ಜೋಧಪುರ:ಎಂಥ ಕ್ರಿಮಿನಲ್ ಆಗಿದ್ದರೂ ಏನಾದರೂ ಒಂದು ಸುಳಿವು ಬಿಟ್ಟು ಹೋಗಿರುತ್ತಾರೆ ಎಂಬುದು ಅಪರಾಧ ಲೋಕದಲ್ಲಿ ಪ್ರಚಲಿತದಲ್ಲಿರುವಂಥ ಒಂದು ಮಾತು. ಇಲ್ಲಿಬ್ಬರು ಕಳ್ಳರ ಪತ್ತೆಗೆ ಒಂದು ಬ್ಲೇಡ್ ಸುಳಿವು ನೀಡಿದೆ. ವಿಶೇಷ ಎಂದರೆ ಇದೊಂದು ಸುಳಿವು ಪಡೆಯಲು ರೈಲ್ವೆ ಪೊಲೀಸರು ಸುಮಾರು 400 ಅಂಗಡಿಗಳಿಗೆ ಅಲೆದಾಡಿದ್ದಾರೆ.
ರಾಜಸ್ಥಾನದ ಜೋಧಪುರ-ಪಾಲಿ ರೈಲುಮಾರ್ಗದಲ್ಲಿ ಬೊಮದಾರ ಮತ್ತು ರಾಜ್​ಕಿಯಾವಾಸ್​ ರೈಲ್ವೇ ಸ್ಟೇಷನ್​ಗಳ ನಡುವೆ ಕಳ್ಳರು ಇತ್ತೀಚೆಗೆ ಹೈ ವೋಲ್ಟೇಜ್​ ಕೇಬಲ್​ ಕದ್ದುಕೊಂಡು ಹೋಗಿದ್ದರು. ನೂರು ಮೀಟರ್​ ಉದ್ದದ ತಾಮ್ರದ ತಂತಿಯನ್ನು ಒಂದು ವಾರದ ಹಿಂದೆ ಕಳವು ಮಾಡಿದ್ದರ ಈ ಕುರಿತು ತನಿಖೆಗಿಳಿದ ರೈಲ್ವೆ ಪೊಲೀಸರಿಗೆ ಇದು ಹೈ-ಟೆನ್ಷನ್​ ಪ್ರಕರಣವಾಗಿತ್ತು.
ಅದಾಗ್ಯೂ ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಶಂಕರ್​ ಲಾಲ್​ (25) ಮತ್ತು ಹನ್ಸ್​ ರಾಜ್​ (28) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆದರೆ ಈ ಕಳ್ಳರು ಕಳ್ಳತನಕ್ಕೆ ಬಳಸಿದ್ದ ಉಪಕರಣವೊಂದನ್ನು ಸ್ಥಳದಲ್ಲಿ ಬಿಟ್ಟುಹೋಗಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು ಅದನ್ನು ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದರು.
ತನಿಖೆಗಿಳಿದ ರೈಲ್ವೆ ಪ್ರೊಟೆಕ್ಷನ್​ ಫೋರ್ಸ್​ ತಂಡದವರು ಸುತ್ತಮುತ್ತಲ ಹಳ್ಳಿಗಳ 400 ಅಂಗಡಿಗಳಿಗೆ ತೆರಳಿ ಮಾಹಿತಿ ಕಲೆಹಾಕಿದ್ದರು. ಆ ಪೈಕಿ ಕಳ್ಳತನ ನಡೆದ ಐದು ಗಂಟೆಗಳಿಗೆ ಮೊದಲು ಪಾಲಿಯ ಹಾರ್ಡ್​ವೇರ್​ ಅಂಗಡಿಯೊಂದರಲ್ಲಿ ಯಾರೋ ಸಾ ಬ್ಲೇಡ್ ಖರೀದಿಸಿದ್ದು ತಿಳಿದುಬಂದಿತ್ತು. ಈ ಸುಳಿವಿನ ಮೇರೆಗೆ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಅದು ಶಂಕರ್​ ಲಾಲ್​ ಮತ್ತು ಹನ್ಸ್​ ರಾಜ್​ ಎಂಬುದು ತಿಳಿಯಿತು.
ಈ ಮೇರೆಗೆ ಕಾರ್ಯಾಚರಣೆಗೆ ಇಳಿದ ರೈಲ್ವೆ ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದು, ಅವರು ಇನ್ನಿಬ್ಬರ ಜತೆ ಸೇರಿ ಈ ಕಳ್ಳತನ ಎಸಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇದೀಗ ಇನ್ನಿಬ್ಬರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಪೊಲೀಸ್ ದಂಡ ವಿಧಿಸಿದ್ದಕ್ಕೆ ಸ್ಟೇಷನ್​ ಪವರ್​ ಕಟ್ ಮಾಡಿದ ಲೈನ್​ಮ್ಯಾನ್​; ಠಾಣೆಯಲ್ಲಿ ಮೀಟರೇ ಇರ್ಲಿಲ್ಲ!

ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 13 =
Remember me
