ಮಹಾರಾಜ್ ಗಂಜ್ (ಉತ್ತರಪ್ರದೇಶ):ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಇಲ್ಲಿನ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದ ಭೂತಾನ್ ನಿರಾಶ್ರಿತರನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಶ್ರೀಲಂಕಾ ನೌಕಾಪಡೆ ಹಡುಗು ಡಿಕ್ಕಿ: ಭಾರತೀಯ ಮೀನುಗಾರ ಸಾವು, ಓರ್ವ ನಾಪತ್ತೆ
“ಚೀನಾದ ಯಾಂಗ್ ಮೆಂಗ್ ಮೆಂಗ್ (37) ಮತ್ತು ಗು ಬಾವೊಕಿಯಾಂಗ್ (35) ಬಂಧಿತರು. ಇವರು ಕಳೆದ ರಾತ್ರಿ ಸೋನೌಲಿ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ, ಅವರನ್ನು ಸಶಾಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ತಪಾಸಣೆಗಾಗಿ ತಡೆದಿದೆ, ಎಂದು ಮಹಾರಾಜ್‌ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ಹೇಳಿದ್ದಾರೆ.
” ಇವರು ಚೀನಾ ಪಾಸ್‌ಪೋರ್ಟ್ ಹೊಂದಿದ್ದರು. ಆದರೆ ಭಾರತದ ವೀಸಾ ಅಥವಾ ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿರಲಿಲ್ಲ. ಇದರಿಂದ ಅವರನ್ನು ಸೋನೌಲಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಇಬ್ಬರು ಚೀನಾ ಪ್ರಜೆಗಳು ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿದ್ದ ಟಿಬೆಟಿಯನ್ ನಿರಾಶ್ರಿತ ಲೋಬ್ಸಾಂಗ್ ಜಮ್ಯಾಂಗ್ (44) ಅವರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಟಿಬೆಟಿಯನ್ ನಿರಾಶ್ರಿತರು ಚೀನಾದ ನಾಗರಿಕರ ನಕಲಿ ಭಾರತೀಯ ಆಧಾರ್ ಕಾರ್ಡ್‌ಗಳನ್ನು ಸಹ ತಯಾರಿಸಿದ್ದರು ಮತ್ತು ಕಠ್ಮಂಡುವಿನಿಂದ ಗೋರಖ್‌ಪುರಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ಆದರೆ ಅವರು ಭದ್ರತಾ ಏಜೆನ್ಸಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂವರನ್ನು ನೇಪಾಳದಿಂದ ಭಾರತಕ್ಕೆ ಪ್ರವೇಶಿಸುವಾಗ ಎಸ್‌ಎಸ್‌ಬಿ ಯೋಧರು ಬಂಧಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಬಂಧಿತ ಇಬ್ಬರು ಚೀನಾ ಪ್ರಜೆಗಳಿಂದ ಯಾವುದೇ ಮಾನ್ಯ ದಾಖಲೆಗಳು ಲಭ್ಯವಾಗಿಲ್ಲ .ಆದರೆ ಟಿಬೆಟಿಯನ್ ನಿರಾಶ್ರಿತರು ಭಾರತೀಯ ಆಧಾರ್ ಕಾರ್ಡ್ ಮತ್ತು ಭಾರತೀಯ ವಿಳಾಸವನ್ನು ಹೊಂದಿರುವ ಪ್ಯಾನ್ ಕಾರ್ಡ್ ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
“ಅಕ್ರಮ ಪ್ರವೇಶದ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಇಬ್ಬರು ಚೀನಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆಯ ಸೆಕ್ಷನ್​ಗಳ ಅಡಿಯಲ್ಲಿ ಸ್ಥಳೀಯ ಸೋನೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಿಬೆಟಿಯನ್ ವ್ಯಕ್ತಿಯ ವಿರುದ್ಧವೂ ಸಂಬಂಧಿತ ಕಾನೂನನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಜ್‌ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಜಾರ್ಖಂಡ್: ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + eighteen =
Remember me
