ಚೆನ್ನೈ:ತಮಿಳುನಾಡಿನ ಕಲ್ಲಕುರಿಚ್ಚಿಯಲ್ಲಿ ಅಪಘಾತಕ್ಕೆ ಒಳಗಾಗಿ ಜಖಂಗೊಂಡಿದ್ದ ವಾಹನವನ್ನು ಹೊಕ್ಕು ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಇ. ರಾಜೇಶ್ವರಿ (4) ಮತ್ತು ಎ. ವನಿತಾ (7) ಮೃತರು. ಇವರಿಬ್ಬರೂ ಆಪ್ತ ಗೆಳತಿಯರಾಗಿದ್ದು, ಸದಾ ಒಟ್ಟಿಗೆ ಇರುತ್ತಿದ್ದರು. ಗುರುವಾರ ಕೂಡ ಎಂದಿನಂತೆ ಆಟವಾಡಿಕೊಂಡಿದ್ದ ಇವರು ಜಖಂಗೊಂಡಿದ್ದ ವಾಹನದೊಳಗೆ ಹೋಗಿ ಆಟವಾಡುವಾಗ ಈ ದುರ್ಘಟನೆ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಯಾನಿಟೈಸರ್​, ಮಾಸ್ಕ್​ ಹಂಚಿಕೆ ಸೋಗಿನಲ್ಲಿ 8 ವರ್ಷದ ಬಾಲಕನ ಅಪಹರಣ
ಕುಲದೀಪಮಂಗಳಂ ಗ್ರಾಮದ ನಿವಾಸಿಗಳಾದ ಇವರಿಬ್ಬರ ಪಾಲಕರು ದಿನಗೂಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪಾಲಕರು ನೆರೆಹೊರೆಯವರಾದ್ದರಿಂದ, ಇಬ್ಬರು ಮಕ್ಕಳಲ್ಲೂ ಸ್ನೇಹ ಬೆಳೆದಿತ್ತು. ಇವರು ಇರುವ ಸ್ಥಳದ ಬಳಿ ಎರಡು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಜಖಂಗೊಂಡಿದ್ದ ವಾಹನವನ್ನು ನಿಲ್ಲಿಸಲಾಗಿತ್ತು. ಮಕ್ಕಳು ಆಟವಾಡಿಕೊಂಡು ಈ ವಾಹನದೊಳಗೆ ಹೋಗಿದ್ದಾರೆ. ದುರದೃಷ್ಟವಶಾತ್​ ನಾಲ್ಕು ಡೋರ್​ಗಳು ಲಾಕ್​ ಆಗಿವೆ. ವಾಹನದಿಂದ ಹೊರಬರಲಾಗದೆ ಮಕ್ಕಳು ಉಸಿರುಗಟ್ಟಿ ವಾಹನದೊಳಗೆ ಪ್ರಜ್ಞಾಹೀನರಾಗಿ ಬಿದ್ದಿದ್ದರು.
ದಾರಿಹೋಕರು ಇದನ್ನು ಗಮನಿಸಿ, ತಕ್ಷಣವೇ ಇವರ ಪಾಲಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಕ್ಕಳನ್ನು ವಾಹನದಿಂದ ರಕ್ಷಿಸಿ ತಿರುಕೊವಿಲೂರ್​ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
