ವಿಶಾಖಪಟ್ಟಣ:ಕಳೆದೆರಡು ತಿಂಗಳಲ್ಲಿ ಮೂರು ಅನಿಲ ದುರಂತಗಳಿಗೆ ಸಾಕ್ಷಿಯಾಗಿದೆ ವಿಶಾಖಪಟ್ಟಣ. ಮೂರು ಪ್ರಕರಣಗಳಲ್ಲಿ ಒಟ್ಟು 13 ಜನರು ಮೃತಪಟ್ಟಂತಾಗಿದೆ.
ಮೂರನೇ ಅನಿಲ ದುರಂತದಲ್ಲಿ ಇಬ್ಬರು ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಬಗ್ಗೆ ವರದಿ ಕೇಳಿರುವ ಸಿಎಂ ಜಗನ್​ಮೋಹನ್​ ರೆಡ್ಡಿ, ಕಾರ್ಖಾನೆಯನ್ನು ಮುಚ್ಚಲು ಆದೇಶಿಸುವಂತೆ ಜಿಲ್ಲಾಧಿಕಾರಿ ವಿನಯ್​ಚಂದ್​ಗೆ ಸೂಚಿಸಿದ್ದಾರೆ.
ಇದನ್ನೂ ಓದಿ;ಕರೊನಾ ಮಾತ್ರವಲ್ಲ, ಲಾಕ್​ಡೌನ್​ ಕೂಡ ಹೆಚ್ಚುತ್ತಿದೆ….! ಏಳು ರಾಜ್ಯಗಳಲ್ಲಿ ನಿರ್ಬಂಧ ವಿಸ್ತರಣೆ
ಇಲ್ಲಿನ ಫರ್ವಾಡಾದ ಫಾರ್ಮಾ ಸಿಟಿಯಲ್ಲಿರುವ ಸೈನಾರ್​ ಲೈಫ್​ ಸೈನ್ಸ್​ಸ್​ನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಬೆಂಜಿನಿಡ್ಯಾಜೋಲ್​ ಅನಿಲ ಸೋರಿಕೆಯಾಗಿತ್ತು. ಈ ವೇಳೆ 30- 35 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಅಸ್ವಸ್ಥಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಒಬ್ಬ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಆರ್​.ಕೆ. ಮೀನಾ ತಿಳಿಸಿದ್ದಾರೆ.
ಸದ್ಯ ರಾಸಾಯನಿಕ ಅನಿಲ ಕಾರ್ಖಾನೆಯಿಂದ ಹೊರಗೆ ವ್ಯಾಪಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;ಬೊಜ್ಜು ಇಳಿಸುವ ಔಷಧ ಕರೊನಾವನ್ನು ಕರಗಿಸುತ್ತೆ…!
ಈ ಘಟನೆ ಕಳೆದರಡು ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಮೂರನೇ ಅನಿಲ ದುರಂತವಾಗಿದೆ. ಎರಡು ದಿನಗಳ ಹಿಂದಷ್ಟೇ ಕರ್ನೂಲ್​ ಜಿಲ್ಲೆ ನಂದ್ಯಾಲದ ಸ್ಪೈ ಆಗ್ರೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಮ್ಯಾನೇಜರ್​ ಮೃತಪಟ್ಟಿದ್ದ.
ಶಾಲೆ- ಕಾಲೇಜು ಜು.31ರ ವರೆಗೂ ಬಂದ್​; ಆನ್​ಲೈನ್​ ಶಿಕ್ಷಣಕ್ಕೆ ಪ್ರೋತ್ಸಾಹ; ಕೇಂದ್ರ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + seven =
Remember me
