ರಾಘವ ಶರ್ಮ ನಿಡ್ಲೆ
ಅಯೋಧ್ಯೆ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ ಜನವರಿ 14ರ ಮಕರ ಸಂಕ್ರಾಂತಿ ವೇಳೆಗೆ ಮಂದಿರವನ್ನು ಲೋಕಾರ್ಪಣೆಗೊಳಿಸುವ ದಿಕ್ಕಿನಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ನೇಪಾಳದ ಕಾಳಿ ಗಂಡಕಿ ನದಿಯಲ್ಲಿದ್ದ 2 ಬೃಹತ್ ಗಾತ್ರದ ಪವಿತ್ರ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿದ್ದು, ನೇಪಾಳದ ಸಂತ ಮಹಾಂತ ರಾಮತಪಸ್ವರದಾಸ ಸ್ವಾಮೀಜಿ, ಮಾಜಿ ಉಪಪ್ರಧಾನಿ ವಿಮಲೇಂದ್ರ ನಿಧಿ ಜನಕಪುರಿಯಲ್ಲಿರುವ ಜಾನಕಿ ಮಂದಿರದ ಪೂಜಾರಿ ಸೇರಿ ಹಲವು ಗಣ್ಯರು ಶಿಲೆಗಳನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ಶಿಲೆಗಳನ್ನು ಅಯೋಧ್ಯೆಯ ರಾಮಸೇವಕ ಪುರದಲ್ಲಿ ಇರಿಸಲಾಗಿದೆ. ಭಗವಾನ್ ಶ್ರೀರಾಮನ ಪತ್ನಿ ಸೀತಾಮಾತೆ ಜನಕಪುರಿಯಲ್ಲಿ ಜನಿಸಿದ್ದರಿಂದ ಕಾಳಿಗಂಡಕಿ ನದಿಯ ಸಾಲಿಗ್ರಾಮ ಶಿಲೆಯನ್ನು ಮೊದಲಿಗೆ ಜನಕಪುರದ ಜಾನಕಿ ಮಂದಿರಕ್ಕೆ ತಂದು ಪೂಜೆ ಕೈಂಕರ್ಯ ನೆರವೇರಿಸಲಾಯಿತು. ನಂತರ ಶಿಲೆಗಳನ್ನು 6 ದಿನಗಳ ಯಾತ್ರೆ ಮೂಲಕ ಅಯೋಧ್ಯೆಗೆ ತರಲಾಗಿದೆ.
ರಾಮಮಂದಿರದ ಸುತ್ತಮುತ್ತಲಿನ ಒಟ್ಟು ಭೂಪ್ರದೇಶ 66 ಎಕರೆ ಭೂಪ್ರದೇಶಗಳನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಹಸ್ತಾಂತರಿಸುವ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದಕ್ಕೆ ಹೆಚ್ಚುವರಿಯಾಗಿ 42 ಎಕರೆ ಭೂಪ್ರದೇಶವನ್ನು ಸ್ಥಳೀಯರಿದ ಖರೀದಿಸಲು ತೀರ್ಥಕ್ಷೇತ್ರ ಟ್ರಸ್ಟ್ ಮುಂದಾಗಿದೆ. ಮಂದಿರ ನಿರ್ವಣದ ಬಳಿಕ ಬರುವ ಭಕ್ತಾದಿಗಳ ಸಂಖ್ಯೆ ದುಪ್ಪಟ್ಟಾಗಲಿರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದಲೂ ಸುತ್ತಮುತ್ತಲಿನ ನಿವಾಸಿಗರಿಂದ ಜಮೀನನ್ನು ಖರೀದಿಸಲು ತೀರ್ವನಿಸಲಾಗಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. 5 ಎಕರೆ ಜಾಗದಲ್ಲಿ ಮುಖ್ಯ ದೇವಾಲಯ ನಿರ್ವಣವಾಗಲಿದ್ದು, ಉಳಿದ ಭೂಮಿಯಲ್ಲಿ ವಸ್ತು ಸಂಗ್ರಹಾಲಯ, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಬಾಲರಾಮನ ಮೂರ್ತಿ?:ಕಳೆದ ಕೆಲವು ದಶಕಗಳಿಂದ ರಾಮಜನ್ಮಭೂಮಿಯಲ್ಲಿ ರಾಮನ ಸಣ್ಣ ವಿಗ್ರಹಕ್ಕೆ ಪೂಜೆ ನಡೆಯುತ್ತಿದೆ ಮತ್ತು ಯಾತ್ರಿಗಳು ಈ ವಿಗ್ರಹದ ದರ್ಶನ ಪಡೆಯುತ್ತಿದ್ದಾರೆ. ಆದರೆ, ಈ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಂದಿರದ ನೆಲಮಾಳಿಗೆಯಲ್ಲಿ ಬಾಲರಾಮನ ಗರ್ಭಗುಡಿಯಿದ್ದರೆ, 1ನೇ ಅಂತಸ್ತಿನಲ್ಲಿ ರಾಮನ ಪಟ್ಟಾಭಿಷೇಕ, ರಾಮ-ಸೀತಾಮಾತೆಯ ಮೂರ್ತಿಗಳೊಂದಿಗೆ ರಾಮದರ್ಬಾರ ದೃಶ್ಯಗಳನ್ನು ಕೆತ್ತಲಾಗುತ್ತದೆ. ಅದೇ ರೀತಿ ಶ್ರೀರಾಮನ ಕುಟುಂಬಸ್ಥರ ಮೂರ್ತಿ ಗಳನ್ನೂ ಇಲ್ಲಿ ನೆಲೆಗೊಳಿಸುವ ಉದ್ದೇಶವಿದೆ. ಸಾಲಿಗ್ರಾಮ ಶಿಲೆಗಳಲ್ಲಿ ರಾಮ-ಸೀತೆಯ ಮೂರ್ತಿ ಕೆತ್ತುವುದು ನಿಶ್ಚಿತ. ಆದರೆ, ಗರ್ಭಗೃಹದಲ್ಲಿರುವ ಬಾಲರಾಮನ ಮೂರ್ತಿ ಯನ್ನು ಕೂಡ ಇದೇ ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಾಣ ಮಾಡುತ್ತಾರೋ ಎಂಬ ಬಗ್ಗೆ ಖಚಿತತೆ ಇಲ್ಲ.
