ಚೆನ್ನೈ:ತಮಿಳುನಾಡಿನ ರಾಣಿಪೇಟ್ ಬಳಿಯ ಅರಕ್ಕೋಣಂ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಪೊಲೀಸರು ಏಕಾಏಕಿ ತಪಾಸಣೆ ನಡೆಸಿದಾಗ 16 ಕೆಜಿ ಗಾಂಜಾದೊಂದಿಗೆ ಇಬ್ಬರು ಸಿಕ್ಕಿಬಿದ್ದಾರೆ.
ಇದನ್ನೂ ಓದಿ:ಪತಂಜಲಿಯ ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ​: ಮೂವರಿಗೆ 6 ತಿಂಗಳು ಜೈಲು ಶಿಕ್ಷೆ
ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ರೈಲಿನ ಬೋಗಿಗಳಲ್ಲಿ ಶೋಧಾ ಕಾರ್ಯ ಮಾಡಿದ್ದಾರೆ. ಈ ವೇಳೆ ರೈಲ್ಲಿನಲ್ಲಿದ್ದ ಇಬ್ಬರು ಯುವಕರು ಪೊಲೀಸರನ್ನು ಕಂಡು ಗಾಬರಿಯಾಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರ ಬ್ಯಾಗ್‌ಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇವರ ಬಳಿ ಸುಮಾರು ಎಂಟು ಪ್ಯಾಕೆಟ್​ಗಳಲ್ಲಿ ಒಟ್ಟು 16 ಕೆಜಿ ಗಾಂಜಾ ಪತ್ತೆಯಾಗಿದೆ.
ಬಂಧಿತರು ಒಡಿಶಾದ ಎಸ್. ಕಾಂಚಿಪುರಂನ ಅರ್ಜುನ್ ಮಲಿಕ್ (24) ವಿ. ಮಣಿಕಂದನ್ (37) ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರೂ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಂದ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತರು ಕಡಿಮೆ ದರದಲ್ಲಿ ಗಾಂಜಾವನ್ನು ಖರೀದಿಸಿ ನಂತರ ಅದನ್ನು ತಮಿಳುನಾಡಿನ ಕಾಂಚೀಪುರಂ, ವೆಲ್ಲೂರು, ಅರಕ್ಕೋಣಂ ಮತ್ತು ತಿರುವಣ್ಣಾಮಲೈ ಮುಂತಾದ ಪಟ್ಟಣಗಳಲ್ಲಿ ಸ್ಥಳೀಯ ವಿತರಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿಚಾರಣೆ ವೇಳೆ ತಿಳುದು ಬಂದಿದೆ.ಇನ್ನು ಮುಂದೆ ರೈಲುಗಳನ್ನು ಸಹ ನಿಯಮಿತವಾಗಿ ತಪಾಸಣೆ ಮಾಡಲಾಗುವುದು ಎಂದು ನಿಷೇಧಾಜ್ಞೆ ಜಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಶ್ವಾನಗಳಿಗೂ ವಿಶೇಷ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ. ಇದಲ್ಲದೇ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ.
ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತದ ವಶಕ್ಕೆ: ಅಮಿತ್ ಷಾ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
