ಕೋಲ್ಕತ್ತ:ಮಳೆಯಿಂದಾಗಿ ನೀರು ನಿಂತಿದ್ದ ಜಾಗದಲ್ಲಿ ಮೀನು ಹಿಡಿಯುತ್ತಿದ್ದ ಇಬ್ಬರು ಬಾಲಕರ ತಲೆಯನ್ನೇ ಕತ್ತರಿಸಿ ಕೊಲೆ ಮಾಡಲಾಗಿದೆ.
ಮುರ್ಷಿದಾಬಾದ್​ ಜಿಲ್ಲೆಯ ಬೆಹ್ರಾಮ್​ಪುರದ ಕಂತಾಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮೀನು ಹಿಡಿಯಲು ತೆರಳಿದ್ದ ಬಾಲಕರು ಎರಡು ದಿನಗಳಿಂದ ಕಾಣೆಯಾಗಿದ್ದ ಬಾಲಕರ ಶವಗಳು ಭಾನುವಾರ ಪತ್ತೆಯಾಗಿವೆ. ಬಾಲಕರನ್ನು 15 ವರ್ಷದ ಮಂಜರುಲ್​ ಶೇಖ್​ ಹಾಗೂ 16 ವರ್ಷದ ತಂಜರುಲ್​ ಶೇಖ್​ ಎಂದು ಗುರುತಿಸಲಾಗಿದೆ.
ಸ್ಥಳೀಯ ಯುವಕರಿಂದಲೇ ಕೃತ್ಯ:ಈ ಇಬ್ಬರು ಬಾಲಕರು ಸಂಭಂಧಿಗಳಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳೀಯ ಯುವಕರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ;ಗಾಳಿಯಲ್ಲಿರುವ ಕರೊನಾ ವೈರಸ್​ ಪತ್ತೆಹಚ್ಚುವ ಸಾಧನ ಆವಿಷ್ಕಾರ; 10-15 ಸೆಕೆಂಡ್​ಗಳಲ್ಲಿ ಫಲಿತಾಂಶ
ಪಶ್ಚಿಮ ಬಂಗಾಳದಲ್ಲಿ ಪ್ರವಾಹದಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಹೀಗಾಗಿ ಮೀನು ಹಿಡಿಯಲೆಂದು ಇಬ್ಬರು ದೋಣಿಯಲ್ಲಿ ಹಿಜಲೇರ್​ ಮಾಥ್​ ಎಂಬ ಪ್ರದೇಶಕ್ಕೆ ತೆರಳಿದ್ದರು. ಆಗಿನಿಂದಲೇ ಇಬ್ಬರು ನಾಪತ್ತೆಯಾಗಿದ್ದರು.
ಭಾನುವಾರ ಬೆಳಗ್ಗೆ ಪೊದೆಯೊಂದರಲ್ಲಿ ಇಬ್ಬರ ರುಂಡವಿಲ್ಲದ ಶವಗಳು ಪತ್ತೆಯಾಗಿವೆ. ಅಲ್ಲಿಂದ ಅಂದಾಜು 40 ಮೀಟರ್​ ದೂರದಲ್ಲಿ ಇಬ್ಬರ ತಲೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಎಂಟು ಜನರ ವಿಚಾರಣೆ ನಡೆಸಿದ್ದಾರೆ ಮೀನು ಹಿಡಿಯುವ ವಿಚಾರವಾಗಿಯೇ ಅವರ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
