ಚೆನ್ನೈ:ಮದುವೆಯಾದ ಎರಡೇ ದಿನದಲ್ಲಿ 27 ವರ್ಷದ ಯುವಕನೊಬ್ಬ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ಬುಧವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸರವಣನ್​ ಎಂದು ಗುರುತಿಸಲಾಗಿದೆ. ಈತ ಓಚೇರಿ ನಿವಾಸಿಯಾಗಿದ್ದು, ಸುಂಗುವಚತಿರಂನಲ್ಲಿರುವ ಸ್ಯಾಮ್​ಸಂಗ್​ ಮೊಬೈಲ್​ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಾಲ್ಯದಿಂದಲೇ ಸ್ನೇಹಿತೆಯಾಗಿ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು.
ಮದುವೆಯನ್ನು ಎರಡೂ ಕುಟುಂಬದವರು ಅದ್ಧೂರಿಯಾಗಿ ಏರ್ಪಡಿಸಿದ್ದರು. ಮಂಗಳವಾರ (ಸೆ.19) ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ಬಂದರು ಮತ್ತು ಆ ದಿನ ಅವರ ಮೊದಲ ರಾತ್ರಿಯಾಗಿತ್ತು.
ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಕೋಣೆಯಿಂದ ಹೊರಗೆ ಓಡಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳ ಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಇದನ್ನೂ ಓದಿ:ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ: ಮಂಡ್ಯದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸಂಭ್ರಮಾಚರಣೆ
ಚೆಂಗಲ್ಪಟ್ಟು ತಾಲೂಕು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್‌ಗೆ ಕಳುಹಿಸಿದೆ.
ಮಂಗಳವಾರ ರಾತ್ರಿ ಸರವಣನ್ ತನ್ನ ಪಾಲಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹನಿಮೂನ್‌ ಪ್ರವಾಸಕ್ಕಾಗಿ ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರದಿಂದಲೇ ಹನಿಮೂನ್​ ಪ್ರವಾಸ ಆರಂಭಿಸಬೇಕಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಮೊದಲ ರಾತ್ರಿ ಸರವಣನ್​ ಮುಖದಲ್ಲಿ ಯಾವುದೇ ಆತಂಕ ಅಥವಾ ದುಃಖದ ಲಕ್ಷಣಗಳು ಇರಲಿಲ್ಲ ಎಂದು ಪಾಲಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸರವಣನ್​ ಸಾವು ತುಂಬಾ ನಿಗೂಢವಾಗಿದೆ. ಚೆಂಗಲಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಆಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ರೈಲ್ವೇ ನಿಲ್ದಾಣದಲ್ಲಿ ಸೂಟ್ ಕೇಸ್ ಹೊತ್ತು ಕೂಲಿ ಕಾರ್ಮಿಕರ ಕಷ್ಟ ಆಲಿಸಿದ ರಾಹುಲ್ ಗಾಂಧಿ!

ನೀವು ಹೆದರಿ ಕುಳಿತರೆ ನಾವು ಬೀದಿಗಿಳಿಯಬೇಕಾಗುತ್ತೆ: ಸಿಎಂಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾರ್ನಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