ಸಾಲಿಗ್ರಾಮ ಶಿಲೆಯೇ ಏಕೆ?
ಹಿಂದು ಪುರಾಣಗಳ ಪ್ರಕಾರ ಸಾಲಿಗ್ರಾಮ ಶಿಲೆಗಳು ನೂರಾರು ಮಿಲಿಯನ್ ವರ್ಷಗಳ ಹಿಂದಿನ ಅಮೋನೈಟ್ ಚಿಪ್ಪುಗಳ ಪಳೆಯುಳಿಕೆಗಳಾಗಿವೆ. ಈ ಪಳೆಯುಳಿಕೆಗಳನ್ನು ಹಿಂದುಗಳು ಪವಿತ್ರ ಎಂದು ಪರಿಗಣಿಸುತ್ತಾರೆ. ಮಧ್ವಾಚಾರ್ಯರು ಇದನ್ನು ವ್ಯಾಸದೇವನಿಂದ ಪಡೆದಿದ್ದರು. ಈ ಶಿಲೆಗಳು, ಮುಖ್ಯವಾಗಿ ಶಂಖವು ವಿಷ್ಣು ದೇವರಿಗೆ ಸಂಬಂಧಿಸಿದ್ದಾಗಿದೆ ಎಂದು ನಂಬಲಾಗಿದೆ. ರಾಕ್ಷಸ ಹಯಗ್ರೀವನನ್ನು ಸೋಲಿಸಲು ಭಗವಾನ್ ವಿಷ್ಣುವು ಸಾಲಿಗ್ರಾಮ ಕಲ್ಲಿನ ರೂಪ ಹೊಂದಿದ್ದ ಎಂದು ನಂಬಲಾಗಿರುವುದರಿಂದಲೇ ಇದು ಭಗವಾನ್ ವಿಷ್ಣುವಿನ ಶಕ್ತಿಯ ಸಂಕೇತ ಎಂದು ಪೂಜಿಸಲ್ಪಟ್ಟಿದೆ ಮತ್ತು ದೈವಿಕ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಪೂಜಿಸುವವರಿಗೆ ಸುಖ, ಸಮೃದ್ಧಿ ಮತ್ತು ದೇವರ ಆಶೀರ್ವಾದ ಸಿಗುವ ಜತೆಗೆ ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಸಾಧ್ಯ. ಶಿಲೆಯ ದೈವಿಕ ಗುಣಲಕ್ಷಣಗಳಿಂದ ದೇವಾಲಯದ ತುಂಬೆಲ್ಲಾ ಆಧ್ಯಾತ್ಮಿಕ ಶಕ್ತಿ ಪಸರಿಸುತ್ತದೆ ಎಂದು ನಂಬಲಾಗಿದೆ. ಶ್ರೀ ರಾಮನು ತ್ರೇತಾಯುಗದಲ್ಲಿ ಭಗವಾನ್ ವಿಷ್ಣುವಿನ ಅವತಾರವಾಗಿದ್ದ. ಇದಕ್ಕೆ ಪೂರಕವಾಗಿ ಸಾಲಿಗ್ರಾಮ ಶಿಲೆಗಳು ವಿಷ್ಣುವನ್ನು ಪ್ರತಿನಿಧಿಸುತ್ತವೆ. ಈ ಕಾರಣಕ್ಕಾಗಿಯೇ ಈ ಶಿಲೆಗಳನ್ನು ಕಾಳಿಗಂಡಕಿ ನದಿಯಿಂದ ತಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಕೆತ್ತಲು ಬಳಸಲಾಗುತ್ತಿದೆ.
