ತಮಿಳುನಾಡು:ಪ್ರತಿನಿತ್ಯ ಹೆದ್ದಾರಿಯಲ್ಲಿ ಗಸ್ತು ತಿರುಗಾಟ ನಡೆಸುವ ಪೊಲೀಸರಿಗೆ ಇಂದು (ಮೇ.12) ಇಬ್ಬರು ಅಪರಿಚಿತ ವ್ಯಕ್ತಿಗಳು ಮಾಡುತ್ತಿದ್ದ ಕೆಲಸ ನೋಡಿ ಭಾರೀ ಅಚ್ಚರಿ ಉಂಟಾಗಿದ್ದು, ಕೂಡಲೇ ವಾಹನ ನಿಲ್ಲಿಸಿ, ಓಡಿ ಹೋದಾಗ ಭಯಾನಕ ಸಂಗತಿ ಹೊರಬಿದ್ದಿತು. ತಕ್ಷಣವೇ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ವ್ಯಕ್ತಿ ಸಾವು: ಕಾರಣ ಹೀಗಿದೆ..!
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ದಿವಾಕರ್​ ಎಂಬಾತ ಮೃತ ಮಹಿಳೆ ಪ್ರಿನ್ಸಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ, ಈ ಸಂಬಂಧದಿಂದ ಮುಕ್ತಿ ಹೊಂದಬೇಕು ಎಂದು ಬಯಸಿದ ಕಿಡಿಗೇಡಿ, ತಾನು ಕೊಟ್ಟಿದ್ದ ಉಡುಗೊರೆ, ಚಿನ್ನಾಭರಣಗಳನ್ನು ವಾಪಾಸ್ ಕೊಡುವಂತೆ ಮಹಿಳೆಯನ್ನು ಪೀಡಿಸಿದ್ದಾನೆ. ಆರೋಪಿಯ ಯಾವ ಮಾತಿಗೆ ಪ್ರೇಯಸಿ ಒಪ್ಪದಿದ್ದಕ್ಕೆ ಆಕೆಯನ್ನು ಹಗ್ಗದಿಂದ ಕತ್ತುಹಿಸುಕಿ ಹತ್ಯೆಗೈದಿದ್ದಾನೆ.
ಈ ಘಟನೆ ಯಾರಿಗೂ ತಿಳಿಯಬಾರದು ಎಂದು ತಕ್ಷಣವೇ ತನ್ನ ಸ್ನೇಹಿತನ ಸಹಾಯದಿಂದ ಆಕೆಯ ಮೃತದೇಹವನ್ನು ಕಾರಿನೊಳಗೆ ತುಂಬಿಕೊಂಡು ನಿರ್ಜನ ಪ್ರದೇಶದಲ್ಲಿ ಮಣ್ಣುಮಾಡಲು ಮುಂದಾಗಿದ್ದಾನೆ. ಈ ವೇಳೆ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ, ಗುಂಡಿ ಅಗಿಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಕಾರಿನಲ್ಲಿದ್ದ ಮಹಿಳೆಯ ಶವವನ್ನು ವಶಪಡಿಸಿಕೊಂಡ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಹೆಚ್ಚುವರಿ ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).
ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್

ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
