ಗಾಂಧಿನಗರ (ಗುಜರಾತ್​):ಗುಜರಾತ್​ ರಾಜ್ಯಸಭಾ ಚುನಾವಣೆಗೆ ಇನ್ನೆರಡು ವಾರಗಳು ಮಾತ್ರ ಇವೆ. ಜೂನ್​ 19ರಂದು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಇದಾಗಲೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಪಟೇಲ್​ ಅವರು ವಡೋದರಾದ ಕರ್ಜನ್ ಸ್ಥಾನದಿಂದ ಹಾಗೂ ಚೌಧರಿ ವಲ್ಸಾದ್‌ನ ಕಪ್ರದ ಸ್ಥಾನದಿಂದ ಗೆದ್ದಿದ್ದರು.
ಇವರಿಬ್ಬರ ರಾಜೀನಾಮೆಯನ್ನು ಸ್ಪೀಕರ್​ ಅಂಗೀಕರಿಸಿದ್ದು, ಈ ಕುರಿತು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್​ನಲ್ಲಿಯೇ ಕಾಂಗ್ರೆಸ್ಸಿನ ಐವರು ಶಾಸಕರು ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:ಭಾರತದಲ್ಲಿ ಕರೊನಾ: ಆರೋಗ್ಯ ಇಲಾಖೆ ನೀಡಿದೆ ಸಿಹಿ ಸುದ್ದಿ- 18 ವಾರಗಳ ನಡೆ ಹೇಗಿತ್ತು?
ಗುಜರಾತಿನಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಬಿಜೆಪಿಯಿಂದ ಮೂವರು ಮತ್ತು ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅಭಯ್ ಭಾರದ್ವಾಜ್, ರಮಿಲಾ ಬಾರಾ ಮತ್ತು ನರ್ಹಾರಿ ಅಮೀನ್ ಹಾಗೂ ಕಾಂಗ್ರೆಸ್​ನಿಂದ ಶಕ್ತಿಸಿಂಹ್ ಗೋಹಿಲ್ ಮತ್ತು ಭರತ್ ಸಿಂಹ್ ಸೋಲಂಕಿ ಚುನಾವಣೆಗೆ ಕಣದಲ್ಲಿದ್ದಾರೆ.
182 ಸದಸ್ಯರನ್ನು ಒಳಗೊಂಡಿರುವ ಗುಜರಾತ್​ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ 103 ಶಾಸಕರು ಇದ್ದರೆ, ಕಾಂಗ್ರೆಸ್​ನ 66 ಶಾಸಕರು ಇದ್ದರು.
ಇದನ್ನೂ ಓದಿ:ಪತ್ನಿ ಮೇಲೆ ಸಂಶಯ: ಇಡೀ ಕುಟುಂಬವನ್ನು ಕೊಡಲಿಯಿಂದ ಕೊಚ್ಚಿದ ಪತಿ; ಇಬ್ಬರ ಕಗ್ಗೊಲೆ!
ಕಾಂಗ್ರೆಸ್​ನ ಶಾಸಕರಾದ ಕಿರಿತ್ ಪಟೇಲ್, ಲಲಿತ್ ವಾಸೋಯಾ ಮತ್ತು ಲಲಿತ್ ಕಗಥರಾ ಅವರು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಇದು ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಒಳಗಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ನಿರಾಕರಿಸಿರುವ ಶಾಸಕರು, ತಾವು ಕರೊನಾವೈರಸ್​ ಕುರಿತಂತೆ ಚರ್ಚೆಗೆ ಹೋಗಿರುವುದಾಗಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆಯು ಮಾರ್ಚ್ 26ರಂದು ನಡೆಯಬೇಕಿತ್ತು. ಕರೊನಾ ವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ, ಇದನ್ನು ಜೂನ್​ 19ಕ್ಕೆ ಮುಂದೂಡಲಾಗಿದೆ.
ಶಾಲೆ ಆರಂಭ ಯಾವಾಗ? ಶಿಕ್ಷಣ ಸಚಿವರ ಪ್ರಶ್ನೆಗೆ ಪುಟ್ಟ ಬಾಲೆ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 11 =
Remember me