ಪರ್ಯಾಯ ಕ್ರಮಗಳಿಗೂ ತಯಾರಿ
ಮೊದಲಿಗೆ ಶಿಲೆಗಳನ್ನು ಶಿಲ್ಪಿಗಳಿಗೆ ತೋರಿಸಲಾಗುವುದು ಎಂದು ಟ್ರಸ್ಟ್​ನ ಅಧ್ಯಕ್ಷ ಚಂಪತ್ ರಾಯ್ ತಿಳಿಸಿದ್ದಾರೆ. ಬಾಲರಾಮನನ್ನೂ ಸಾಲಿಗ್ರಾಮದಲ್ಲಿ ಕೆತ್ತಬೇಕು ಎನ್ನುವುದು ಟ್ರಸ್ಟ್ ಸದಸ್ಯರ ಆಶಯ. ಇದು ಸುಮಾರು 6 ಲಕ್ಷ ವರ್ಷಗಳಷ್ಟು ಹಳೆಯದಾಗಿದ್ದು, ಶಿಲಾ ತಜ್ಞರು ಪರಿಶೀಲಿಸಿ ಅಭಿಪ್ರಾಯ ತಿಳಿಸಲಿದ್ದಾರೆ. ಒಂದುವೇಳೆ ತಜ್ಞರು ಬಾಲರಾಮನ ಮೂರ್ತಿಗೆ ಈ ಕಲ್ಲು ಬೇಡ ಎಂದಲ್ಲಿ ಪರ್ಯಾಯ ಕ್ರಮಗಳಿಗೂ ಟ್ರಸ್ಟ್ ತಯಾರಿ ಮಾಡಿಕೊಂಡಿದೆ. ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಸೇರಿ 6 ಕಡೆಗಳಿಂದ ಕಲ್ಲುಗಳನ್ನು ತರಲಾಗಿದೆ. ಅವುಗಳಲ್ಲಿ ಯಾವುವು ಯೋಗ್ಯ ಎಂಬುದನ್ನು ಶಿಲ್ಪತಜ್ಞರು ಮತ್ತು ಕುಶಲಕರ್ವಿುಗಳು ತೀರ್ವನಿಸುತ್ತಾರೆ ಎಂದು ಟ್ರಸ್ಟ್​ನ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ನೇಪಾಳದ ಕೊಡುಗೆ
ರಾಮಮಂದಿರ ನಿರ್ವಣಗೊಳ್ಳುತ್ತಿದೆ ಎಂದು ಸಂತಸಗೊಂಡಿದ್ದ ನೇಪಾಳದ ಮಹಾಂತ ರಾಮತಪಸ್ವರದಾಸ ಸ್ವಾಮೀಜಿ, ಸೀತೆ ಜನಿಸಿದ ನಾಡಿನಿಂದ ಮಂದಿರಕ್ಕಾಗಿ ಏನನ್ನಾದರೂ ನೀಡುತ್ತೇವೆ ಎಂದು ಟ್ರಸ್ಟ್ ಬಳಿ ಹೇಳಿಕೊಂಡಿದ್ದರು. ನಂತರ, ರಾಮನಿಗೆ ಬಿಲ್ಲು-ಬಾಣಗಳನ್ನು ನೀಡುತ್ತೇವೆ ಎಂಬ ಪ್ರಸ್ತಾವವಿಟ್ಟಾಗ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ಕಾಳಿಗಂಡಕಿ ನದಿಯ ಸಾಲಿಗ್ರಾಮ ಶಿಲೆಗಳನ್ನು ನೀಡಬಹುದಲ್ಲವೇ ಎಂಬ ಸಲಹೆ ನೀಡಿದ್ದರು. ಈ ಸಲಹೆಯನ್ನು ನೇಪಾಳ ಸರ್ಕಾರ ಕೂಡ ಒಪ್ಪಿಕೊಂಡಿತು. ಭಾರತ-ನೇಪಾಳ ಸರ್ಕಾರಗಳ ಮಧ್ಯೆ ಮಾತುಕತೆಯಾಗಿ, ಕಾನೂನಿನ ಚೌಕಟ್ಟಿನಡಿಯಲ್ಲೇ ಶಿಲೆಗಳನ್ನು ಅಯೋಧ್ಯೆಗೆ ರವಾನಿಸಲಾಗಿದೆ. ನೇಪಾಳದ ಉಪ ಪ್ರಧಾನಿ ವಿಮಲೇಂದ್ರ ನಿಧಿ ಮೂಲತಃ ಜನಕಪುರಿಯವರಾದ್ದರಿಂದ ಸಾಲಿಗ್ರಾಮ ಶಿಲೆ ಕಳುಹಿಸಿಕೊಡುವ ಪ್ರಕ್ರಿಯೆಯೂ ಶೀಘ್ರದಲ್ಲಿ ಪೂರ್ಣಗೊಂಡಿತು. ಸದ್ಯ ಶಿಲೆಗಳು ನೆಲೆಗೊಂಡಿರುವ ಅಯೋಧ್ಯೆಯ ರಾಮಸೇವಕಪುರಂನಲ್ಲಿ ಭಾರತ-ನೇಪಾಳದ ರಾಷ್ಟ್ರಧ್ವಜಗಳು ರಾರಾಜಿಸುತ್ತಿವೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:16 + three =
Remember me
