|ಡಾ.ಎ.ಪಿ.ಭಟ್ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ, ಉಡುಪಿ
ಗ್ರಹಣಗಳು ಅಪರೂಪವೇನಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಸಂಭವಿಸುತ್ತಿರುತ್ತವೆ. ಸೂರ್ಯಗ್ರಹಣವಾದರೆ ಭೂಮಿಯ ಕೆಲವೇ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಚಂದ್ರಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಈ ವರ್ಷ ದೀಪಾವಳಿಯಿಂದ ಲಕ್ಷದೀಪೋತ್ಸವಕ್ಕೆ ಎರಡು ಅಪೂರ್ವ ಗ್ರಹಣ ಗೋಚರಿ ಸಲಿವೆ. ದೀಪಾವಳಿ ಅಮಾವಾಸ್ಯೆಯಂದು (ಅ.25) ಪಾರ್ಶ್ವ ಸೂರ್ಯಗ್ರಹಣ, ಕಾರ್ತಿಕದ ಹುಣ್ಣಿಮೆಯಂದು (ನ.8) ಪಾರ್ಶ್ವ ಚಂದ್ರಗ್ರಹಣವಿದೆ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಬಲು ಅಪರೂಪ. ಏಕೆಂದರೆ ಸೂರ್ಯ ಗ್ರಹಣ ಸೂರ್ಯಾಸ್ತಕ್ಕೆ ಹಾಗೂ ಚಂದ್ರಗ್ರಹಣ ಚಂದ್ರೋ ದಯಕ್ಕೆ ನಡೆಯಲಿದೆ. ಇದೇ ಈ ಗ್ರಹಣಗಳ ವಿಶೇಷ.
ಪಾರ್ಶ್ವ ಸೂರ್ಯಗ್ರಹಣ:ಈ ಗ್ರಹಣ ಅ.25ರ ಸಂಜೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯವಾಗುತ್ತದೆ. ಸಂಜೆ 5.50ಕ್ಕೆ ಅತ್ಯಂತ ಹೆಚ್ಚೆಂದರೆ 22 ಅಂಶ ಹಾಗೂ ದೆಹಲಿಯವರಿಗೆ ಪಾರ್ಶ್ವ ಗ್ರಹಣ 55 ಅಂಶ ಗೋಚರಿಸಲಿದೆ. ಉಡುಪಿಯಲ್ಲಿ ಸೂರ್ಯಾಸ್ತ 6.06ಕ್ಕೆ ಇರುವುದರಿಂದ ಗ್ರಹಣದ ಸೂರ್ಯ ಕಣ್ಣು ಮಿಣುಕಿಸುವಂತೆ ಗ್ರಹಣದೊಂದಿಗೆ ಅಸ್ತಂಗತನಾಗುತ್ತಾನೆ. ನ.8ಕ್ಕೆ ಚಂದ್ರಗ್ರಹಣ: ಹುಣ್ಣಿಮೆಯ ಚಂದ್ರ ಉದಯಿಸುವಾಗಲೇ 6ಕ್ಕೆ ಪಾರ್ಶ್ವ ಗ್ರಹಣ. ಅದೂ ಬರೀ 19 ನಿಮಿಷ ಮಾತ್ರ. ಸಂಜೆ 6.19ಕ್ಕೆ ಗ್ರಹಣ ಮುಗಿಯುತ್ತದೆ. ಕಣ್ಣು ಮಿಣುಕಿಸುವಂತೆ ಗ್ರಹಣದ ಚಂದ್ರನ ಉದಯ. ನೋಡಲು ಬಲು ಚೆಂದ. ಬರಿ ಕಣ್ಣಿನಿಂದಲೇ ನೋಡಬಹುದು. ಮಧ್ಯಾಹ್ನ 2.39ಕ್ಕೆ ಪಾರ್ಶ್ವ ಗ್ರಹಣ ಪ್ರಾರಂಭ. 3.46ಕ್ಕೆ ಖಗ್ರಾಸ. 5.11ಕ್ಕೆ ಖಗ್ರಾಸ ಅಂತ್ಯ. 6.19ಕ್ಕೆ ಪಾರ್ಶ್ವ ಅಂತ್ಯ. ಭಾರತದಲ್ಲಿ ಗ್ರಹಣದ ಅಂತ್ಯದಲ್ಲಿ ಚಂದ್ರೋದಯದಲ್ಲಿ 19 ನಿಮಿಷ ಮಾತ್ರ ಕಾಣಬಹುದು.
ನೆರಳು ಬೆಳಕಿನ ಆಟ:ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯವೇ ಎಂದು ಪ್ರೊ.ಜಯಂತ್ ವಿ. ನಾರ್ಲೀಕರ್ ತಮ್ಮ ಸೆವೆನ್ ವಂಡರ್ಸ ಆಫ್ ಕಾಸ್ಮಸ್ ಪುಸ್ತಕದಲ್ಲಿ ತಿಳಿಸಿದ್ದಾರೆ. ಸೂರ್ಯನಿಂದ ಭೂಮಿ ಹಾಗೂ ಚಂದ್ರನ ದೂರದ ಅನುಪಾತ ಹಾಗೂ ಚಂದ್ರ ಮತ್ತು ಸೂರ್ಯನ ವ್ಯಾಸಗಳ ಅನುಪಾತ ಇವೆರಡೂ ಸಮವಾಗಿರುವುದರಿಂದ ನಮಗೆ ಸೂರ್ಯ -ಚಂದ್ರ ಒಂದೇ ಗಾತ್ರದಲ್ಲಿರುವಂತೆ ಭಾಸವಾಗುತ್ತದೆ. ಸೂರ್ಯ -ಭೂಮಿಯ ಪಥಗಳ ಸಮತಲ ಸುಮಾರು 5 ಡಿಗ್ರಿ ಓರೆಯಾಗಿವೆ. ಈ ಸಮತಲಗಳು ಸಂಧಿಸುವಲ್ಲಿ, ಪ್ರತಿ ಆರು ತಿಂಗಳಿಗೊಮ್ಮೆ ಸೂರ್ಯ, ಚಂದ್ರ ಹಾಗೂ ಭೂಮಿ ನೇರ ಬರುವುದರಿಂದ ಈ ಗ್ರಹಣವೆಂಬ ನೆರಳು ಬೆಳಕಿನ ಆಟ ನಡೆಯುತ್ತಿರುತ್ತದೆ.
ಅಂದಿನ ಪರಿಸ್ಥಿತಿಯೇ ಬೇರೆ, ಈಗ ಹಾಗಿಲ್ಲ: ಯಕ್ಷಗಾನಕ್ಕೆ ಕಾಲಮಿತಿ ಒಳಿತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 7 =
Remember me
