ನೋಯ್ಡಾ:ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜನರು ಬಣ್ಣಗಳಲ್ಲಿ ಮುಳುಗಿರುವುದು ಕಂಡುಬರುತ್ತದೆ. ಏತನ್ಮಧ್ಯೆ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಜನರು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು. ವಿಡಿಯೋದಲ್ಲಿ ನೋಡುವ ಹಾಗೆ ಸ್ಕೂಟರ್‌ನಲ್ಲಿ ಮೂರು ಜನರು ಕುಳಿತುಕೊಂಡಿದ್ದು, ಅದರಲ್ಲಿ ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗನಿದ್ದಾನೆ. ಹುಡುಗ ಸ್ಕೂಟರ್ ಓಡಿಸುತ್ತಿದ್ದಾನೆ ಮತ್ತು ಹುಡುಗಿಯರು ಹಿಂಬದಿಯಲ್ಲಿ ಮುಖಾಮುಖಿಯಾಗಿ ಕುಳಿತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ‘ಮೋಹೆ ರಂಗ್ ಲಗಾ ದೇ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಡುಗಿಯರು ಡ್ಯಾನ್ಸ್ ಮಾಡುತ್ತಿದ್ದಾರಾ ಅಥವಾ ರೋಮ್ಯಾನ್ಸ್ ಮಾಡುತ್ತಿದ್ದಾರೆಯೇ ಎಂದು ನೀವೇ ಊಹಿಸಬಹುದು. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮಾತ್ರ ಈ ವಿಡಿಯೋ ನೋಡಿದ ನಂತರ ಸಿಟ್ಟು ಹೊರಹಾಕಿದ್ದು, ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.
#HoliCelebration@uptrafficpolice@Uppolice@dtptrafficगाड़ी नंबर – (UP16C – X0866)बिना हेलमेट इए ड्राइविंग ट्रिपिंलिंग और स्टंट किया जा रहा है आपसे अनुरोध है इन लोगो पर करएवाही करें@zoo_bear@WasimAkramTyagi@007AliSohrabpic.twitter.com/FpJXzGWtfr
— Shiekh Mohd Aqib (@Mohd_Aqib9)March 25, 2024

ಈ ವಿಡಿಯೋ ಗ್ರೇಟರ್ ನೋಯ್ಡಾದಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಇಬ್ಬರು ಹುಡುಗಿಯರು ರೀಲ್ಸ್​​​​ಗಾಗಿ ಇಂತಹ ಹುಚ್ಚಾಟ ಮಾಡುತ್ತಿದ್ದು, ಮೂರು ಜನ ಹೆಲ್ಮೆಟ್ ಇಲ್ಲದೇ ಹೋಗುತ್ತಿರುವುದನ್ನು ಸಹ ಗಮನಿಸಬಹುದು. ಪೊಲೀಸರು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬಳಕೆದಾರರು “ಹುಡುಗಿಯರು ಹೋಳಿ ಹೆಸರಿನಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ”, “ದೆಹಲಿ ಮೆಟ್ರೋದ ಪರಿಣಾಮ ಗ್ರೇಟರ್ ನೋಯ್ಡಾವನ್ನು ತಲುಪಿದೆ, ಇದನ್ನು ನಾವು ನೀಚತನದ ಉತ್ತುಂಗ ಅಥವಾ ರೀಲ್ಸ್ ಭೂತ ಎಂದು ಕರೆಯಬಹುದೇ?, ಈ ಇಬ್ಬರು ಹುಡುಗಿಯರು ಇಂತಹ ಅಶ್ಲೀಲಕರ ಕೆಲಸ ಮಾಡಬಹುದೇ” , ” ಇವರು ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸುತ್ತಾರೆ? ಮಕ್ಕಳೂ ಕೂಡ ಈ ವಿಡಿಯೋ ನೋಡುತ್ತಾರೆ”, “ಹಬ್ಬದ ಹೆಸರಿನಲ್ಲಿ ಅಶ್ಲೀಲತೆ ಮತ್ತು ಧಾರ್ಮಿಕ ಸ್ಥಳಗಳ ಮುಂದೆ ನೃತ್ಯ ಮತ್ತು ಹಾಡುಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಅಂತಹವರಿಗೆ ಲಗಾಮು ಹಾಕುವುದು ಬಹಳ ಮುಖ್ಯ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
उक्त शिकायत का संज्ञान लेते हुए संबंधित वाहन के विरुद्ध यातायात नियमों का उल्लंघन करने पर नियमानुसार ई-चालान (जुर्माना 33000/- रुपए) की कार्यवाही की गई है।यातायात हेल्पलाइन नं0- 9971009001pic.twitter.com/8iOBgEESgW
— Noida Traffic Police (@noidatraffic)March 25, 2024

ವಿಡಿಯೋ ವೈರಲ್ ಆದ ನಂತರ ಅಂತಿಮವಾಗಿ ನೋಯ್ಡಾ ಪೊಲೀಸರು 33 ಸಾವಿರ ರೂ. ದಂಡ ಹಾಕಿದ್ದು, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೊಲೀಸರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ಭೂಮಿಯ ನೆರೆಹೊರೆಯಲ್ಲಿವೆ ಏಲಿಯನ್ಸ್…2030ರ ವೇಳೆಗೆ ಪತ್ತೆ ಮಾಡಲಿದೆ ನಾಸಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 11 =
Remember me
