್ದ ರೆಸಿಡೆಂಟ್​ ಗ್ರೀವಿಯನ್ಸ್ ಆಫೀಸರ್​ ಧರ್ಮೇಂದ್ರ ಚತುರ್​ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಭಾರತದ ಹೊಸ ಐಟಿ ಕಾಯ್ದೆ ಪ್ರಕಾರ ಸೋಷಿಯಲ್ ಮೀಡಿಯಾ ಸಂಸ್ಥೆಗಳು ರೆಸಿಡೆಂಟ್​ ಗ್ರೀವಿಯನ್ಸ್​ ಆಫೀಸರ್ ಅವರನ್ನು ನೇಮಿಸುವುದು ಕಡ್ಡಾಯ. ಅದರಂತೆ ಈ ಅಧಿಕಾರಿಯನ್ನು ನೇಮಿಸಲು ಟ್ವಿಟರ್ ಹಿಂದೇಟು ಹಾಕುತ್ತಲೇ ಬಂದಿದ್ದು, ಕೊನೆಗೂ ಇತ್ತೀಚೆಗೆ ಧರ್ಮೇಂದ್ರ ಚತುರ್ ಅವರನ್ನು ರೆಸಿಡೆಂಟ್​ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಿತ್ತು.
ಇದನ್ನೂ ಓದಿ:ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಇದೀಗ ಅವರು ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದ್ದು, ಟ್ವಿಟರ್​ನಲ್ಲಿ ಮತ್ತೆ ಆ ಸ್ಥಾನ ತೆರವುಗೊಂಡಿದೆ. ಇದರಿಂದಾಗಿ ಸದ್ಯ ಟ್ವಿಟರ್​ ಮತ್ತೆ ಭಾರತದ ಕಾನೂನನ್ನು ಪಾಲಿಸದಂತಾಗಿದೆ. ಈ ಬಗ್ಗೆ ಟ್ವಿಟರ್​ನಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಾಗಿದೆ. ಮೊನ್ನೆಯಷ್ಟೇ ಕೇಂದ್ರ ಐಟಿ ಸಚಿವರ ಟ್ವಿಟರ್ ಹ್ಯಾಂಡಲನ್ನು ಸಂಸ್ಥೆ ಕೆಲಕಾಲದ ಮಟ್ಟಿಗೆ ಬ್ಲಾಕ್ ಮಾಡಿತ್ತು. ಇದೀಗ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
ಕೇಂದ್ರ ಸಚಿವರ ಟ್ವಿಟರ್​ ಖಾತೆಯೇ ಬ್ಲಾಕ್; ಕಾಯ್ದೆ ಪಾಲಿಸಿ ಎಂದಿದ್ದವರಿಗೆ ಕಾನೂನು ಹೆಸರಲ್ಲೇ ಕಾಲೆಳೆಯಿತಾ ಟ್ವಿಟರ್​?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
