ಉತ್ತರಪ್ರದೇಶದ:ಯುವಕ-ಯುವತಿಯರು ಮದುವೆಯಾದರೆ ಆಶ್ಚರ್ಯ ಪಡಬೇಕಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡಿಯೋರಿಯಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಇಬ್ಬರು ಮಹಿಳೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಅದ್ಧೂರಿಯಾಗಿ ನೆರವೇರಿದೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ದೇವಸ್ಥಾನಕ್ಕೆ ತೆರಳಿ ಅತ್ಯಂತ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಇದೀಗ ಇವರ ಮದುವೆಯ ವಿಡಿಯೋ ವೈರಲ್ ಆಗಿದೆ. ಈ ಮದುವೆ ಡಿಯೋರಿಯೋ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಹಿಳೆಯರು 23 ಮತ್ತು 28 ವರ್ಷ ವಯಸ್ಸಿನವರಾಗಿದ್ದು, ಇಬ್ಬರೂ ಪಶ್ಚಿಮ ಬಂಗಾಳದವರು.

ಪಶ್ಚಿಮ ಬಂಗಾಳದ ಜಯಶ್ರೀ ರಾಹುಲ್ ಎಂಬ 28 ವರ್ಷದ ಯುವತಿ ರಾಖಿ ದಾಸ್ ಎಂಬ 23 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಡಿಯೋರಿಯಾದ ಆರ್ಕೆಸ್ಟ್ರಾ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ಭೇಟಿಯಾಗಿ ಪರಿಚಯ ಸ್ನೇಹವಾಗಿ.. ಸ್ನೇಹ ಪ್ರೀತಿಯಾಗಿ.. ಪ್ರೀತಿಯಿಂದ ಮದುವೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಇಬ್ಬರು ಹುಡುಗಿಯರ ಮದುವೆ ಈಗ ಹಾಟ್ ಟಾಪಿಕ್ ಆಗಿಬಿಟ್ಟಿದೆ.
ಜಯಶ್ರೀ ರಾಹುಲ್ ಮತ್ತು ರಾಖಿ ದಾಸ್ ಎಂಬ ಇಬ್ಬರು ಯುವತಿಯರು ಡಿಯೋರಿಯಾ ಜಿಲ್ಲೆಯ ಭಟ್ ಪರ್ ರಾಣಿಯ ಭವಾನಿ ದೇವಸ್ಥಾನದಲ್ಲಿ ವಿವಾಹವಾದರು. ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಯಶ್ರೀ ರಾಹುಲ್ ವರನ ಗೆಟಪ್‌ನಲ್ಲಿ ಕುರ್ತಾ ಮತ್ತು ಪೈಜಾಮ ಇದ್ದರೆ, ರಾಖಿ ದಾಸ್ ವಧುವಿನ ಮಗಳಂತೆ ಸೀರೆಯನ್ನು ಧರಿಸಿದ್ದರು. ಮದುವೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.
ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗ್ತಿದ್ಯಾ? ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ…

ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

ಉದ್ಯಮಿ ಜತೆ ಡೇಟಿಂಗ್, ಶೀಘ್ರದಲ್ಲೇ ಮದ್ವೆ; ಕ್ಲಾರಿಟಿ ಕೊಟ್ಟ “ಕೋಟಿಗೊಬ್ಬ-3” ಚಿತ್ರದ ಹಾಟ್ ಬ್ಯೂಟಿ..

success story; ಸೈಕಲ್​​ನಲ್ಲಿ ಪುಸ್ತಕ ಮಾರಾಟ ಮಾಡ್ತಿದ್ದವ ಇಂದು ಪುಸ್ತಕ ಕಾರ್ಖಾನೆಯ ಮಾಲೀಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
