ಪುಣೆ:ನಕಲಿ ವಸ್ತುಗಳ ಮಾರಾಟದ ಬಗ್ಗೆ ಕೇಳಿರುತ್ತೀರಿ. ಆದರೆ ನಕಲಿ ಟಿಕೆಟ್​ ಬಳಸಿ ವಿಮಾನಯಾನ ಮಾಡುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಹೌದು, ಇಂತಹ ಘಟನೆ ಪುಣೆಯಲ್ಲಿ ನಡೆದಿದೆ. ವಿಮಾನ ಟಿಕೆಟ್‌ಗಳೊಂದಿಗೆ ಲಕ್ನೋಗೆ ಪ್ರಯಾಣಿಸಲು ಯತ್ನಿಸಿದ ಇಬ್ಬರನ್ನು ಪುಣೆ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:‘ನಿಮಗೆ ನನ್ನ ಬೆಂಬಲ’: ಚಿರಂಜೀವಿ ಪುತ್ರಿಗೆ ಮಹೇಶ್ ಬಾಬು ಹೀಗೆಂದಿದ್ದೇ ತಡ..ಅಭಿಮಾನಿಗಳು..?
ಬಂಧಿತರನ್ನು ಸಲೀಂ ಗೋಲೇಖಾನ್ ಮತ್ತು ನಾಸಿರುದ್ದೀನ್ ಖಾನ್ ಎಂದು ಗುರುತಿಸಲಾಗಿದೆ. ನಂತರ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ಈ ಇಬ್ಬರು ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವನ್ನು ನಕಲಿ ಟಿಕೆಟ್‌ಗಳೊಂದಿಗೆ ಪ್ರವೇಶಿಸಿದ್ದಾರೆ. ಕೂಡಲೇ ಈ ವಿಷಯವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 30ರಂದು ಇದೇ ರೀತಿಯ ಘಟನೆ ನಡೆದಿತ್ತು ಎಂದು ವಿಮಾನ ನಿಲ್ದಾಣ ಪೊಲೀಸರು ಬಹಿರಂಗಪಡಿಸಿದ್ದಾರೆ. ನಕಲಿ ವಿಮಾನ ಟಿಕೆಟ್ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದಕ್ಕಾಗಿ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಾಟ್ಸಾಪ್ ಹ್ಯಾಕ್​ ಮಾಡಿದ್ದು ಇದಕ್ಕೇ..ಉದ್ದೇಶ ಬಿಚ್ಚಿಟ್ಟ ಸಂಸದೆ ಸುಪ್ರಿಯಾ ಸುಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
