ಲಖನೌ:ಮದುವೆ ಎಂದರೆ ವಧುವಿನ ಮನೆಗೆ ವರನ ಕುಟುಂಬ ದಿಬ್ಬಣ ಕಟ್ಟಿ ಬಂದು ಮದುವೆ ಮಾಡಿಸಿಕೊಂಡು ಸೊಸೆಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಗೆ ವಧುವಿನ ಮನೆಗೆ ಒಂದಲ್ಲ ಬದಲಾಗಿ ಎರಡು ದಿಬ್ಬಣ ಬಂದಿದೆ. ಮದುವೆ ಮನೆಯಲ್ಲೇ ಭಾರೀ ಡ್ರಾಮಾ ಕೂಡ ನಡೆದಿದೆ.
ಉತ್ತರ ಪ್ರದೇಶದ ಕನ್ನೌಜ್ ಗ್ರಾಮದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಯುವತಿಗೆ ಆಕೆಯ ತಂದೆ ತಾಯಿ ಹುಡುಗನೊಬ್ಬನನ್ನು ನಿಶ್ಚಯಿಸಿ ಮದುವೆ ನಡೆಸುವ ಸಂಭ್ರಮದಲ್ಲಿದ್ದರು. ಅದರಂತೆ ಮದುವೆಯ ದಿನ ವರನ ಕಡೆಯವರ ದಿಬ್ಬಣ ವಧು ಮನೆ ಬಾಗಿಲಿಗೆ ಬಂದಿದ್ದು, ಅದೇ ಸಂಭ್ರಮದಲ್ಲಿ ವಧುವಿನ ಕುಟುಂಬದವರು ದಿಬ್ಬಣವನ್ನು ಬರಮಾಡಿಕೊಂಡಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲಿ ಇನ್ನೊಂದು ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದಿದೆ. ಯುವತಿಯೊಂದಿಗೆ ಪ್ರೀತಿಯಲ್ಲಿದ್ದ ಯುವಕ ತನ್ನ ಕುಟುಂವಸ್ಥರನ್ನು ಕರೆದುಕೊಂಡು ಬಂದಿದ್ದಾನೆ. ಇದನ್ನು ಕಂಡ ವಧು ಖುಷಿ ಪಟ್ಟರೆ ಬೇರೆಲ್ಲರೂ ಅಘಾತಕ್ಕೊಳಗಾಗಿದ್ದಾರೆ.
ಗ್ರಾಮದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆಯುತ್ತಿದೆ ಎಂದು ಯಾರೋ ಪೊಲೀಸರಿಗೆ ತಿಳಿಸಿದ್ದು, ಪೊಲೀಸರೂ ಸ್ಥಳಕ್ಕೆ ಬಂದಿದ್ದಾರೆ. ವಧು, ವರ ಮತ್ತು ವಧುವಿನ ಪ್ರಿಯಕರನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಮೂರೂ ಕುಟುಂಬದವರು ಪರಸ್ಪರ ಜಗಳ ಆಡಿಕೊಳ್ಳಲು ಆರಂಭಿಸಿದ್ದಾರೆ. ಪೊಲೀಸರು ರಾಜಿ ಮಾಡಿದ್ದು, ವಧುವಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಕ್ಯಾನ್ಸಲ್​ ಆದ ನೋವಿನಲ್ಲಿದ್ದ ವರನಿಗೆ ಅದೇ ಗ್ರಾಮದ ಕುಟುಂಬವೊಂದು ತಮ್ಮ ಮಗಳನ್ನು ಕೊಡಲು ನಿರ್ಧರಿಸಿದ್ದು, ಅದೇ ದಿನ ವಧುವಿನ ಮನೆ ಅಂಗಳದಲ್ಲೇ ಆತನ ಮದುವೆ ಕಾರ್ಯಕ್ರಮವೂ ನಡೆದಿದೆ. ಇದೀಗ ಎರಡೂ ಜೋಡಿ ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಮದುವೆ ದಿನ ಒಂದೇ ಫೋನ್​ ಕಾಲ್​ಗೆ ಕುಸಿದುಬಿದ್ದ ವಧು! ವಿಡಿಯೋ ನೋಡಿ ಮದುವೆ ಕ್ಯಾನ್ಸಲ್​ ಎಂದ ವರ!

ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್​ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
