ಗುಜರಾತ್​:ಇತ್ತೀಚಿಗೆ ಗುಜರಾತ್​ನ ವಡೋದರಾದಲ್ಲಿರುವ ಮೋಟ್​ನಾಥ್​ ಸರೋವರದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ 12 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. 12 ಮೃತರ ಪೈಕಿ ಒಂದೇ ಫೋಟೋದಲ್ಲಿರುವ ಇಬ್ಬರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದ್ದು, ಮಗುವನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರು ಕಂಗಲಾಗಿದ್ದಾರೆ.
ಇದನ್ನೂ ಓದಿ:ಗಾಯನ, ನೃತ್ಯದಿಂದ ದೇವರು ಪ್ರಸನ್ನ ನಾಟ್ಯಾರಾಧನಾ ತ್ರಿಂಶೋತ್ಸವ ಉದ್ಘಾಟಿಸಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಇಬ್ಬರು ಮಕ್ಕಳಲ್ಲಿ ಒಬ್ಬ ಹೆಣ್ಣು ಮಗುವಿನ ಪೋಷಕರು ಮಾತನಾಡಿದ್ದು, ತಮ್ಮ ಮದುವೆಯಾಗಿ 17 ವರ್ಷ ಕಳೆದರೂ ಮಗು ಜನಿಸಿರಲಿಲ್ಲ. ದೇವರನ್ನು ನಿರಂತರವಾಗಿ ಪ್ರಾರ್ಥಿಸಿ ಪಡೆದ ಹೆಣ್ಣು ಮಗಳು ಇಂದು ಈ ದುರಂತದಲ್ಲಿ ಮೃತಪಟ್ಟು ನಮ್ಮನ್ನು ಅಗಲಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಾಲಕಿಯ ಪಕ್ಕದಲ್ಲಿರುವ ಹುಡುಗ ಕೂಡ ಸಾವನ್ನಪ್ಪಿದ್ದು, ತಮ್ಮ ಸೋದರ ಸಂಬಂಧಿ ಪುತ್ರ ಎಂದು ತಿಳಿಸಿದ್ದಾರೆ.
ಘಟನೆಯ ವಿವರ: ಗುರುವಾರ (ಜ.18) ಗುಜರಾತ್‌ನ ವಡೋದರಾದಲ್ಲಿ ದೋಣಿ ಮಗುಚಿದ ಪರಿಣಾಮ 12 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. 12 ವಿದ್ಯಾರ್ಥಿಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಈ ಇಬ್ಬರು ಮಕ್ಕಳು ಕೂಡ ಸೇರಿದ್ದರು. ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು, ಅವರಲ್ಲಿ ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:VIDEO| ‘ಹೀಗೆ ಕೇಳೋಕೆ ನಿಮ್ಮಲ್ಲಿ ಯಾರಿಗಾದ್ರೂ ಧೈರ್ಯ ಇದ್ಯಾ’? ಭವ್ಯ ನೇರ ಪ್ರಶ್ನೆ ಹೀಗಿದೆ….
ಘಟನೆಯ ಬೆನ್ನಲ್ಲೇ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಧೈರ್ಯ ಹೇಳಿದರು. ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಹಣವನ್ನು ಘೋಷಿಸಿದರು,(ಏಜೆನ್ಸೀಸ್).
VIDEO| ‘ಹೀಗೆ ಕೇಳೋಕೆ ನಿಮ್ಮಲ್ಲಿ ಯಾರಿಗಾದ್ರೂ ಧೈರ್ಯ ಇದ್ಯಾ’? ಭವ್ಯ ನೇರ ಪ್ರಶ್ನೆ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
